Gold Price: ಚಿನ್ನದ ಬೆಲೆ 50,000 ರೂಪಾಯಿಗೆ ಮಹಾ ಕುಸಿತ...
ಚಿನ್ನ.. ಚಿನ್ನ.. ಚಿನ್ನ.. ಅಂತಾ ಕನಸಲ್ಲೂ ಚಿನ್ನದ ನೆನಪು ಮಾಡಿಕೊಳ್ಳುವ ಆಭರಣ ಪ್ರಿಯ ಮಹಿಳೆಯರಿಗೆ ಚಿನ್ನ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಆಘಾತ ನೀಡುತ್ತಿದೆ. ಅದ್ರಲ್ಲೂ ಚಿನ್ನದ ಬೆಲೆ ಇನ್ನೇನು 1 ಲಕ್ಷ ರೂಪಾಯಿ ತಲುಪುವ ಆತಂಕ ಕೂಡ ಮೂಡಿದ್ದು, ಇದನ್ನು ನೋಡಿ ಆಭರಣ ಪ್ರಿಯ ಮಹಿಳೆಯರೂ ಸೇರಿದಂತೆ ಚಿನ್ನ ಖರೀದಿ ಮಾಡಲು ಕಾಯುತ್ತಿದ್ದ ಜನ ಕಂಗಾಲಾಗಿದ್ದಾರೆ. ಆದರೆ ಇಂತಹ ಸಮಯದಲ್ಲೇ ಭರ್ಜರಿ ಸುದ್ದಿಯೊಂದು ಸಿಕ್ಕಿದೆ!
ಚಿನ್ನ ಖರೀದಿಗೆ ಕಾಯುತ್ತಿದ್ದ ಆಭರಣ ಪ್ರಿಯರಿಗೆ ಈಗ ಬಂಗಾರ ಬೆಲೆ ಏರಿಕೆ ಪರಿಣಾಮ ದೊಡ್ಡ ಚಿಂತೆ ಶುರುವಾಗಿತ್ತು. ಚಿನ್ನ ಬೆಲೆ ಇದೇ ರೀತಿ ಏರಿಕೆ ಕಾಣುತ್ತಾ ಹೋದರೆ ಮುಂದೆ ಏನಪ್ಪಾ? ಎಂಬ ಚಿಂತೆ ಕೂಡ ಆಭರಣ ಪ್ರಿಯರಲ್ಲಿ ಶುರುವಾಗಿತ್ತು. ಆದರೆ, ಈ ರೀತಿ ಚಿಂತೆ ಮಾಡುತ್ತಿದ್ದ ಚಿನ್ನ ಅಥವಾ ಆಭರಣ ಪ್ರಿಯರಿಗೆ ಈಗ ಭರ್ಜರಿ ಸುದ್ದಿ ಸಿಕ್ಕಿದೆ. ಅಂದಹಾಗೆ, ಸಿಕ್ಕಾಪಟ್ಟೆ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಗೆ ಲಗಾಮು ಬೀಳಲಿದೆ & ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ ಕಾಣುವುದು....

ಚಿನ್ನದ ಬೆಲೆ 50,000 ರೂಪಾಯಿಗೆ...
ಚಿನ್ನ ಭೂಮಿಯ ಮೇಲೆ ಸಿಗುವ ಭಾರಿ ಅಮೂಲ್ಯವಾದ ವಸ್ತು. ಇದೇ ಕಾರಣಕ್ಕೆ ಚಿನ್ನದ ಬೆಲೆ ಕೂಡ ಆಕಾಶ ಮುಟ್ಟುತ್ತದೆ. ಹೀಗಿದ್ದಾಗ ಚಿನ್ನದ ಬೆಲೆ 1 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ದಟ್ಟವಾಗಿತ್ತು, ಅಕಸ್ಮಾತ್ ಚಿನ್ನದ ಬೆಲೆ 1 ಲಕ್ಷ ರೂಪಾಯಿ ತಲುಪಿದರೆ ಬಡವರು ಬಂಗಾರ ಖರೀದಿ ಮಾಡುವುದು ಕಷ್ಟ ಕಷ್ಟ ಎನ್ನಲಾಗುತ್ತಿದೆ. ಇಂತಹ ಸಮಯದಲ್ಲೇ ಚಿನ್ನ ಬೆಲೆ ಕುಸಿತದ ಬಗ್ಗೆ ಭರ್ಜರಿ ಸುದ್ದಿ ಸಿಗುತ್ತಿದೆ, ಚಿನ್ನದ ಬೆಲೆ 50,000 ರೂಪಾಯಿಗೆ ಮಹಾ ಕುಸಿತ...
ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ...
ಹೌದು, ಚಿನ್ನದ ಬೆಲೆ ಇದೀಗ ಮುಗಿಲು ಮುಟ್ಟುವ ಸನಿಹದಲ್ಲಿದೆ. 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 86,610 ರೂಪಾಯಿ ಇದ್ದು, 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 100 ಗ್ರಾಂಗೆ 8,66,100 ರೂಪಾಯಿ ಇದೆ. ಹಾಗೇ ಆಭರಣ ಚಿನ್ನದ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ, ಪ್ರತಿ 10 ಗ್ರಾಂಗೆ 79,390 ರೂಪಾಯಿ ಇದೆ. ಹೀಗಾಗಿ ಇನ್ನೇನು ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗ್ಯಾರಂಟಿ ಎಂಬ ಭಯ ಕಾಡುತ್ತಿತ್ತು. ಆದರೆ ಇದೀಗ, ಚಿನ್ನ & ಬೆಳ್ಳಿ ಮಾರುಕಟ್ಟೆ ತಜ್ಞರು, ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಾಣುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಹೀಗಾಗಿ ಚಿನ್ನದ ಬೆಲೆ 50,000 ರೂಪಾಯಿಗೆ ಮಹಾ ಕುಸಿತ ಕಾಣುವ ನಿರೀಕ್ಷೆ ಮೂಡಿದೆ.
ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದರೂ ಬೆಳ್ಳಿ ಬೆಲೆಯಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ. ಮುಂದಿನ ಕೆಲವೇ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಾಣುವ ನಿರೀಕ್ಷೆ ಇದೀಗ ಮೂಡಿದೆ. ಇಂತಹ ಸಮಯದಲ್ಲೇ ಚಿನ್ನ ಖರೀದಿಗೆ ಕಾಯುತ್ತಿದ್ದ ಆಭರಣ ಪ್ರಿಯರು ಭಾರಿ ಖುಷಿಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಇರುವ ಡಿಮ್ಯಾಂಡ್ ಮುಂದೆ ಕಡಿಮೆ ಆಗುವ ನಿರೀಕ್ಷೆ ಇರುವ ಕಾರಣಕ್ಕೆ ಬೆಲೆ ಕುಸಿಯುವ ಬಗ್ಗೆ ಭವಿಷ್ಯ ನುಡಿಯಲಾಗಿದೆ.












Click it and Unblock the Notifications