Gold Price: ಚಿನ್ನದ ಬೆಲೆ 1 ಲಕ್ಷ ರೂಪಾಯಿ ಕಡೆಗೆ, ಆಭರಣ ಪ್ರಿಯರಿಗೆ ಆಘಾತ...
ಚಿನ್ನದ ಬೆಲೆ ಯಾವುದೇ ಹಿಡಿತಕ್ಕೆ ಸಿಗದೆ ಏರಿಕೆ ಕಾಣುತ್ತಿದೆ, ಚಿನ್ನದ ಬೆಲೆ ಏರಿಕೆ ಕಾಣುತ್ತಿರುವ ರೀತಿ ನೋಡಿ ಆಭರಣ ಪ್ರಿಯರಿಗೆ ಆಘಾತವೇ ಎದುರಾಗುತ್ತಿದೆ. ಅದರಲ್ಲೂ ಚಿನ್ನದ ಬೆಲೆಯು ಕಳೆದ 1 ವರ್ಷದಲ್ಲಿ ಆಕಾಶ ಮುಟ್ಟಿದ್ದು, ಬಡವರು & ಮಧ್ಯಮ ವರ್ಗದ ಜನರು ಚಿನ್ನದ ಖರೀದಿಗೆ ಚಿಂತೆ ಮಾಡುವಂತೆ ಆಗಿದೆ. ಇಂತಹ ಸಮಯದಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಚಿನ್ನ ಖರೀದಿ ಮಾಡಲು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಸಿಕ್ಕಿದೆ!
ಚಿನ್ನ... ಚಿನ್ನ... ಚಿನ್ನ... ಹೀಗೆ ಚಿನ್ನ ಅಂತಾ ಬಂಗಾರ ಖರೀದಿಗೆ ಕಾಯುತ್ತಿದ್ದ ಜನರಿಗೆ ಇಂದು ದೊಡ್ಡ ಆಘಾತ ಎದುರಾಗಿದೆ. ಒಂದೇ ದಿನ ಚಿನ್ನದ ಬೆಲೆ 7,600 ರೂಪಾಯಿ ಏರಿಕೆ ಕಂಡಿದೆ. ಚಿನ್ನ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಾ ಮುಂದೆ ನುಗ್ಗಿದೆ. ಚಿನ್ನ ಬೆಲೆಯಲ್ಲಿ ದಿಢೀರ್ ಏರಿಕೆ ಕಾರಣ ಆಭರಣ ಪ್ರಿಯ ಸಾಮಾನ್ಯ ಜನ ಕೂಡ ಸಾಕಷ್ಟು ಆಘಾತ ಎದುರಿಸಿದ್ದು, ಚಿನ್ನದ ಬೆಲೆಯು ಇನ್ನೇನು ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತದೆ ಎಂಬ ನಿರೀಕ್ಷೆಯಲ್ಲಿ ಜನ ಇರುವಾಗಲೇ ಮತ್ತೆ ಆಘಾತ ಎದುರಾಗಿದೆ. ಹೀಗಿದ್ದಾಗಲೇ, ಚಿನ್ನದ ಬೆಲೆ 1 ಲಕ್ಷ ರೂಪಾಯಿ ಕಡೆಗೆ, ಆಭರಣ ಪ್ರಿಯರಿಗೆ ಆಘಾತ...

7,600 ರೂಪಾಯಿ ಏರಿಕೆ ಕಂಡ ಚಿನ್ನ!
ಯುಗಾದಿ ಹಬ್ಬಕ್ಕೆ ಮೊದಲು ಆಭರಣ ಪ್ರಿಯರು ಬಂಗಾರ ಖರೀದಿಗೆ ಕಾಯುತ್ತಿದ್ದಾರೆ. ಬಂಗಾರ ಬೆಲೆಯಲ್ಲಿ ಹೀಗಿದ್ದಾಗ ಭಾರಿ ಕುಸಿತ ಆಗಲಿದೆ, ಅಂತಾನೇ ಜನ ಎದುರು ನೋಡುತ್ತಿದ್ದರು. ಆದ್ರೆ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇಂದು ಒಂದೇ ದಿನ 7,600 ರೂಪಾಯಿ ಏರಿಕೆ ಕಂಡಿದೆ ಚಿನ್ನ. ಹಾಗಾದ್ರೆ ಇಂದು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡ ನಂತರ ಚಿನ್ನ ಬೆಲೆ ಈಗ ಎಷ್ಟಿದೆ? ಚಿನ್ನದ ಬೆಲೆ ಇನ್ನೂ ಎಷ್ಟು ಏರಿಕೆ ಕಾಣಬಹುದು? ಮುಂದೆ ಓದಿ...
ಚಿನ್ನದ ಬೆಲೆ ಇಂದು ಇಷ್ಟಿದೆ!
24 ಕ್ಯಾರೆಟ್ ಚಿನ್ನ ಅಂದ್ರೆ ಶುದ್ಧ ಚಿನ್ನದ ಬೆಲೆಯು ಪ್ರತಿ 100 ಗ್ರಾಂಗೆ ಇದೀಗ 7,600 ರೂಪಾಯಿ ಏರಿಕೆ ಕಂಡಿದ್ದು, 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 100 ಗ್ರಾಂಗೆ ಇದೀಗ 8,73,800 ರೂಪಾಯಿಗೆ ತಲುಪಿದೆ. ಈ ಮೂಲಕ 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ ಈಗ 87,380 ರೂಪಾಯಿ ಆಗಿದೆ. ಹಾಗಿದ್ರೆ ಆಭರಣ ಚಿನ್ನದ ಬೆಲೆ ಇಂದು ಎಷ್ಟಾಗಿದೆ? ಮಾಹಿತಿ ಇಲ್ಲಿದೆ ಮುಂದೆ ಓದಿ.
22 ಕ್ಯಾರೆಟ್ ಚಿನ್ನ ಎಂದು ಕರೆಯಲಾಗುವ ಆಭರಣ ಚಿನ್ನದ ಬೆಲೆ 7,000 ರೂಪಾಯಿ ಏರಿಕೆ ಆಗಿದೆ. 22 ಕ್ಯಾರೆಟ್ ಚಿನ್ನ ಪ್ರತಿ 100 ಗ್ರಾಂಗೆ ಇದೀಗ 7,000 ರೂಪಾಯಿ ಏರಿಕೆಯನ್ನ ಕಂಡಿದ್ದು ಪ್ರತಿ 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 8,01,000 ರೂಪಾಯಿ ಆಗಿದೆ. ಹೀಗೆ 22 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂಗೆ 80,100 ಆಗಿದ್ದು, ಪ್ರತಿ 10 ಗ್ರಾಂಗೆ 700 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಕೂಡ ಏರಿದ್ದು, ಬೆಳ್ಳಿ ಬೆಲೆ ಇದೀಗ ಪ್ರತಿ 1 ಕೆ.ಜಿ.ಗೆ 1,000 ರೂಪಾಯಿ ಏರಿಕೆ ಕಾಣುವ ಮೂಲಕ 98,000 ರೂಪಾಯಿಗೆ ತಲುಪಿದೆ.












Click it and Unblock the Notifications