Gold Price: ಚಿನ್ನದ ಬೆಲೆ ದಿಢೀರ್ 10,000 ರೂಪಾಯಿ ಕುಸಿತ ಕಾಣುತ್ತಾ...
ಚಿನ್ನ.. ಚಿನ್ನ.. ಅಂತಾ ಮದುವೆ ಆಗುತ್ತಿರುವ ಜನರು & ಮದುವೆ ಆಗಲು ತಯಾರಿಯನ್ನ ನಡೆಸಿರುವ ಜನರು ಹಾಗೂ ಆಭರಣ ಪ್ರಿಯರು ಇದೀಗ ಪರದಾಡುತ್ತಿದ್ದಾರೆ. ಯಾಕೆ ಅಂದ್ರೆ ಬಂಗಾರ ಬೆಲೆ ಏರಿಕೆ ಕಾಣುತ್ತಿರುವ ರೀತಿ ನೋಡಿದರೆ, ಚಿನ್ನ ಖರೀದಿ ಮಾಡುವುದೇ ಮುಂದೆ ಕಷ್ಟವಾಗುತ್ತಾ? ಎಂಬ ಭಯ ಕೂಡ ಸೃಷ್ಟಿಯಾಗಿದೆ. ಹೀಗೆ ಚಿನ್ನದ ಬೆಲೆ ಏರಿಕೆ ಕಾಣ್ತಿರುವ ಸಮಯದಲ್ಲೇ, ಚಿನ್ನದ ಬೆಲೆ ದಿಢೀರ್ 10,000 ರೂಪಾಯಿ ಕುಸಿತ ಕಾಣುತ್ತಾ....
ಚಿನ್ನ ಬೆಲೆ ನವೆಂಬರ್ ಆರಂಭದಲ್ಲಿ ಭಾರಿ ಕುಸಿತ ಕಂಡಿತ್ತು. ಆದರೆ ಮದುವೆ ಸೀಸನ್ ಆರಂಭ ಆಗುತ್ತಿದ್ದಂತೆ ಚಿನ್ನ ಬೆಲೆ ಮತ್ತೆ ಭಾರಿ ಏರಿಕೆ ಕಂಡಿತ್ತು. ಹೀಗೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಭಾರಿ ಏರಿಕೆ ಕಾಣುತ್ತಿದ್ದ ಹಿನ್ನೆಲೆ ಆಭರಣ ಖರೀದಿ ಕಷ್ಟವಾಗಿತ್ತು. ಆಭರಣ ಪ್ರಿಯರು ಸೇರಿ ಈಗ ಮದುವೆ ಮಾಡಿಕೊಳ್ಳಲು ಕಾಯುತ್ತಿದ್ದವರಿಗೆ ಕೂಡ ಕಷ್ಟವಾಗಿತ್ತು ಚಿನ್ನ ಖರೀದಿ ಮಾಡುವುದು ಹೇಗಪ್ಪಾ? ಎಂಬ ಚಿಂತೆ ಶುರುವಾಗಿತ್ತು. ಆದರೆ ಇದೀಗ, ಚಿನ್ನದ ಬೆಲೆ ದಿಢೀರ್ 10,000 ರೂಪಾಯಿ ಕುಸಿತ ಕಾಣುತ್ತಾ....

ಚಿನ್ನದ ಬೆಲೆ ದಿಢೀರ್ 10,000 ರೂಪಾಯಿ....
ಚಿನ್ನದ ಬೆಲೆಯಲ್ಲಿ ಏರಿಕೆ & ಇಳಿಕೆ ಅಂತಾರಾಷ್ಟ್ರೀಯ ಘಟನೆಗಳ ಮೇಲೆ ನೇರ ಸಂಬಂಧ ಹೊಂದಿರುತ್ತದೆ. ಅದರಲ್ಲೂ ಜಾಗತಿಕವಾಗಿ ಯುದ್ಧಗಳು ಶುರುವಾದರೆ ಚಿನ್ನದ ಬೆಲೆ ಏರಿಕೆ ಹಾಗೂ ಬೆಳ್ಳಿಯ ಬೆಲೆ ಏರಿಕೆ ಗ್ಯಾರಂಟಿ ಹೀಗಿದ್ದಾಗ, ಇದೀಗ ಇಸ್ರೇಲ್ & ಲೆಬನಾನ್ ಮಧ್ಯೆ ಯುದ್ಧ ನಿಂತಿದೆ.
ಹಾಗೇ ಗಾಜಾ ಪಟ್ಟಿ & ಇಸ್ರೇಲ್ ನಡುವೆ ಕೂಡ ಯುದ್ಧ ನಿಲ್ಲುವ ಎಲ್ಲ ಲಕ್ಷಣ ಕಾಣುತ್ತಿದೆ. ಮತ್ತೊಂದು ಕಡೆ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಅಮೆರಿಕದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಹೀಗಿದ್ದಾಗ, ಚಿನ್ನದ ಬೆಲೆ ದಿಢೀರ್ 10,000 ರೂಪಾಯಿ ಕುಸಿತ ಕಾಣುತ್ತಾ?
ಚಿನ್ನ ಕುಸಿತ ಯಾವಾಗ ಆಗುತ್ತೆ?
ಹೌದು, ಚಿನ್ನದ ಬೆಲೆ ಇಳಿಕೆ ಬಗ್ಗೆ ಅಂತಾರಾಷ್ಟ್ರೀಯ ಚಿನ್ನ ಮಾರುಕಟ್ಟೆ ತಜ್ಞರು ಸ್ಫೋಟಕ ವಿಚಾರ ಬಿಚ್ಚಿಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಯುದ್ಧಗಳು ನಿಂತರೆ ಚಿನ್ನದ ಬೆಲೆ ಹಾಗೇ ಬೆಳ್ಳಿ ಬೆಲೆ ಕೂಡ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುವ ನಿರೀಕ್ಷೆ ಇದೆ ಎನ್ನಲಾಗಿದೆ. ಇದರ ನಡುವೆ ಭಾರತದಲ್ಲಿ ಮದುವೆಗಳ ಸೀಸನ್ ಇನ್ನು ಒಂದೆರಡು ವಾರದಲ್ಲಿ ಮುಗಿದು ಹೋಗಿ, ಚಿನ್ನ ಬೇಡಿಕೆ ಕುಸಿಯಲಿದೆ. ಹೀಗಾಗಿ ಚಿನ್ನದ ಬೆಲೆ ದಿಢೀರ್ 10,000 ರೂಪಾಯಿ ಪ್ರತಿ 10 ಗ್ರಾಂಗೆ ಕುಸಿತ ಕಾಣುವ ನಿರೀಕ್ಷೆ ಇದೆ ಎಂದು ಅಂದಾಜು ಮಾಡಲಾಗಿದೆ. ಡಿಸೆಂಬರ್ ಮೊದಲ ಅಥವಾ 2ನೇ ವಾರದಲ್ಲಿ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುವ ನಿರೀಕ್ಷೆ ಇದೆ.
ಚಿನ್ನದ ಬೆಲೆ ಈಗ ಎಷ್ಟಿದೆ?
22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು ಈಗ ಪ್ರತಿ 10 ಗ್ರಾಂಗೆ 71,060 ರೂಪಾಯಿಗೆ ಮಾರಾಟ ಆಗುತ್ತಿದೆ. ಅದರಲ್ಲೂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿತ ಸಾಧ್ಯತೆ ದಟ್ಟವಾಗಿದೆ. ಇನ್ನೊಂದು ಕಡೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 77,520 ರೂಪಾಯಿ ಪ್ರತಿ 10 ಗ್ರಾಂಗೆ ಮಾರಾಟ ಆಗುತ್ತಿದೆ. ಬೆಳ್ಳಿಯ ಬೆಲೆ ಪ್ರತಿ 1 ಕೆಜಿಗೆ ಬರೋಬ್ಬರಿ 89,500 ರೂಪಾಯಿ ಇದ್ದು, ಬೆಳ್ಳಿ ಬೆಲೆ ಕೂಡ ಕುಸಿದು ಬೀಳುವ ನಿರೀಕ್ಷೆ ದಟ್ಟವಾಗಿದೆ.
ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ!
ಚಿನ್ನ ಅನ್ನೋದು ಹೂಡಿಕೆ ಮಾಡುವವರಿಗೆ ಖಜಾನೆ ಎನ್ನುವಂತಾಗಿದೆ. ಯಾಕಂದ್ರೆ ಈ ಹಳದಿ ಲೋಹ ಅಂದರೆ ಚಿನ್ನದ ಮೇಲೆ ಹೂಡಿಕೆ ಮಾಡುವ ಯಾರಿಗೆ ಆದರೂ ಲಾಭ ಗ್ಯಾರಂಟಿ. ಹೀಗೆ ಚಿನ್ನ ಅನ್ನೋದು ಹೂಡಿಕೆದಾರರ ಜೇಬನ್ನು ತುಂಬಿಸುವ ಅಕ್ಷಯ ಪಾತ್ರೆ ಕೂಡ ಆಗಿದೆ. ಆದರೆ ಚಿನ್ನ ಇಷ್ಟಪಡುವ ಮಹಿಳೆಯರಿಗೆ ಈ ವರ್ಷ ಆಘಾತ ಎದುರಾಗುವುದು ಗ್ಯಾರಂಟಿ, ಅಂತಿದ್ದರು ತಜ್ಞರು. ಯಾಕಂದ್ರೆ ಚಿನ್ನದ ಬೆಲೆ ಇದೇ ವರ್ಷ 1 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ಇತ್ತು. ಹೀಗಿದ್ದಾಗಲೇ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡು ಬರುತ್ತಿದೆ!












Click it and Unblock the Notifications