Gold Price: ಚಿನ್ನದ ಬೆಲೆ ಶೀಘ್ರದಲ್ಲೇ 50 ಸಾವಿರ ರೂಪಾಯಿ?

ಚಿನ್ನ ಖರೀದಿ ಮಾಡಬೇಕು ಅಂತಾ ಕಾದು ಕುಳಿತ ಜನರಿಗೆ ಇದೀಗ ತಜ್ಞರು ಕೂಡ ಶುಭಸುದ್ದಿ ನೀಡಿದ್ದಾರೆ. ಚಿನ್ನದ ಬೆಲೆಯಲ್ಲಿ ಇಳಿಕೆ ಆಗಲಿ ಎಂದು ಕಾಯುತ್ತಿದ್ದವರಿಗೆ ಇದೀಗ ಹೊಸ & ಭರ್ಜರಿ ಸುದ್ದಿ ಸಿಕ್ಕಂತಾಗಿದೆ. ಚಿನ್ನದ ಬೆಲೆ ಮತ್ತೊಮ್ಮೆ ಕುಸಿತ ಕಂಡಿದ್ದು, ಶೀಘ್ರದಲ್ಲೇ ಈ ಹಳದಿ ಲೋಹ ಅಂದ್ರೆ ಚಿನ್ನದ ಬೆಲೆ 50 ಸಾವಿರ ರೂಪಾಯಿಗೆ ಕುಸಿತ ಕಾಣುತ್ತಾ? ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಹಾಗಾದ್ರೆ ಈ ಮಾತು ನಿಜವಾಗುತ್ತಾ? ತಜ್ಞರು ಹೇಳೋದು ಏನು? ಬನ್ನಿ ತಿಳಿಯೋಣ.

ಚಿನ್ನ ಖರೀದಿಗೆ ಜನರು ಕಾಯುತ್ತಿದ್ದಾರೆ, ಯಾಕಂದ್ರೆ ಇನ್ನುಮುಂದೆ ಶುಭ ಕಾರ್ಯಗಳನ್ನು ಆರಂಭ ಮಾಡಲಿದ್ದಾರೆ. ಆಷಾಢ ಮಾಸ ಶುರುವಾಗಿದ್ದು, ಇನ್ನೇನು ಜುಲೈ ತಿಂಗಳ ಅಂತ್ಯಕ್ಕೆ ಆಷಾಢ ಮಾಸ ಮುಗಿದು ಹೋಗಲಿದೆ. ಜುಲೈ 21ಕ್ಕೆ 2024ರ ಆಷಾಢ ಮಾಸ ಅಂತ್ಯವಾಗಲಿದೆ. ಆ ನಂತರ ಮದುವೆ, ನಿಶ್ಚಿತಾರ್ಥ, ನಾಮಕರಣ ಹೀಗೆ ಹತ್ತು ಹಲವು ಕಾರ್ಯಕ್ರಮ ಶುರು ಆಗಲಿವೆ. ಹೀಗಾಗಿ ಆಷಾಢ ಮಾಸ ಮುಗಿದ ತಕ್ಷಣ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬರಲಿದೆ.

Gold Price In Karnataka And Bengaluru On 2nd Of July 2024

ಚಿನ್ನ 50 ಸಾವಿರ ರೂಪಾಯಿಗೆ ಕುಸಿತ?

ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಯಾವತ್ತಿಗಾದರೂ ಅದರಿಂದ ಲಾಭ ಬಂದೇ ಬರುತ್ತೆ. ಹೀಗಿದ್ದರೂ 2024ರ ಆರಂಭದಲ್ಲಿ ಭರ್ಜರಿ ಲಾಭ ನೀಡಿದ್ದ ಚಿನ್ನದ ಬೆಲೆ ಇತ್ತೀಚೆಗೆ ಕುಸಿದಿದೆ. ಆಷಾಢದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಆಗುತ್ತಿದೆ. ಅದರಲ್ಲೂ ಇನ್ನೇನು ಈ ಚಿನ್ನದ ಬೆಲೆ 50 ಸಾವಿರ ರೂಪಾಯಿಗೆ ಕುಸಿತ ಕಾಣುತ್ತಾ? ಎಂಬ ಅನುಮಾನವೂ ಮೂಡಿದೆ. ನಿಮ್ಮ ಈ ಪ್ರಶ್ನೆಗೆ ಉತ್ತರ ಇಲ್ಲಿದೆ, ಹಾಗೇ ಇಂದಿನ ಚಿನ್ನ & ಬೆಳ್ಳಿ ಬೆಲೆ ಕೂಡ ಮುಂದೆ ಇದೆ ಓದಿ.

ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ?

ಶುದ್ಧ ಚಿನ್ನ ಅಥವಾ 24 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಆಗಿದ್ದು ಈಗ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 100 ರೂಪಾಯಿ ಕುಸಿತ ಕಂಡಿದೆ. ಹೀಗಾಗಿ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,22,700 ರೂಪಾಯಿ ಆಗಿದೆ. ಇದರ ಜೊತೆಗೆ, ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 72,270 ರೂಪಾಯಿಗೆ ಏರಿಕೆ ಆಗಿ, ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಇಳಕೆ ಕಂಡಿದೆ.

ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಇಳಿಕೆಯ ನಂತರ, ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ 66,240 ರೂಪಾಯಿಗೆ ಮಾರಾಟ ಆಗುತ್ತಿದೆ. ಈ ಮೂಲಕ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬರುತ್ತಿದೆ. ಹಾಗೇ ಬೆಳ್ಳಿ ಪ್ರತಿ ಕೆಜಿಗೆ 90,300 ರೂಪಾಯಿ ದರದಲ್ಲಿ ಇದೀಗ ಮಾರಾಟ ಆಗುತ್ತಿದ್ದು, ಬೆಳ್ಳಿ ಬೆಲೆಯಲ್ಲಿ ಮಾತ್ರ ಒಂದಷ್ಟು ಅಲ್ಪ ಏರಿಕೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಚಿನ್ನ & ಬೆಳ್ಳಿ ಬೆಲೆಯಲ್ಲಿ ಮತ್ತಷ್ಟು ಏರುಪೇರಾಗುವ ಸಾಧ್ಯತೆ ದಟ್ಟವಾಗಿದೆ.

ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಏರಿಕೆ!

ಕಳೆದ 15 ವರ್ಷಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿ ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಹಾಗೇ ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಇನ್ನೂ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲಾ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ. ಹೀಗಾಗಿ ಗಣಿಗಾರಿಕೆ ನಡೆಸುವ ಸಾಧ್ಯತೆ ಕೂಡ ಕ್ಷೀಣಿಸುತ್ತಿದೆ. ಇದು ಕೂಡ ಚಿನ್ನದ ಮೇಲೆ ಸಾಕಷ್ಟು ದೊಡ್ಡ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಚಿನ್ನದ ಬೆಲೆ ಈ ವರ್ಷದ ಅಂತ್ಯಕ್ಕೆ, 2 ಲಕ್ಷ ರೂಪಾಯಿ ಆಸುಪಾಸಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ತಜ್ಞರು.

ಹಳದಿ ಲೋಹ ಎಲ್ಲರಿಗೂ ಇಷ್ಟ!

ಚಿನ್ನ ಭಾರತೀಯರ ಪಾಲಿಗೆ ತುರ್ತು ಹಣ ಇದ್ದಂತೆ, ಯಾಕಂದ್ರೆ ಯಾವುದೇ ತುರ್ತು ಸ್ಥಿತಿ ಎದುರಾಗಿ ಪರದಾಟ ಶುರುವಾದರೂ ಭಾರತೀಯರು ಮೊದಲು ತಮ್ಮ ಬಳಿ ಇರುವ ಚಿನ್ನ, ಮತ್ತು ಬೆಳ್ಳಿ ಮೊರೆ ಹೋಗುತ್ತಾರೆ. ಯಾಕಂದ್ರೆ ತುರ್ತು ಪರಿಸ್ಥಿತಿಯಲ್ಲಿ, ಎಲ್ಲಿಯೂ ಹಣ ಸಿಗದೇ ಇದ್ದರೆ ನಮ್ಮ ಬಳಿ ಇರುವ ಚಿನ್ನ & ಬೆಳ್ಳಿಗೆ ಬೇಡಿಕೆ ಬಂದೇ ಬರುತ್ತದೆ. ಹೀಗಾಗಿಯೇ ಬಹುತೇಕ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಮತ್ತೊಂದು ಕಡೆ ಚಿನ್ನದ ಮೇಲೆ ಹೂಡಿಕೆ ಮಾಡುವ ಪ್ರತಿಯೊಬ್ಬರಿಗೂ, ಹಳದಿ ಲೋಹ ಬೆನ್ನೆಲುಬಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಹಳದಿ ಲೋಹ ಅಂದ್ರೆ ಚಿನ್ನ ಮತ್ತಷ್ಟು ಎತ್ತರಕ್ಕೆ ಹೋಗುವ ನಿರೀಕ್ಷೆ ದಟ್ಟವಾಗಿದೆ.

ಚಿನ್ನ ಅಮೂಲ್ಯ ವಸ್ತು, ಇದೇ ಕಾರಣಕ್ಕೆ ಚಿನ್ನಕ್ಕೆ ಅತ್ಯುನ್ನತ ಸ್ಥಾನ ನೀಡಿದ್ದ ನಮ್ಮ ಪೂರ್ವಿಕರು ಅದನ್ನು ಜೋಪಾನ ಮಾಡಿಕೊಂಡು ಬಂದರು. ಹೀಗಿದ್ದಾಗ ಈ ಆಧುನಿಕ ಕಾಲಘಟ್ಟದಲ್ಲಿ ಚಿನ್ನ & ಬೆಳ್ಳಿಗೆ ಮತ್ತಷ್ಟು ಮಹತ್ವ ಬಂದಿದೆ. ಅದರಲ್ಲೂ ಆಧುನಿಕ ಕಾಲದಲ್ಲಿ ಅತ್ಯಗತ್ಯ ಆಗಿರುವ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಗೂ ಚಿನ್ನ ಅತ್ಯಗತ್ಯ. ಆಭರಣ ಪ್ರಿಯರಿಗೂ ಚಿನ್ನದ ಮೇಲೆ ಪ್ರೀತಿ, ಇನ್ನು ಹೂಡಿಕೆ ಮಾಡುವವರಿಗೆ ಕೂಡ ಚಿನ್ನವೇ ಬೆಸ್ಟ್ & ಮೊದಲ ಆಯ್ಕೆ ಹೀಗೆ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಇರುವಾಗಲೇ ಈ ಹಳದಿ ಲೋಹ ಕುಸಿದು ಬೀಳುತ್ತಿದೆ.

ಆಭರಣ ಪ್ರಿಯರಿಗೆ ಚಿನ್ನವೇ ಚನ್ನ!

ಒಂದು ಕಡೆ ಹೂಡಿಕೆ ಮಾಡುವವರಿಗೆ ಚಿನ್ನದ ಬೆಲೆ ಹೆಚ್ಚಾದರೆ ಖುಷಿ ಆಗುತ್ತದೆ, ಆದರೂ ಸಾಮಾನ್ಯವಾಗಿ ಆಭರಣಗಳನ್ನ ಹೆಚ್ಚಾಗಿ ಇಷ್ಟಪಡುವ ಮಹಿಳೆಯರಿಗೆ ಚಿನ್ನದ ಬೆಲೆ ಕುಸಿದರೆ ಮಾತ್ರ ಸಂತಸವಾಗುತ್ತದೆ. ಹೀಗೆ ಚಿನ್ನದ ಬೆಲೆಯು ಕಳೆದ 1 ತಿಂಗಳಿಂದ ಭಾರಿ ಏರಿಳಿತವನ್ನು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಕುಸಿತ ಕಂಡು, ಆ ನಂತರದಲ್ಲಿ ಮತ್ತೆ ಏರಿಕೆಯ ಹಾದಿಗೆ ಮರಳುತ್ತದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಆಭರಣವನ್ನ ಕೊಳ್ಳುವವರಿಗೆ ಈ ತಿಂಗಳು ಮತ್ತಷ್ಟು ಸಿಹಿಸುದ್ದಿ ಸಿಗುವ ಸಾಧ್ಯತೆ ದಟ್ಟವಾಗಿದೆ.

5000 ವರ್ಷಗಳಿಂದ ಚಿನ್ನದ ಬಳಕೆ!

ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+