Gold Price Today: ಇಂದು ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಹೆಚ್ಚಳ, ಬೆಳ್ಳಿ ಬೆಲೆ? ಇಂದಿನ ದರಪಟ್ಟಿ
Gold Silver Price: ಚಿನ್ನಾಭರಣ ಪ್ರಿಯರಿಗೆ ಚಿನ್ನದ ದರವು ಸತತ ಹೆಚ್ಚಾಗುವ ಮೂಲಕ ಆಘಾತ ನೀಡಿದೆ. ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಏರಿಕೆ ಆಗಿದ್ದ ಚಿನ್ನದ ಬೆಲೆ ಆಗಸ್ಟ್ 30ರ ಶನಿವಾರವೂ ಸಹ ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿದೆ. ಚಿನ್ನ ಬೆಳ್ಳಿ ಬೆಲೆಯು ಇಂದು ಸಾವಿರ ಲೆಕ್ಕದಲ್ಲಿ ಏರಿಕೆ ಆಗಿದೆ. ಇಂದು ನಿಮ್ಮೂರಿನಲ್ಲಿ ಬೆಲೆ ಎಷ್ಟಿದೆ? ನಗರವಾರು ದರ ಪಟ್ಟಿ ಮಾಹಿತಿ ಇಲ್ಲಿದೆ.
ಆಭರಣ ಬಳಕೆಯ ಚಿನ್ನಕ್ಕೆ ಇಂದು ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ. 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯು 1500 ರೂಪಾಯಿ ಹೆಚ್ಚಾದರೆ, 100 ಗ್ರಾಂ ಬಂಗಾರಕ್ಕೆ ಬರೋಬ್ಬರಿ 15000 ರೂಪಾಯಿ ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ದಸರಾ, ದೀಪಾವಳಿ ಹಬ್ಬ ಎದುರಾಗುತ್ತಿದೆ. ವರ್ಷದ ಕೊನೆಗೂ ವಿವಾಹ ಸಂಭ್ರಮಗಳು ಜರುಗಲಿವೆ. ಮುಂಚಿತವಾಗಿ ಚಿನ್ನ ಖರೀದಿಸುವ ಪ್ಲಾನ್ ಹಾಕಿಕೊಂಡ ಗ್ರಾಹಕರಿಗೆ ಇಂದಿನ ಬೆಲೆ ಶಾಕ್ ನೀಡಿದೆ.

24 ಕ್ಯಾರಟ್ ಚಿನ್ನದ ಬೆಲೆಯು 10 ಗ್ರಾಂ 1,04, 950 ರೂಪಾಯಿಗೆ ಏರಿದೆ. ಅಂದರೆ ಒಂದೇ ದಿನಕ್ಕೆ 1640 ರೂಪಾಯಿ ಹೆಚ್ಚಾಗಿದೆ. ಇದೇ ಚಿನ್ನದ 100 ಗ್ರಾಂ ದರ ನೋಡುವುದಾದರೆ ಒಟ್ಟು 16,400 ರೂಪಾಯಿ ಹೆಚ್ಚಾದಂತಾಗಿದೆ. ಇತ್ತ ಬೆಳ್ಳಿಯ ದರವು ಹೆಚ್ಚಾಗಿದೆ. 1000 ಗ್ರಾಂ ಬೆಳ್ಳಿಗೆ 1,100 ಏರಿಕೆ ಆಗಿದೆ. ನೆನ್ನೆ 1,19,900 ರೂ. ಇದ್ದ ಬೆಳ್ಳಿಯ ದರವು ಇಂದು ₹1,21,000 ಕ್ಕೆ ಏರಿಕೆ ಆಗಿದೆ. ಇಂದು 100 ಬೆಳ್ಳಿಯ ದರ 12,100 ರೂಪಾಯಿ ಇದೆ.
ಕಳೆದ ಹತ್ತು ದಿನಗಳಲ್ಲಿ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯಲ್ಲಿ ಇಂದು ಒಂದೇ ದಿನ ಅತ್ಯಧಿಕ ಗರಿಷ್ಠ ಬೆಲೆ ಹೆಚ್ಚಾಗಿದೆ ಎಂದು ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ. ಎರಡು ವಾರಗಳಿಂದ ಏರಳಿತದಿಂದ ಕೂಡಿತ್ತು. ನಂತರ ನಿರಂತರವಾಗಿ ಇಳಿಕೆ ಕಂಡಿದ್ದ ಚಿನ್ನವು ಇಂದು ಐದನೇ ದಿನ ಭರ್ಜರಿಯಾಗಿ ಏರಿಕೆ ಆಗಿದೆ. ಭಾರತದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲೂ ದರ ಹೆಚ್ಚಾಗಿದೆ. ಹಾಗಾದರೆ ದೇಶದಲ್ಲಿ ನಗರವಾರು ಇಂದಿನ 10 ಗ್ರಾಂ ಚಿನ್ನದ ಬೆಲೆ ಮಾಹಿತಿ, ಪಟ್ಟಿ ಮುಂದಿದೆ.
ನಗರವಾರು 22k ಕ್ಯಾರಟ್ ಚಿನ್ನದ ಬೆಲೆ, ಅಪ್ಡೇಟ್ಸ್
* ಬೆಂಗಳೂರು: 96,200 ರೂಪಾಯಿ
* ಚೆನ್ನೈ: 96,200 ರೂಪಾಯಿ
* ದೆಹಲಿ: 96,350 ರೂಪಾಯಿ
* ಹೈದರಾಬಾದ್: 96,200 ರೂಪಾಯಿ
* ಕೋಲ್ಕತ್ತಾ: 96,200 ರೂಪಾಯಿ
* ಮುಂಬೈ: 96,200 ರೂಪಾಯಿ
24k ಕ್ಯಾರಟ್ ಚಿನ್ನದ ಬೆಲೆ, ವಿವರ
* ಬೆಂಗಳೂರು ₹1,04,900 ಅಥವಾ ₹1,03,335
* ಮುಂಬೈ ₹1,04,900 ಅಥವಾ ₹1,03,310
* ದೆಹಲಿ ₹1,04,200 ಅಥವಾ ₹1,03,493
* ಚೆನ್ನೈ ₹1,04,900 ಅಥವಾ ₹1,04,200
* ಹೈದರಾಬಾದ್ ₹1,04,900 ಅಥವಾ ₹1,04,060
* ಕೋಲ್ಕತ್ತಾ ₹1,04,900 ಅಥವಾ ₹1,03,760
* ಪುಣೆ ₹1,04,950 ಅಥವಾ ₹1,03,900












Click it and Unblock the Notifications