Gold Rate On June 7: ಭಾರೀ ಇಳಿಕೆ ಕಂಡ ಚಿನ್ನದ ದರ, ಎಷ್ಟಿದೆ ಇಂದಿನ ದರಗಳು?
ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಸದ್ಯ ಯಾವುದೇ ಹಬ್ಬಗಳು ಇಲ್ಲದೆ ಇರುವುದರಿಂದ ಚಿನ್ನ ಖರೀದಿಸಲು ಒಳ್ಳೆಯ ಸಮಯ ಎಂದುಕೊಂಡಿದ್ದವರಿಗೆ ಇದೀಗ ಕಾಲ ಕೂಡಿ ಬಂದಿದೆ. ಇತ್ತೀಚೆಗೆ ಭಾರಿ ಏರಿಕೆ ಕಂಡಿದ್ದ ಚಿನ್ನದ ದರವು ಇದೀಗ ದಿಢೀರ್ ಇಳಿಕೆ ಕಂಡಿದೆ. ಚಿನ್ನ ಖರೀದಿದಾರರು ಈ ವಿಚಾರ ಕೇಳಿ ಫುಲ್ ಖುಷಿಪಟ್ಟಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರ ಎಷ್ಟಿದೆ? ಎಂಬ ಸಂಪೂರ್ಣ ವಿವರ ಇಲ್ಲಿದೆ..
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 9,797 ರೂಪಾಯಿ, 22 ಕ್ಯಾರೆಟ್ ಚಿನ್ನಕ್ಕೆ ಗ್ರಾಂ.ಗೆ 8,980 ರೂಪಾಯಿ, 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂ.ಗೆ 7,348 ರೂಪಾಯಿ ಇದೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 9,960 ರೂಪಾಯಿಯಿಂದ 9,797 ರೂಪಾಯಿಗೆ ಕುಸಿತ ಕಂಡಿದೆ. 8 ಗ್ರಾಂ ಚಿನ್ನವು 78,376 ರೂಪಾಯಿ, 10 ಗ್ರಾಂ ಚಿನ್ನ 97,970 ಹಾಗೂ 100 ಗ್ರಾಂ.ಚಿನ್ನದ ದರ 9,79,700 ರೂ. ಆಗಿದ್ದು, 16,300 ರೂಪಾಯಿ ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9,130 ರೂಪಾಯಿಯಿಂದ 8,980 ರೂ.ಗೆ ಕಡಿಮೆಯಾಗಿದೆ. 8 ಗ್ರಾಂ. ಚಿನ್ನವು 71,840 ರೂಪಾಯಿ, 10 ಗ್ರಾಂ ಚಿನ್ನದ ದರ 89,800 ರೂಪಾಯಿ ಹಾಗೂ 100 ಗ್ರಾಂ ಚಿನ್ನವು 8,98,000 ರೂಪಾಯಿ ಇದೆ. ಬರೋಬ್ಬರಿ 15,000 ರೂಪಾಯಿಯಷ್ಟು ಕಡಿಮೆಯಾಗಿದೆ. 18 ಕ್ಯಾರೆಟ್ ಚಿನ್ನಕ್ಕೆ ಗ್ರಾಂಗೆ 7,348 ರೂಪಾಯಿಗೆ ಕುಸಿದಿದೆ. 8 ಗ್ರಾಂಗೆ 58,784 ರೂಪಾಯಿ, 10 ಗ್ರಾಂಗೆ 73,480 ರೂಪಾಯಿ ಹಾಗೂ 100 ಗ್ರಾಂಗೆ 7,34,800 ರೂಪಾಯಿ ಆಗಿದೆ. ನಿನ್ನೆಯ ದರ 7,47,000 ರೂಪಾಯಿ ಆಗಿದ್ದು, ಬರೋಬ್ಬರಿ 12,200 ರೂಪಾಯಿ ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ
ಜೂನ್ 7: ₹9,797 ; ₹8,980
ಜೂನ್ 6: ₹9,960 ; ₹9,130
ಜೂನ್ 5: ₹9,960 ; ₹9,130
ಜೂನ್ 4: ₹9,917 ; ₹9,090
ಜೂನ್ 3: ₹9,906 ; ₹9,080
ಜೂನ್ 2: ₹9,884 ; ₹9,060
ಜೂನ್ 1: ₹9,731 ; ₹8,920
ಮೇ 31: ₹9,731 ; ₹8,920
ಮೇ 30: ₹9,731 ; ₹8,920
ಮೇ 29: ₹9,704 ; ₹8,895
ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹107 ಮತ್ತು ಪ್ರತಿ ಕಿಲೋಗ್ರಾಂಗೆ ₹1,07,000 ಆಗಿದೆ. ಜನವರಿ ಆರಂಭದಿಂದಲೂ ಕಳೆದ ಕೆಲವು ತಿಂಗಳುಗಳಲ್ಲಿ ಬೆಲೆಗಳು ಏರಿಕೆಯಾಗಿವೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹3,226 ಮತ್ತು 10 ಗ್ರಾಂ.ಗೆ ₹32,260 ರೂಪಾಯಿ ಆಗಿದ್ದು, ಗ್ರಾಂ.ಗೆ 57 ರೂಪಾಯಿ ಏರಿಕೆ ಕಂಡಿದೆ.












Click it and Unblock the Notifications