ಚಿನ್ನದ ಬೆಲೆ ಇಳಿಮುಖ, ಆಭರಣ, ನಾಣ್ಯ ಖರೀದಿಗೆ ಸುಸಮಯ

ಬೆಂಗಳೂರು, ಡಿಸೆಂಬರ್ 13: ಚಿನಿವಾರ ಪೇಟೆ ಕಳೆದ ಏಳುದಿನಗಳಿಂದ ಯಾಕೋ ಸಕತ್ ಡಲ್ ಹೊಡೆಯುತ್ತಿದೆ. ಸತತವಾಗಿ ಚಿನ್ನದ ದರ ಇಳಿಮುಖ ಕಂಡಿದ್ದು, ಕಳೆದ ವಾರದಲ್ಲಿ 1000 ರುಗೂ ಅಧಿಕ ಬೆಲೆ ಕುಸಿದಿದೆ. ಚಿನ್ನಾಭರಣ ಖರೀದಿಗೆ ಇದು ಸುಸಮಯ.

ದೆಹಲಿ ಚಿನಿವಾರ ಪೇಟೆಯಲ್ಲಿ ಮಂಗಳವಾರದಂದು ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 180 ರು. ಕಡಿಮೆಯಾಗಿತ್ತು. ಅಪನಗದೀಕರಣ ಜಾರಿ ನಂತರ ನವೆಂಬರ್ 28,2016ರಲ್ಲಿ 16 ದಿನಗಳ ಕಾಲ ವ್ಯವಹಾರ ಸ್ಥಗಿತಗೊಂಡು ಬೆಲೆ ಸುಮಾರು 1,750 ರು ನಷ್ಟು ಕುಸಿತವಾಗಿತ್ತು. ಇದಾದ ಬಳಿಕ ಈಗ ಚಿನ್ನದ ಬೆಲೆ ಸತತ ಇಳಿಮುಖವಾಗಿದೆ.

 Gold Price Falls Rs 1,000 In Last 7 Days, 4 Month Low

ಶೇ. 99.9 ಅಪರಂಜಿ ಚಿನ್ನ ಪ್ರತಿ 10 ಗ್ರಾಂಗೆ 29,400 ರು. ಮತ್ತು ಶೇ. 99.5 ಶುದ್ಧತೆಯ ಚಿನ್ನ ಪ್ರತಿ 10 ಗ್ರಾಂಗೆ 29,250ರುಗೆ ಇಳಿದಿದೆ.

ಅದೇ ರೀತಿ ಬೆಳ್ಳಿ ಬೆಲೆಯಲ್ಲಿಯೂ ಕಡಿಮೆಯಾಗಿದೆ. ಬೆಳ್ಳಿ ಬೆಲೆ ಕೆ.ಜಿ.ಗೆ. 25 ರೂ. ಕಡಿಮೆಯಾಗಿದೆ. ಬೆಳ್ಳಿ ನಾಣ್ಯಗಳ ಬೆಲೆಯಲ್ಲಿ 1 ವಾರದಲ್ಲಿ 4000 ರೂ. ಕಡಿಮೆಯಾಗಿದೆ.

ಜಾಗತಿಕ ಮಾರುಕಟ್ಟೆ ಪರಿಣಾಮ ಮತ್ತು ದೇಶಿ ಮಾರುಕಟ್ಟೆಯಲ್ಲಿನ ಬೇಡಿಕೆ ಹಬ್ಬ ಹರಿದಿನ, ಮದುವೆ ಮುಂತಾದ ಶುಭ ಸಮಾರಂಭ, ಸರ್ಕಾರದ ಆರ್ಥಿಕ ನೀತಿಗೆ ಅನುಗುಣವಾಗಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಳಿತವಾಗುತ್ತದೆ.

ಈಗ ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿರುವ ಕಾರಣ ಚಿನ್ನ ಮತ್ತು ಬೆಳ್ಳಿ ನಾಣ್ಯದ ಬೆಲೆಯೂ ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 27, 240 ರೂ., 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 29,120 ರೂ. ಆಗಿದೆ.

ಬೆಂಗಳೂರಿನಲ್ಲಿ ಡಿಸೆಂಬರ್ 13ರಂದು 22 ಕ್ಯಾರೆಟ್ ಚಿನ್ನ ಪ್ರತಿ 10ಗ್ರಾಂ ಗೆ 27,200 ರು ಹಾಗೂ 24 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂಗೆ 29,080ರು ನಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+