Gold Price: ಆಭರಣ ಪ್ರಿಯರೇ ಗಮನಿಸಿ, ಇಂದು ಚಿನ್ನದ ಬೆಲೆ ಕುಸಿತ, ಬೆಳ್ಳಿ ದರ ಮತ್ತೆ ಹೆಚ್ಚಳ
ಬೆಂಗಳೂರು: ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ಬಂಗಾರದ ಬೆಲೆಯಲ್ಲಿ ಕುಸಿತವಾಗಿದೆ. ಇಳಿಕೆಯ ಹಾದಿ ಹಿಡಿದಿದ್ದು ಬೆಳ್ಳಿಯ ದರವು ಚೇತರಿಕೆ ಕಂಡಿದೆ. ಈ ಮೂಲಕ ಚಿನ್ನ ಪ್ರಿಯರಿಗೆ ಇವತ್ತಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಬೆಂಗಳೂರು ನಗರ ಸೇರಿ ಬೇರೆ ಬೇರೆ ಮಹಾನಗರಗಳಲ್ಲಿ ಎಷ್ಟಿದೆ ಬೆಲೆ, ಇಲ್ಲಿದೆ ವಿವರ.
ಅಪರಂಜಿ ಚಿನ್ನದ 24 ಕ್ಯಾರಟ್‌ನ ಹತ್ತು ಗ್ರಾಂ ಬೆಲೆಯು ಇಂದು (ಫೆಬ್ರವರಿ 12) ಗುರುವಾರ 1200 ರೂಪಾಯಿ ಇಳಿಕೆ ಕಾಣುವ ಮೂಲಕ 1,58,400 ರೂಪಾಯಿ ತಲುಪಿದೆ. ಅದೇ ರೀತಿ 10 ಗ್ರಾಂ 22 ಕ್ಯಾರಟ್ ಚಿನ್ನದ ದರವು 1100 ರೂ.ಕುಸಿಯುವ ಮೂಲಕ 1,45,200 ರೂ. ಮುಟ್ಟಿದೆ. ಇನ್ನೂ 18 ಕ್ಯಾರಟ್ ಚಿನ್ನದ ಹತ್ತು ಗ್ರಾಂ ಬೆಲೆ 900 ರೂ. ಕುಸಿತು ಅದರ ಒಟ್ಟು ದರವು 1,18,000 ರೂ. ಮುಟ್ಟಿದೆ ಎಂದು ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ.

ಬೆಳ್ಳಿ ದರ ಇಂದು 5000 ರೂ. ಏರಿಕೆ
ಫೆಬ್ರವರಿ 07ರಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಸ್ವಲ್ಪವೇ ಏರಿಕೆ ಆಗುತ್ತಾ ಬರುತ್ತಿದೆ. ಇಂದು ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗಿದೆ. ಈ ವರ್ಷಪೂರ್ತಿ ಏರಿಳಿತ ಮುಂದುವರಿಯಲಿದೆ. ಬೆಳ್ಳಿ ದರದಲ್ಲಿ ಇಂದು ಮತ್ತೆ ಹೆಚ್ಚಾಗಿದೆ. ಒಂದು ಕೆಜಿ ಬೆಳ್ಳಿಗೆ 5000 ರೂಪಾಯಿ ಹೆಚ್ಚಾಗಿದೆ. ಫೆಬ್ರವರಿ 11 ರಂದು ಯಥಾಸ್ಥಿತಿಯಲ್ಲಿದ್ದ ಬೆಳ್ಳಿಯು ಫೆ.10 ಮಂಗಳವಾರದಂದು 10,000 ಇಳಿಕೆ ಆಗಿದ್ದು, ಇಂದು ಮತ್ತೆ ಏರಿಕೆ ಆಗುವ ಮೂಲಕ ಗ್ರಾಹಕಾರಿಗೆ ಆಘಾತ ನೀಡಿದೆ.
ಇಂದಿನ ನಗರವಾರು ಚಿನ್ನದ 10 ಗ್ರಾಂ ಬೆಲೆ ಮಾಹಿತಿ
ಚೆನ್ನೈ: 14,600 ರೂಪಾಯಿ
ಮುಂಬೈ: 14,520 ರೂಪಾಯಿ
ದೆಹಲಿ: 14,535 ರೂಪಾಯಿ
ಕೊಲ್ಕತ್ತಾ: 14,520 ರೂಪಾಯಿ
ಬೆಂಗಳೂರು: 14,520 ರೂಪಾಯಿ
ಹೈದರಾಬಾದ್: 14,520 ರೂಪಾಯಿ
ಕೇರಳ: 14,520 ರೂಪಾಯಿ
ಪುಣೆ: 14,520 ರೂಪಾಯಿ
ವಡೋದರ: 14,525 ರೂಪಾಯಿ
ನಗರವಾರು 24 ಕ್ಯಾರಟ್ 10 ಗ್ರಾಂ ದರಪಟ್ಟಿ
ಚೆನ್ನೈ: 15,928 ರೂಪಾಯಿ
ಮುಂಬೈ: 15,840 ರೂಪಾಯಿ
ದೆಹಲಿ: 15,840 ರೂಪಾಯಿ
ಕೊಲ್ಕತ್ತಾ: 15,840 ರೂಪಾಯಿ
ಬೆಂಗಳೂರು: 15,840 ರೂಪಾಯಿ
ಹೈದರಾಬಾದ್: 15,851 ರೂಪಾಯಿ
ಕೇರಳ: 15,840 ರೂಪಾಯಿ
ಪುಣೆ:15,840 ರೂಪಾಯಿ
ವಡೋದರ: 15,845 ರೂಪಾಯಿ












Click it and Unblock the Notifications