Gold Price on March 1: ಬಂಗಾರ, ಬೆಳ್ಳಿ ದರ ಮತ್ತೆ ಇಳಿಕೆ: ನಿಮ್ಮೂರಲ್ಲಿ ಎಷ್ಟಿದೆ ತಿಳಿಯಿರಿ
Gold Price on March 1: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಮಾರ್ಚ್ 1) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಇಳಿಕೆಯಾಗಿದೆ. ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಗರವಾರು ಬಂಗಾರ ದರದ ವಿವರ: ನಿನ್ನೆ (ಫೆಬ್ರವರಿ 28) ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 79,600 ಇದ್ದರೆ, ಇಂದು (ಮಾರ್ಚ್ 1) 79,590 ಆಗಿದೆ. ಹಾಗೆಯೇ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 86,840 ಇತ್ತು. ಇನ್ನು ಇಂದು 86,830 ಆಗಿದೆ. ಹಾಗಾದರೆ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ, ಬೆಳ್ಳಿ ದರ ಪಟ್ಟಿ ಇಲ್ಲಿದೆ ಪರಿಶೀಲಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 63,672 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 69,464 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 79,590 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 86,830 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 79,590 ರೂಪಾಯಿ
* ಚೆನ್ನೈ - 79,590 ರೂಪಾಯಿ
* ಮುಂಬೈ - 79,590 ರೂಪಾಯಿ
* ಕೋಲ್ಕತ್ತಾ - 79,590 ರೂಪಾಯಿ
* ನವದೆಹಲಿ - 79,740 ರೂಪಾಯಿ
* ಹೈದರಾಬಾದ್ - 79,590 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 86,830 ರೂಪಾಯಿ
* ಚೆನ್ನೈ - 86,830 ರೂಪಾಯಿ
* ಮುಂಬೈ - 86,830 ರೂಪಾಯಿ
* ಕೋಲ್ಕತ್ತಾ - 86,830 ರೂಪಾಯಿ
* ನವದೆಹಲಿ - 86,980 ರೂಪಾಯಿ
* ಹೈದರಾಬಾದ್ - 86,830 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 96,900 ರೂಪಾಯಿ
* ಚೆನ್ನೈ - 1,04,900 ರೂಪಾಯಿ
* ಮುಂಬೈ - 96,900 ರೂಪಾಯಿ
* ಕೋಲ್ಕತ್ತಾ - 96,900 ರೂಪಾಯಿ
* ನವದೆಹಲಿ - 96,900 ರೂಪಾಯಿ
* ಹೈದರಾಬಾದ್ - 1,04,900 ರೂಪಾಯಿ
ಕಡಿಮೆಯಾಗದ ಬಂಗಾರ ಕೊಳ್ಳುವವರ ಸಂಖ್ಯೆ: ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಹಾಗೆಯೇ ಇದೀಗ ಇನ್ನೂ ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬ ಬರಲಿದ್ದು, ಈ ವೇಳೆ ಬಂಗಾರ, ಬೆಳ್ಳಿ ದರದರಲ್ಲಿ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಒಟ್ಟಿಯಲ್ಲಿ ಸಾಮಾನ್ಯ ದಿನಗಳಲ್ಲೂ ಸಹ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆಯಿರುವುದಿಲ್ಲ. ದರ ಕಡಿಮೆಯಿರಲಿ, ಬಿಡಲಿ ಆಭರಣಗಳನ್ನು ಕಷ್ಟದ ಕಾಲಕ್ಕೆ ಆಗುತ್ತವೆ ಎಂದು ಕೊಂಡುಕೊಳ್ಳುತ್ತಲೇ ಇರುತ್ತದೆ. ಇನ್ನೂ ಹಬ್ಬ, ಹರಿ ದಿನಗಳಲ್ಲಂತೂ ತುಸು ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಕೊಳ್ಳುತ್ತಾರೆ.












Click it and Unblock the Notifications