Gold Price on January 7: ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಗುಡ್‌ನ್ಯೂಸ್!
Gold Price on January 7: ದೇಶದ ಎಚ್‌ಎಂಪಿವಿ ವೈರಸ್‌ನ ಆತಂಕ ಹೆಚ್ಚಾಗುತ್ತಿದೆ. ಇದರ ನಡುವೆ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಆದರೆ ಅಚ್ಚರಿ ಎನ್ನುವಂತೆ ಚಿನ್ನದ ಬೆಲೆ ದಾಖಲಾಗಿದೆ. ಸಾಮಾನ್ಯವಾಗಿ ಅನಿಶ್ಚಿತತೆ ಅಥವಾ ಮಾರುಕಟ್ಟೆಯಲ್ಲಿ ಏರುಪೇರಾದರೆ ಮೊದಲು ಚಿನ್ನದ ಹೂಡಿಕೆ ಹೆಚ್ಚಾಗುತ್ತದೆ. ಕಳೆದ ಬಾರಿ ಕೋವಿಡ್ ಬಂದಾಗಲೂ ಇದೇ ಆಗಿತ್ತು. ಕಳೆದ ಬಾರಿ 2019ರಿಂದ 2021ರ ವರೆಗೆ ಚಿನ್ನದ ಬೆಲೆಯಲ್ಲಿ ಹಲವು ಪಟ್ಟು ವ್ಯತ್ಯಾಸವಾಗಿತ್ತು. ಆ ಸಮಯದಲ್ಲಿ ಲಾಕ್‌ಡೌನ್ ಸಂಕಷ್ಟಗಳು ಬಂದಾಗ ಜನರ ಕೈಹಿಡಿದಿದ್ದೇ ಚಿನ್ನ ಎನ್ನಬಹುದು. ಆದರೆ ಇದೀಗ ಮತ್ತೆ ಎಚ್‌ಎಂಪಿವಿ ವೈರಸ್ ಆತಂಕ ಎದುರಾಗಿದೆ. ಮತ್ತೆ ಚಿನ್ನದ ಬೆಲೆ ಏರಿಕೆಯಾಗುತ್ತಾ ಎಂದು ಚಿನ್ನ ಪ್ರಿಯರು ನೋಡುತ್ತಿದ್ದರು. ಚಿನ್ನ ಪ್ರಿಯರು ಸಮಾಧಾನಪಡುವಂತೆ ಚಿನ್ನದ ಬೆಲೆ ಇದೆ. ಹಾಗಾದರೆ ಜನವರಿ 7ರ ಚಿನ್ನದ ಬೆಲೆ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.
ಚಿನ್ನದ ಬೆಲೆ ಕಳೆದ ವರ್ಷ ದಾಖಲೆಯ ಬೆಲೆಯಲ್ಲಿ ಹೆಚ್ಚಳವಾಗಿತ್ತು. 2023 -2024ನೇ ಸಾಲಿನಲ್ಲಿ ಹಲವು ಬಾರಿ ಚಿನ್ನದ ಬೆಲೆ ಹೆಚ್ಚಳವಾಗಿತ್ತು. ಕಳೆದ ಒಂದು ವಾರದಿಂದ ಚಿನ್ನದ ಬೆಲೆ ಹೆಚ್ಚು ಕಡಿಮೆ ಪ್ರತಿ ಗ್ರಾಂಗೆ 7,800 ಹಾಗೂ 8,000 ಸಾವಿರ ರೂಪಾಯಿಯ ಒಳಗೆಯೇ ಇದೆ. ಅಚ್ಚರಿಯೆಂದರೆ ಸೋಮವಾರ ಹಾಗೂ ಮಂಗಳವಾರದ ಚಿನ್ನದ ಬೆಲೆಯಲ್ಲಿ ಹೆಚ್ಚೇನು ಬದಲಾವಣೆಗಳು ಆಗಿಲ್ಲ.

ಚಿನ್ನದ ಬೆಲೆ ಹೆಚ್ಚಾಗುವ ಆತಂಕ: ದೇಶದಲ್ಲಿ ಹೊಸ ವೈರಸ್ ಭಾರೀ ಆತಂಕ ಸೃಷ್ಟಿ ಮಾಡಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಷೇರುಮಾರುಕಟ್ಟೆಯ ಮೇಲೆ ಹೊಡೆತ ಬಿದ್ದಿದೆ. ಎಚ್‌ಎಂಪಿವಿ ವೈರಸ್‌ನ ಆತಂಕ ಹಾಗೂ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿಗಳಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಒಂದು ಕಡೆ ಹೊಸ ವೈರಸ್ ಭೀತಿ ಇದ್ದರೆ ಇನ್ನೊಂದು ಕಡೆ ವಿಶ್ವದ ಹಲವು ರಾಷ್ಟ್ರಗಳ ನಡುವೆ ಸಂಬಂಧ ಬೂದಿಮುಚ್ಚಿದ ಕೆಂಡದಂತೆ ಇದೆ.
ಒಂದೊಮ್ಮೆ ವೈರಸ್ ಭೀತಿ ಹೆಚ್ಚಳವಾದರೆ ಅಥವಾ ವೈರಸ್‌ನಿಂದ ಸಮಸ್ಯೆ ಹೆಚ್ಚಾದರೆ ಅದರ ಹೊಡೆತ ಮೊದಲು ಆರ್ಥಿಕತೆಯ ಮೇಲೆ ಹಾಗೂ ಎರಡನೇಯದಾಗಿ ಚಿನ್ನದ ಮೇಲೆ ಆಗಲಿದೆ. ಹೀಗಾಗಿ ಜನ ಈಗ ಖರೀದಿ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಚಿನ್ನವನ್ನು ಅಡಮಾನ ಅಥವಾ ಚಿನ್ನದ ಮೇಲೆ ಸಾಲ ತೆಗೆದುಕೊಳ್ಳುವುದನ್ನು ಮುಂದೂಡುತ್ತಿದ್ದಾರೆ.
ಇನ್ನು ಇಂದಿನ (ಜನವರಿ 7ರ) ಚಿನ್ನದ ಬೆಲೆ ನೋಡುವುದಾದರೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 72,150 ರೂಪಾಯಿ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 78,710 ಇದೆ. ಅಲ್ಲದೆ ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 59,030 ರೂಪಾಯಿ ಆಗಿದೆ. ಇನ್ನು ಪ್ರತಿ 1 ಗ್ರಾಂ ಚಿನ್ನದ ಬೆಲೆಯು 22 ಕ್ಯಾರೆಟ್ 7,215 ರೂಪಾಯಿ ಇದೆ. 24 ಕ್ಯಾರೆಟ್ ಚಿನ್ನದ ಬೆಲೆಯು 7,871 ರೂಪಾಯಿ ಆಗಿದೆ. ಇನ್ನು ಉಳಿದಂತೆ 18 ಕ್ಯಾರೇಟ್ ಚಿನ್ನದ ಬೆಲೆಯು ಪ್ರತಿ 1 ಗ್ರಾಂಗೆ 5,903 ರೂಪಾಯಿ ಇದೆ. ಇನ್ನು ಇಂದಿನ (ಜನವರಿ 7ರ) ಚಿನ್ನದ ಬೆಲೆ ನೋಡುವುದಾದರೆ, ಚಿನ್ನದ ಬೆಲೆಯಲ್ಲಿ ಸೋಮವಾರ (ಜನವರಿ 6) ಹಾಗೂ ಮಂಗಳವಾರಕ್ಕೂ ವ್ಯತ್ಯಾಸವಾಗಿಲ್ಲ. ಚಿನ್ನದ ಬೆಲೆ ಯಥಾಸ್ಥಿತಿ ಮುಂದುವರಿದಿದೆ.
ಬೆಳ್ಳಿ ಬೆಲೆ ಏರಿಕೆ: ಇನ್ನು ಬೆಳ್ಳಿಯ ಬೆಲೆಯಲ್ಲೂ ಹೇಳಿಕೊಳ್ಳುವಂತಹ ಬದಲಾವಣೆಗಳು ಆಗಿಲ್ಲ. ಬೆಳ್ಳಿ ಬೆಲೆಯು ಬೆಂಗಳೂರಿನಲ್ಲಿ 1 ಗ್ರಾಂಗೆ 1 ರೂಪಾಯಿ ಹೆಚ್ಚಳವಾಗಿದೆ. 1 ಗ್ರಾಂ ಬೆಳ್ಳಿಯ ಬೆಲೆ ಇದೀಗ 92.50 ರೂಪಾಯಿ ಇದೆ. ಪ್ರತಿ ಕೆಜಿಗೆ 92,500 ರೂಪಾಯಿ ಇದೆ.












Click it and Unblock the Notifications