Gold Price on December: ಚಿನ್ನದ ಬೆಲೆ ₹1.50 ಲಕ್ಷ ತಲುಪುತ್ತಾ? ಇಲ್ಲಿದೆ ಮಾಹಿತಿ, ಇಂದಿನ ಚಿನ್ನದ ದರಪಟ್ಟಿ
Gold price today: ಚಿನ್ನ-ಬೆಳ್ಳಿ ಬೆಲೆಯಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ದಿನಕ್ಕೊಂದು ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಾಗುತ್ತಲೆ ಇದೆ. ಇಂದು ಡಿಸೆಂಬರ್ 10ರಂದು ಚಿನ್ನದ ದರವು ವ್ಯಾಪಕವಾಗಿದೆ ಹೆಚ್ಚಾಗಿದೆ. ಎಷ್ಟೆಂದರೆ ನೆನ್ನೆಗಿಂತ ಇಂದು ಹೆಚ್ಚು ಪ್ರಮಾಣದಲ್ಲಿ ದರ ಹೆಚ್ಚಾಗಿದ್ದು, ಗ್ರಾಹಕ ನಿದ್ದೆಗೆಡಿಸಿದೆ. ಇಂದು 24k, 22k ಮತ್ತು ಬೆಳ್ಳಿ ದರವು ಎಷ್ಟಿದೆ, ನಗರವಾರು ಮಾಹಿತಿ, ದರಪಟ್ಟಿ ಇಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆಗಳು ಅಂತರರಾಷ್ಟ್ರೀಯ ಸ್ಪಾಟ್ ಚಿನ್ನದ ದರಗಳು, ಯುಎಸ್ ಡಾಲರ್, ವಿದೇಶದಲ್ಲಿ ಹೂಡಿಕೆ ಹಾಗೂ ಹಿಂತೆಗೆತ, ಖರೀದಿಯ ಮೇಲೆ ಅವಲಂಬಿತವಾಗಿರುತ್ತದೆ. ಅಲ್ಲದೇ ಬಂಗಾರದ ಮೇಲಿನ ಆಮದು ಸುಂಕಗಳು ಸೇರಿದಂತೆ ದೈನಂದಿನ ಬೆಳವಣಿಗೆ ಆಧಾರದಲ್ಲಿ ಒಂದು ದಿನ ಏರಿಕೆ ಮತ್ತೊಂದು ದಿನ ಇಳಿಕೆ ಆಗುತ್ತಿದೆ. ಚಿನ್ನ ಬೆಲೆಯು ಇತ್ತೀಚಿನ ವಾರಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಾದರೆ ಕನಿಷ್ಠ ಪ್ರಮಾಣದಲ್ಲಿ ಇಳಿಕೆ ಆಗುತ್ತಿರುವುದು ಕಳವಳಕಾರಿ ಎಂದು ಗ್ರಾಹಕರು ಹೇಳುತ್ತಿದ್ದಾರೆ.

ಆರ್ಥಿಕ ತಜ್ಞರ ಅಂದಾಜಿನ ಪ್ರಕಾರ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಹಾಗೂ ಬೆಳ್ಳಿ ದರ ದುಪ್ಪಟ್ಟು ಆಗಲಿದೆ. ಸಣ್ಣ ಪ್ರಮಾಣದ ಇಳಿಕೆ ಜೊತೆಗೆ ಗಗನಕ್ಕೇರಲಿದೆ. ಚಿನ್ನ 1.50 ರೂಪಾಯಿಗೆ ಹೆಚ್ಚಾಗುವುದು ಖಚಿತ ಎನ್ನಲಾಗುತ್ತಿದೆ. ಇದು ದಿಢೀರ್ ಹೆಚ್ಚಾಗಬಹುದು. ಇಲ್ಲವೇ ಹಂತ ಹಂತವಾಗಿ ಏರಿಕೆ ಕಾಣಬಹುದು. ಇದರೊಂದಿಗೆ ಬೆಳ್ಳಿಯ ದರ ಒಂದು ಕೆಜಿಗೆ ಎರಡು ಲಕ್ಷ ರೂಪಾಯಿ ದಾಟಲಿದೆ ಎಂದು ಹೇಳಲಾಗುತ್ತಿದೆ.
ಇಂದು 24 ಕ್ಯಾರಟ್ ಚಿನ್ನದ ಬೆಲೆ 1,30,310 ರೂಪಾಯಿ ಇದೆ. ಇವತ್ತು ಒಂದೇ ದಿನಕ್ಕೆ 10 ಗ್ರಾಂ ಚಿನ್ನದಕ್ಕೆ ಬರೋಬ್ಬರಿ 870 ರೂಪಾಯಿ ಏರಿಕೆ ಆಗಿದೆ. ಸೋಮವಾರ 270 ರೂಪಾಯಿ ಏರಿಕೆ ಆಗಿದ್ದು, ಮಂಗಳವಾರ 330 ರೂಪಾಯಿ ಹೆಚ್ಚಾಗಿತ್ತು. ಈ ಬೆಳವಣಿಗೆ ಹೀಗೆ ಮುಂದುವರಿದರೆ ಇನ್ನೇನು ಕೆಲವೇ ವಾರಗಳಲ್ಲಿ 1.50 ಲಕ್ಷ ರೂಪಾಯಿಗೆ ತಲುಪಿದರು ಅಚ್ಚರಿ ಇಲ್ಲ.
22 ಕ್ಯಾರಟ್ 10 ಗ್ರಾಂ ಬಂಗಾರದ ಬೆಲೆ ಇಂದು 800 ರೂ. ಹೆಚ್ಚಾಗಿದ್ದು, 18,650 ರೂಪಾಯಿಯಿಂದ 19,450 ರೂಪಾಯಿಗೆ ಏರಿದೆ. ಇಂದು ಚಿನ್ನ ಖರೀದಿಸುವ ಗ್ರಾಹಕರ ಜೀಬಿಗೆ ಕತ್ತರಿ ಬಿದ್ದಿದೆ. ಮಧ್ಯಮ ವರ್ಗದವರು ಮದುವೆ ಇತರ ಸಮಾರಂಭಗಳಿಗೆ ಚಿನ್ನ ಖರೀದಿಸುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಚಿನ್ನ ಮಾತ್ರವಲ್ಲದೇ ಇಂದು ಬೆಳ್ಳಿಯ ದರದಲ್ಲೂ ಭಾರೀ ಏರಿಕೆ ಆಗಿದೆ. 100 ಗ್ರಾಂ ಚಿನ್ನದ ಬೆಲೆಯು 900 ರೂಪಾಯಿಗೆ ಏರಿಕೆ ಆಗಿದೆ. ಅಂದರೆ 01 ಕೆಜಿ ಚಿನ್ನಕ್ಕೆ 9000 ರೂಪಾಯಿ ಏರಿಕೆ ಕಂಡಂತಾಗಿದೆ. ನೆನ್ನೆಯಷ್ಟೇ 100 ಗ್ರಾಂಗೆ 100 ರೂಪಾಯಿ ಮತ್ತು ಒಂದು ಕೆಜಿಗೆ 1000 ರೂ. ಮಾತ್ರ ಏರಿಕೆ ಆಗಿತ್ತು. ಬೆಳ್ಳಿ ದರ ಹೆಚ್ಚಳವು ಬಂಗಾರಕ್ಕೆ ಪೈಪೋಟಿ ನೀಡುವಂತಿದೆ. ನಗರವಾರು ಚಿನ್ನದ ಮಾಹಿತಿ ಇಲ್ಲಿದೆ..
22 ಕ್ಯಾರಟ್ 10 ಗ್ರಾಂ ಚಿನ್ನದ ದರಪಟ್ಟಿ
ಬೆಂಗಳೂರು: 11,945 ರೂಪಾಯಿ
ದೆಹಲಿ: 11,960 ರೂಪಾಯಿ
ಕೋಲ್ಕತಾ: 11,945 ರೂಪಾಯಿ
ಚೆನ್ನೈ: 12,030 ರೂಪಾಯಿ
ಮುಂಬೈ: 11,945 ರೂಪಾಯಿ
ಜೈಪುರ್: 11,960 ರೂಪಾಯಿ
ಲಕ್ನೋ: 11,960 ರೂಪಾಯಿ
ಭುವನೇಶ್ವರ್: 11,945 ರೂಪಾಯಿ
ಕೇರಳ: 11,945 ರೂಪಾಯಿ
ಅಹ್ಮದಾಬಾದ್: 11,950 ರೂಪಾಯಿ












Click it and Unblock the Notifications