ತಗ್ಗಿದ ಬೇಡಿಕೆ, ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆ
ನವದೆಹಲಿ, ಜೂನ್ 17: ಸ್ಥಳೀಯ ಆಭರಣ ತಯಾರಕರಿಂದ ತಗ್ಗಿದ ಬೇಡಿಕೆ, ಜಾಗತಿಕ ಟ್ರೆಂಡ್ ಗೆ ತಕ್ಕಂತೆ ಚಿನ್ನದ ದರದಲ್ಲಿ ಸೋಮವಾರ(ಜೂನ್ 17) ದಂದು ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ರಾಜಧಾನಿ ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 100 ರೂಪಾಯಿ ಇಳಿಕೆಯಾಗಿ 33,620ರು ಪ್ರತಿ 10ಗ್ರಾಂನಂತೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ವರದಿ ನೀಡಿದೆ.
ಚಿನ್ನದ ಬೆಲೆ ವ್ಯತ್ಯಾಸಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆ, ಯುಎಸ್ ಹಾಗೂ ಚೀನಾ ನಡುವಿನ ತಿಕ್ಕಾಟ ಹಾಗೂ ಸ್ಥಳೀಯ ಆಭರಣ ತಯಾರಕರು ಚಿನ್ನದ ಖರೀದಿಯಲ್ಲಿ ಹೆಚ್ಚಿನ ಆಸಕ್ತಿ ತೋರದಿರುವುದೇ ಬೆಲೆ ಇಳಿಕೆಗೆ ಎಂದು ಎಐಎಸ್ಎ ಹೇಳಿದೆ.
ಇದೇ ವೇಳೆ ಬೆಳ್ಳಿ ಬೆಲೆ ಕೂಡಾ ಇಳಿಕೆ ಕಂಡಿದ್ದು, 10 ರು ತಗ್ಗಿದ್ದು 38,090 ಪ್ರತಿ 1 ಕೆಜಿಯಂತೆ ಮಾರಾಟ ಕಂಡಿದೆ. ನಾಣ್ಯ ತಯಾರಕರು, ಕೈಗಾರಿಕೆಗಳಿಂದ ಬೇಡಿಕೆ ಇಳಿಮುಖವಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಜಾಗತಿಕವಾಗಿ ಚಿನ್ನದ ಬೆಲೆ ಇಳಿಮುಖವಾಗಿದ್ದು, ನ್ಯೂಯಾರ್ಕ್ ನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,333.90 ಡಾಲರ್ ನಷ್ಟಿದೆ. ಬೆಳ್ಳಿ ಬೆಲೆ 14.85 ಡಾಲರ್ ಪ್ರತಿ ಔನ್ಸ್ ಆಗಿದೆ. (ಪಿಟಿಐ)

ದೆಹಲಿಯಲ್ಲಿ 99.9% ಪರಿಶುದ್ಧ ಚಿನ್ನದ ಬೆಲೆ
ದೆಹಲಿಯಲ್ಲಿ 99.9% ಪರಿಶುದ್ಧ ಚಿನ್ನ ಹಾಗೂ 99.5% ಪರಿಶುದ್ಧ ಚಿನ್ನ ಬೆಲೆ ಕ್ರಮವಾಗಿ 100 ರು ಇಳಿಕೆಯಾಗಿ 10 ಗ್ರಾಂಗೆ 33,620ರು ಹಾಗೂ 33, 450ರು ಪ್ರತಿ 10ಗ್ರಾಂ ನಂತೆ ಮಾರಾಟ ಕಂಡಿದೆ. ಶನಿವಾರದಂದು ಚಿನ್ನದ ಬೆಲೆ 150 ರು ತಗ್ಗಿ, 10 ಗ್ರಾಂಗೆ 33,720ನಂತೆ ಮಾರಾಟವಾಗಿತ್ತು.
ಸವರನ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ, 8 ಗ್ರಾಂಗೆ 26,800ರು ನಷ್ಟಿದೆ. ಬೆಳ್ಳಿ ನಾಣ್ಯಗಳು 100ಕ್ಕೆ 80,000ರು ಖರೀದಿಗೆ ಹಾಗೂ 81,000 ರು ಮಾರಾಟಕ್ಕೆ ದರ ಪಡೆದುಕೊಂಡಿವೆ.

ಕಳೆದ 4 ದಿನಗಳಲ್ಲಿ ಬೆಂಗಳೂರಲ್ಲಿ ಚಿನ್ನ ಬೆಳ್ಳಿ ದರ
ಕಳೆದ 4 ದಿನಗಳಲ್ಲಿ ಬೆಂಗಳೂರಲ್ಲಿ ಚಿನ್ನ ಬೆಳ್ಳಿ ದರ
ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಜೂನ್ 17 : 30,850 (22 ಕ್ಯಾರೆಟ್), 33,650 (24 ಕ್ಯಾರೆಟ್)
ಜೂನ್ 15: 30,900 ಹಾಗೂ 33,700
ಜೂನ್ 14: 30,900 ಹಾಗೂ 33,700
ಜೂನ್ 13: 30,600 ಹಾಗೂ 33,330
ಬೆಳ್ಳಿದರ
ಬೆಳ್ಳಿ 1 ಕೆಜಿ ರುಗಳಲ್ಲಿ
ಜೂನ್ 17 : 39,550
ಜೂನ್ 15: 39,550
ಜೂನ್ 14: 39,450
ಜೂನ್ 13: 39,550
***

ಕಳೆದ 4 ದಿನಗಳಲ್ಲಿ ಚೆನ್ನೈನಲ್ಲಿ ಚಿನ್ನ ಬೆಳ್ಳಿ ದರ
ಕಳೆದ 4 ದಿನಗಳಲ್ಲಿ ಚೆನ್ನೈನಲ್ಲಿ ಚಿನ್ನ ಬೆಳ್ಳಿ ದರ
ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಜೂನ್ 17 : 31,480 (22 ಕ್ಯಾರೆಟ್), 33,380 (24 ಕ್ಯಾರೆಟ್)
ಜೂನ್ 15: 31,480 ಹಾಗೂ 33,380
ಜೂನ್ 14: 31,450 ಹಾಗೂ 33,350
ಜೂನ್ 13: 31,180 ಹಾಗೂ 33,080
ಬೆಳ್ಳಿದರ
ಬೆಳ್ಳಿ 1 ಕೆಜಿ ರುಗಳಲ್ಲಿ
ಜೂನ್ 17 : 39,550
ಜೂನ್ 15: 39,550
ಜೂನ್ 14: 39,450
ಜೂನ್ 13: 39,550
***

ಕಳೆದ 4 ದಿನಗಳಲ್ಲಿ ಮುಂಬೈನಲ್ಲಿ ಚಿನ್ನ ಬೆಳ್ಳಿ ದರ
ಕಳೆದ 4 ದಿನಗಳಲ್ಲಿ ಮುಂಬೈನಲ್ಲಿ ಚಿನ್ನ ಬೆಳ್ಳಿ ದರ
ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಜೂನ್ 17 : 32,350 (22 ಕ್ಯಾರೆಟ್), 33,350(24 ಕ್ಯಾರೆಟ್)
ಜೂನ್ 15: 32,150 ಹಾಗೂ 33,150
ಜೂನ್ 14: 32,150 ಹಾಗೂ 33,150
ಜೂನ್ 13: 32,150 ಹಾಗೂ 33,150
ಬೆಳ್ಳಿದರ
ಬೆಳ್ಳಿ 1 ಕೆಜಿ ರುಗಳಲ್ಲಿ
ಜೂನ್ 17 : 39,550
ಜೂನ್ 15: 39,550
ಜೂನ್ 14: 39,450
ಜೂನ್ 13: 39,550
***












Click it and Unblock the Notifications