Silver Price: ಬೆಳ್ಳಿ ದರದಲ್ಲಿ ಇಂದು ರೂ.10,000 ಕುಸಿತ, ಚಿನ್ನದ ಬೆಲೆ ಎಷ್ಟಿದೆ?

ಬೆಂಗಳೂರು: ಗ್ರಾಹಕರು ಹಾಗೂ ಹೂಡಿಕೆದಾರರು ನಿರಂತರವಾಗಿ ಕೆಲವು ವಾರಗಳಿಂದ ಚಿನ್ನ-ಬೆಳ್ಳಿ ದರದ ಮೇಲಾಗುತ್ತಿರುವ ಏರಿಕೆ ಹಾಗೂ ಇಳಿಕೆ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ. ಇವುಗಳ ದರದಲ್ಲಿ ಏರಿಳಿತ ಇವತ್ತಿಗೂ ಮುಂದುವರಿದಿದೆ. ಇಂದು ಮಂಗಳವಾರ (ಫೆಬ್ರವರಿ 10) ಬೆಳ್ಳಿ ದರದಲ್ಲಿ ಮತ್ತೆ ಕುಸಿತವಾಗಿದೆ. ಒಂದು ಕೆಜಿ ಬೆಳ್ಳಿಗೆ 10,000 ರೂಪಾಯಿ ಇಳಿಕೆ ಆಗಿದೆ.

ಜಾಗತಿಕ ಆರ್ಥಿಕ ಅನಿಶ್ಚಿತೆ, ವಿದೇಶಿ ಸಂಕ ನೀತಿ, ಅಂತಾರಾಷ್ಟ್ರೀಯ ಕೇಂದ್ರ ಬ್ಯಾಂಕ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿ, ಕೈಗಾರಿಕೆ ಉದ್ದೇಶಕ್ಕೆ ಹೆಚ್ಚಾದ ಬೆಳ್ಳಿ ಬಳಕೆ ಹಾಗೂ ಮತ್ತಿತರ ಕಾರಣಗಳಿಂದ ಈ ಎರಡು ಲೋಹಗಳ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆ ಆಗಿದ್ದರಿಂದ ಬೆಲೆಗಳು ದಿಢೀರ್ ಏರಿಕೆ ಕಂಡಿದ್ದವು, ಇದೀಗ ಇಳಿಮುಖ ಮಾಡಿವೆ.

Gold and Silver Rates

ಇಂದು 1ಕೆಜಿ ಬೆಳ್ಳಿ ದರ ಎಷ್ಟಿದೆ?

ಕಳೆದ ಹತ್ತು ದಿನಗಳಲ್ಲಿ ಚಿನ್ನ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದರೂ ನಡುವೆ ಒಂದೊಂದು ದಿನ ಏರಿಕೆಯ ಹಾದಿ ಹಿಡಿದಿದೆ. ನೆನ್ನೆ ಸೋಮವಾರ (ಫೆಬ್ರವರಿ 09) ಹೆಚ್ಚಾಗಿದ್ದ ಚಿನ್ನದ ಬೆಲೆಯು ಇಂದು ಯಥಾಸ್ಥಿತಿಯಲ್ಲಿದೆ. ಆದರೆ ಬೆಳ್ಳಿ ದರ ಮತ್ತೆ ಕುಸಿದಿದೆ. 1 ಕೆಜಿ ಬೆಳ್ಳಿ ದರವು 10 ಸಾವಿರ ರೂಪಾಯಿ ಇಳಿಕೆ ಆಗುವ ಮೂಲಕ ದರವು 2,90,000 ರೂ. ತಲುಪಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ ಮತ್ತಷ್ಟು ಇಳಿಕೆ ಆಗುವ ನಿರೀಕ್ಷೆಗಳು ಇವೆ.

ಇಂದಿನ ಚಿನ್ನ ಬೆಲೆ ಮಾಹಿತಿ

ಯಥಾಸ್ಥಿತಿಯಲ್ಲಿರುವ 22 ಕ್ಯಾರಟ್ 10 ಗ್ರಾಂ ದರವು ಇಂದು 1,47,550 ರೂಪಾಯಿ ಇದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಬಂಗಾರದ ಬೆಲೆಯು 1,57,910 ರೂಪಾಯಿಗೆ ಇಳಿದಿದೆ. 18 ಕ್ಯಾರಟ್ ಚಿನ್ನದ ಹತ್ತು ಗ್ರಾಂ ಬೆಲೆಯು ಇಂದು 1,18,440 ರೂಪಾಯಿ ಮುಟ್ಟಿದೆ. ಈ ದರ ಇಳಿಕೆಯು ಆಭರಣ ಖರೀದಿದಾರರಿಗೆ ಸಂತಸ ನೀಡಿದೆ. ಆದರೆ ಹೆಚ್ಚಿನ ಲಾಭದ ಆಸೆಗೆ ಚಿನ್ನ-ಬೆಳ್ಳಿ ಮೇಲೆ ಹೂಡಿಕೆ ಮಾಡಿದ ಹೂಡಿಕೆದಾರರಿಗೆ ನಿರಾಸೆ ಮೂಡಿಸಿದೆ. ದರ ಇಳಿಕೆಯು ಅವರ ನಗು ಕಸಿದಿದೆ.

ಬೆಳ್ಳಿ ಬಂಗಾರದ ಮಾರುಕಟ್ಟೆ ಪೂರೈಕೆಯಲ್ಲಿ ಕೊರತೆ ಇದೆ. 2026ರಲ್ಲಿ ಬೆಳ್ಳಿಯ ಪೂರೈಕೆ ಕೊರತೆ ಮತ್ತಷ್ಟು ಹೆಚ್ಚಾಗಲಿದ್ದು, ದರ ಮತ್ತೆ ಹೆಚ್ಚಾಗಲಿದೆ ಎಂದು ಊಹಿಸಲಾಗಿತ್ತು. ಅದರೆ ಬದಲಾದ ಸಂದರ್ಭದಲ್ಲಿ ದರ ಇಳಿಕೆ ಆಗಿದೆ. ವಿದೇಶದಲ್ಲಿನ ಚಿನ್ನ, ಬೆಳ್ಳಿ ಗಣಿಗಾರಿಕೆಯಿಂದ ದೈನಂದಿನ ಉತ್ಪಾದನೆ ಇಳಿಕೆ ಆಗುತ್ತಿದೆ. ಮತ್ತೊಂದೆಡೆ ಬೇಡಿಕೆ, ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಪೂರೈಕೆ ಕಡಿಮೆ ಆಗಿ ದಿಢೀರ್ ಬೆಲೆಯಲ್ಲಿ ವ್ಯಾತ್ಯಾಸವಾಗಿದೆ. ಹಲವು ಆರ್ಥಿಕ ತಜ್ಞರು ಚಿನ್ನ ಬೆಳ್ಳಿ ದರ ಮತ್ತಷ್ಟು ಇಳಿಕೆ ಆಗುವ ಮುನ್ಸೂಚನೆ ಇದೆ. ಆದ್ದರಿಂದ ಸದ್ಯ ಹೂಡಿಕೆ ಅಷ್ಟು ಸುರಕ್ಷಿತ ಮತ್ತು ಲಾಭದಾಯಕ ಅಲ್ಲ ಎಂದು ಎಚ್ಚರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+