ನವರಾತ್ರಿಗೆ ಒಡವೆ ಖರೀದಿಸುವ ಪ್ಲಾನ್ ಇದೆಯಾ? ಹಾಗಾದ್ರೆ ಇಲ್ಲಿದೆ ಇಂದಿನ ನಿಖರವಾದ ಬಂಗಾರ-ಬೆಳ್ಳಿ ದರ

ನಾಳೆಯಿಂದ ನವರಾತ್ರಿ ಹಬ್ಬ ಶುರುವಾಗಲಿದೆ. ಮನೆ ಮನಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಈ ವಿಶೇಷ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಹೊಸ ಒಡವೆಗಳನ್ನು ಖರೀದಿಸುವ ಆಸೆ ಇರುವುದು ಸಹಜ. ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆ, ಮಾರುಕಟ್ಟೆಯಲ್ಲಿ ಆಭರಣಗಳ ಬೇಡಿಕೆ ವಿಪರೀತವಾಗಿ ಹೆಚ್ಚಾಗುತ್ತದೆ.

ಈ ಶುಭ ಸಮಾರಂಭದಲ್ಲಿ ಚಿನ್ನ ಮತ್ತು ಬೆಳ್ಳಿ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತವೆ. ಹಬ್ಬದ ಪ್ರಯುಕ್ತ ಶುಭ ಘಳಿಗೆಯಲ್ಲಿ ಚಿನ್ನ, ಬೆಳ್ಳಿ ಖರೀದಿಸುವ ಪ್ಲಾನ್ ಮಾಡುತ್ತಿರುವವರಿಗೆ ಇಂದಿನ (ಅಕ್ಟೋಬರ್ 10, 2026) ನಿಖರವಾದ ಬೆಲೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

Gold and Silver Rate Today October 10 2026 MCX Prices In Bengaluru And India s Other Cities

ಜಾಗತಿಕ ಮಾರುಕಟ್ಟೆಯ ಆಗುಹೋಗುಗಳು ಹಾಗೂ MCX ವಹಿವಾಟುಗಳ ಪ್ರಭಾವದಿಂದಾಗಿ ಪ್ರತಿದಿನ ಚಿನ್ನ ಹಾಗೂ ಬೆಳ್ಳಿಯ ದರಗಳಲ್ಲಿ ಏರಿಳಿತಗಳು ಆಗುತ್ತಲೇ ಇರುತ್ತವೆ. ಇಂದು ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಜ್ಯುವೆಲರಿ ಶಾಪ್‌ಗಳಿಗೆ ಭೇಟಿ ನೀಡುತ್ತಿದ್ದಾರೆ.

ಮಾರುಕಟ್ಟೆಯ ಇಂದಿನ ಟ್ರೆಂಡ್ ಪ್ರಕಾರ ಬೆಲೆಗಳಲ್ಲಿ ಕೊಂಚ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ನಿನ್ನೆಯ ದರಕ್ಕೆ ಹೋಲಿಸಿದರೆ ಇಂದಿನ ಚಿನ್ನದ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ನಿನ್ನೆ ಪ್ರತಿ 1 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 13,815 ರೂಪಾಯಿ ಇತ್ತು. ಆದರೆ ಇಂದು ಮಾರುಕಟ್ಟೆ ಆರಂಭವಾದಾಗ ಚಿನ್ನದ ಬೆಲೆ ಕೊಂಚ ಏರಿಕೆಯಾಗಿ ಪ್ರತಿ 1 ಗ್ರಾಂ 22 ಕ್ಯಾರಟ್ ಚಿನ್ನದ ದರ 13,880 ರೂಪಾಯಿಗಳಿಗೆ ತಲುಪಿದೆ. ಅಂದರೆ ಪ್ರತಿ 1 ಗ್ರಾಂ ಚಿನ್ನದ ಮೇಲೆ 65 ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಹಾಗೆಯೇ ಬೆಳ್ಳಿ ಬೆಲೆಯಲ್ಲೂ ಕೊಂಚ ಬದಲಾವಣೆಗಳಾಗಿದ್ದು, ಹಬ್ಬದ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆ ಪ್ರತಿಕ್ರಿಯಿಸುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಈ ಕೆಳಗಿನಂತಿದೆ:

* ಬೆಂಗಳೂರು - 13,880 ರೂಪಾಯಿ

* ದೆಹಲಿ - 13,895 ರೂಪಾಯಿ

* ಚೆನ್ನೈ - 13,880 ರೂಪಾಯಿ

* ಮುಂಬೈ - 13,880 ರೂಪಾಯಿ

* ಹೈದರಾಬಾದ್ - 13,880 ರೂಪಾಯಿ

* ಅಹಮದಾಬಾದ್ - 13,885 ರೂಪಾಯಿ

* ಪುಣೆ - 13,880 ರೂಪಾಯಿ

* ಕೋಲ್ಕತ್ತಾ - 13,880 ರೂಪಾಯಿ

ಹಬ್ಬದ ಋತುವಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಡಾಲರ್ ಮೌಲ್ಯ, ಹಣದುಬ್ಬರದ ಅಂಕಿ-ಅಂಶಗಳು ಹಾಗೂ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಈ ದರವನ್ನು ನಿರ್ಧರಿಸುತ್ತವೆ.

ಗಮನಿಸಿ: ಈ ಮೇಲಿನ ದರಗಳು ಮೂಲ ದರಗಳಾಗಿದ್ದು , ಜ್ಯುವೆಲರಿ ಖರೀದಿಸಲು ಜಿಎಸ್‌ಟಿ ಮತ್ತು ಮೇಕಿಂಗ್‌ ಜಾರ್ಜ್‌ಸ್‌ ಸೇರ್ಪಡೆಯಾಗಿರುತ್ತದೆ. ಹಾಗಾಗಿ ಈ ಮೇಲಿನ ಮೂಲ ದರದಲ್ಲಿ ಸ್ವಲ್ಪ ಬದಲಾವಣೆಯಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+