ಆಭರಣ ಪ್ರಿಯರಿಗೆ ಬಂಪರ್ ಆಫರ್! ತಿಂಗಳಾಂತ್ಯದಲ್ಲೇ ಕುಸಿದ ಬಂಗಾರದ ಬೆಲೆ: ನಿಮ್ಮ ನಗರದಲ್ಲೆಷ್ಟಿದೆ ಗೊತ್ತಾ?
ತಿಂಗಳ ಕೊನೆಯ ದಿನವಾದ ಇಂದು ಚಿನ್ನ ಬೆಳ್ಳಿ ದರ ಹೇಗಿದೆ ಎಂದು ತಿಳಿಯುವ ಕುತೂಹಲವೇ? ಮದುವೆ ಸೀಸನ್ ಆಗಿರಲಿ ಅಥವಾ ಮುಂಬರುವ ಹಬ್ಬ ಹರಿದಿನಗಳಿರಲಿ, ನಮ್ಮ ಜನರಿಗೆ ಚಿನ್ನದ ಮೇಲಿನ ವ್ಯಾಮೋಹ ಎಂದಿಗೂ ಕಡಿಮೆಯಾಗುವುದಿಲ್ಲ.
ಆದರೆ ದಿನೇ ದಿನೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುತ್ತಿರುವ ಬೆಳವಣಿಗೆಗಳು, ಷೇರುಪೇಟೆಯ ಏರಿಳಿತಗಳು ಚಿನ್ನದ ದರದ ಮೇಲೆ ನೇರ ಪರಿಣಾಮ ಬೀರುತ್ತಿವೆ. ಹಾಗಾದರೆ ಇಂದು (ಆಗಸ್ಟ್ 31, 2026) ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ಓದಿ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಜಾಗತಿಕ ವಿದ್ಯಮಾನಗಳು ಹಾಗೂ ಕಮಾಡಿಟಿ ಮಾರುಕಟ್ಟೆಯ ವಹಿವಾಟಿನಲ್ಲಿನ ಬದಲಾವಣೆಗಳು ಚಿನ್ನದ ಬೆಲೆ ಇಳಿಕೆಗೆ ಮುಖ್ಯ ಕಾರಣವಾಗಿದೆ.
ಇಂದಿನ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 1 ಗ್ರಾಂಗೆ 14,370 ರೂಪಾಯಿ ದಾಖಲಾಗಿದೆ. ಅದೇ ರೀತಿ, ಶುದ್ಧ ಚಿನ್ನ ಅಂದರೆ 24 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ 15,677 ರೂಪಾಯಿ ಆಗಿದೆ. ಇನ್ನು ನಮ್ಮ ಬಡವರ ಬಂಗಾರ ಎಂದೇ ಕರೆಯಲ್ಪಡುವ ಬೆಳ್ಳಿಯ ದರ ಬೆಂಗಳೂರಿನಲ್ಲಿ 1 ಗ್ರಾಂಗೆ 255 ರೂಪಾಯಿ ಹಾಗೂ 1 ಕೆ.ಜಿ ಬೆಳ್ಳಿಗೆ 2,55,000 ರೂಪಾಯಿ ಇದೆ.
ಚಿನ್ನದ ಬೆಲೆಯನ್ನ ನಿನ್ನೆ ಮತ್ತು ಇಂದಿನ ದರಕ್ಕೆ ಸ್ವಲ್ಪ ಹೋಲಿಕೆ ಮಾಡಿ ನೋಡಿದರೆ ಗ್ರಾಹಕರಿಗೆ ತುಸು ರಿಲೀಫ್ ಸಿಕ್ಕಿದೆ ಎನ್ನಬಹುದು. ನಿನ್ನೆ (ಆಗಸ್ಟ್ 30) ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 14,505 ರೂಪಾಯಿ ಇತ್ತು. ಇಂದು ಅದು 14,370 ರೂಪಾಯಿಗೆ ಇಳಿಕೆಯಾಗಿದ್ದು, ಪ್ರತಿ ಗ್ರಾಂ ಮೇಲೆ 135 ರೂಪಾಯಿಗಳಷ್ಟು ಕಡಿಮೆಯಾಘಿದೆ. ಅಂತೆಯೇ 24 ಕ್ಯಾರೆಟ್ ಚಿನ್ನದ ದರ ನಿನ್ನೆ 15,824 ರೂ. ಇತ್ತು, ಇಂದು ಅದು 147 ರೂಪಾಯಿ ಇಳಿಕೆ ಕಂಡು 15,677 ರೂಪಾಯಿಗೆ ತಲುಪಿದೆ.
ಆದರೆ ಬೆಳ್ಳಿ ಬೆಲೆಯಲ್ಲಿ ನಿನ್ನೆಗೂ ಇಂದುಗೂ ಯಾವುದೇ ಬದಲಾವಣೆಯಾಗಿಲ್ಲ, ನಿನ್ನೆಯಂತೆಯೇ 1 ಗ್ರಾಂ ಬೆಳ್ಳಿ ದರ 255 ರೂಪಾಯಿಯಲ್ಲಿಯೇ ಸ್ಥಿರವಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ (1 ಗ್ರಾಂ) ಚಿನ್ನದ ಬೆಲೆ ಪಟ್ಟಿ:
1. ಬೆಂಗಳೂರು - 14,370 ರೂಪಾಯಿ
2. ದೆಹಲಿ - 14,385 ರೂಪಾಯಿ
3. ಚೆನ್ನೈ - 14,370 ರೂಪಾಯಿ
4. ಮುಂಬೈ - 14,370 ರೂಪಾಯಿ
5. ಹೈದರಾಬಾದ್ - 14,370 ರೂಪಾಯಿ
6. ಅಹಮದಾಬಾದ್ - 14,375 ರೂಪಾಯಿ
7. ಪುಣೆ - 14,370 ರೂಪಾಯಿ
8. ಕೋಲ್ಕತ್ತಾ - 14,370 ರೂಪಾಯಿ
ಪ್ರಸ್ತುತ ಮಾರುಕಟ್ಟೆಯಲ್ಲಿ ನಿನ್ನೆಗಿಂತ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿರುವುದು ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಸಣ್ಣ ಖುಷಿ ತಂದಿದೆ. ಆದ್ರೆ ಮುಂದಿನ ದಿನಗಳಲ್ಲಿ ಹಬ್ಬಗಳು ಶುರು ಆಗುದ್ರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಿದೆ.
ಗಮನಿಸಿ: ನೀವು ಆಭರಣ ಖರೀದಿಸಲು ಮಳಿಗೆಗೆ ಹೋದಾಗ, ಈ ಮೇಲಿನ ಬೆಲೆಯ ಜೊತೆಗೆ ಶೇಕಡಾ 3% ಜಿಎಸ್‌ಟಿ ಮತ್ತು ಮೇಕಿಂಗ್ ಚಾರ್ಜಸ್ ಸೇರ್ಪಡೆಯಾಗಿ , ಅಂತಿಮ ಬೆಲೆಯಲ್ಲಿ ಕೊಂಚ ಏರಿಕೆಯಾಗಲಿದೆ.


Click it and Unblock the Notifications
