ತಿಂಗಳ ಕೊನೆಯ ವೀಕೆಂಡ್‌ನಲ್ಲಿ ಎಷ್ಟಿದೆ ಗೊತ್ತಾ ಚಿನ್ನ, ಬೆಳ್ಳಿ ದರ? ಆಭರಣ ಪ್ರಿಯರಿಗೆ ಇಲ್ಲಿದೆ ನಿಖರ ಮಾಹಿತಿ
ವೀಕೆಂಡ್ ಬಂತು ಅಂದ್ರೆ ಸಾಕು, ಮಾರುಕಟ್ಟೆಯಲ್ಲಿ ಏನಾದರೂ ಹೊಸತು ಖರೀದಿಸಬೇಕು ಎನ್ನುವ ಆಸೆ ಮೂಡುವುದು ಸಹಜ. ಬಿಡುವಿಲ್ಲದ ಕೆಲಸದ ದಿನಗಳ ನಂತರ ಸಿಗುವ ಈ ವಾರಾಂತ್ಯದಲ್ಲಿ ಶಾಪಿಂಗ್ ಮಾಡುವುದು, ಅದರಲ್ಲೂ ಚಿನ್ನ, ಬೆಳ್ಳಿಯ ಆಭರಣಗಳನ್ನ ಕೊಂಡುಕೊಳ್ಳುವುದು ಎಂದರೆ ಹೆಣ್ಣುಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ದಸರಾ, ದೀಪಾವಳಿಯಂತಹ ಹಬ್ಬದ ಸೀಸನ್ ಬೇರೆ ಹತ್ತಿರ ಬರುತ್ತಿದೆ.
ಈ ವೀಕೆಂಡ್‌ನಲ್ಲಿ ನೀವೇನಾದರೂ ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದರೆ, ಮಾರುಕಟ್ಟೆಗೆ ಹೋಗುವ ಮುನ್ನ ಇಂದಿನ ದರ ಹೇಗಿದೆ ಎಂದು ತಿಳಿದುಕೊಳ್ಳುವುದು ಜಾಣತನ. ಹಾಗಾದರೆ, ಈ ವೀಕೆಂಡ್‌ನಲ್ಲಿ ಹೇಗಿದೆ ಚಿನ್ನ ಬೆಳ್ಳಿ ದರ? ಎನ್ನುವ ಕುತೂಹಲ ನಿಮಗಿದ್ದರೆ, ಇಲ್ಲಿದೆ ಸಂಪೂರ್ಣ ಮಾಹಿತಿ.

ಖರೀದಿದಾರರಿಗೆ ನೆಮ್ಮದಿ ನೀಡುವ ಪ್ರಮುಖ ವಿಷಯವೇನೆಂದರೆ, ಇಂದು ಚಿನ್ನದ ದರದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ಮುಖ್ಯವಾಗಿ, ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆಯನ್ನ ಗಮನಿಸುವುದಾದರೆ, ಬಂಗಾರದ ದರ ಸ್ಥಿರವಾಗಿದ್ದು ಗ್ರಾಹಕರಿಗೆ ನಿರಾಳತೆ ತಂದಿದೆ.
ಜಾಗತಿಕ ವಿದ್ಯಮಾನಗಳು, ಹಣದುಬ್ಬರ ಹಾಗೂ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಮಾರುಕಟ್ಟೆಯ ಟ್ರೆಂಡ್‌ಗಳು ಭಾರತೀಯ ಬುಲಿಯನ್ ಮಾರುಕಟ್ಟೆಯ ಮೇಲೆ ಸದಾ ಪ್ರಭಾವ ಬೀರುತ್ತಿರುತ್ತವೆ. ಆದರೂ ಇಂದಿನ ಮಾರುಕಟ್ಟೆ ಆಭರಣ ಖರೀದಿಗೆ ಪೂರಕವಾಗಿದೆ.
ನಿನ್ನೆಯ ಮತ್ತು ಇಂದಿನ ದರಗಳನ್ನು ಹೋಲಿಸಿ ನೋಡುವುದಾದರೆ, ಚಿನ್ನ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ನಿನ್ನೆ (ಸೆಪ್ಟೆಂಬರ್ 26) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 13,995 ರೂಪಾಯಿ ಇತ್ತು, ಇಂದೂ (ಸೆಪ್ಟೆಂಬರ್ 27) ಕೂಡ ಅದೇ 13,995 ರೂಪಾಯಿ ದರದಲ್ಲಿ ವಹಿವಾಟು ಮುಂದುವರೆದಿದೆ.
ಆದರೆ ಬೆಳ್ಳಿಯ ವಿಚಾರಕ್ಕೆ ಬಂದರೆ, ನಿನ್ನೆ ಒಂದು ಗ್ರಾಂ ಬೆಳ್ಳಿಗೆ 245 ರೂಪಾಯಿ ಅಂದರೆ ಕೆಜಿಗೆ 2,45,000 ರೂಪಾಯಿ ಇತ್ತು. ಇಂದು ಅದು 5 ರೂಪಾಯಿಗಳಷ್ಟು ಏರಿಕೆ ಕಂಡು, ಒಂದು ಗ್ರಾಂ ಬೆಳ್ಳಿಗೆ 250 ರೂಪಾಯಿ ಆಗಿ ಕೆಜಿಗೆ 2,50,000 ರೂಪಾಯಿ ಆಗಿದೆ. ಅಂದರೆ ಬೆಳ್ಳಿಯ ದರದಲ್ಲಿ ಕೊಂಚ ಏರಿಕೆ ದಾಖಲಾಗಿದೆ.
ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಚಿನ್ನದ ದರವು ಬೇಡಿಕೆ, ಸ್ಥಳೀಯ ತೆರಿಗೆಗಳು ಹಾಗೂ ಸಾರಿಗೆ ವೆಚ್ಚದ ಆಧಾರದ ಮೇಲೆ ಕೊಂಚ ಭಿನ್ನವಾಗಿರುತ್ತದೆ. ಇಂದಿನ (ಸೆಪ್ಟೆಂಬರ್ 27) ಮಾರುಕಟ್ಟೆಯ ನಿಖರ ಅಂಕಿ-ಅಂಶಗಳ ಪ್ರಕಾರ, 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ವಿವಿಧ ನಗರಗಳಲ್ಲಿ ಈ ಕೆಳಗಿನಂತಿದೆ:
1.ಬೆಂಗಳೂರು - 13,995 ರೂಪಾಯಿ
2. ದೆಹಲಿ - 14,010 ರೂಪಾಯಿ
3.ಚೆನ್ನೈ - 14,000 ರೂಪಾಯಿ
4.ಮುಂಬೈ - 13,995 ರೂಪಾಯಿ
5.ಹೈದರಾಬಾದ್ - 13,995 ರೂಪಾಯಿ
6.ಅಹಮದಾಬಾದ್ - 14,000 ರೂಪಾಯಿ
7.ಪುಣೆ - 13,995 ರೂಪಾಯಿ
8.ಕೋಲ್ಕತ್ತಾ - 13,995 ರೂಪಾಯಿ
ಈ ತಿಂಗಳ ಕೊನೆಯ ವೀಕೆಂಡ್‌ನಲ್ಲಿ ಚಿನ್ನ ಖರೀದಿಸುವವರಿಗೆ ಇದು ಅತ್ಯುತ್ತಮ ಸಮಯವೆಂದೇ ಹೇಳಬಹುದು. ಏಕೆಂದರೆ ಬಂಗಾರದ ಬೆಲೆಯಲ್ಲಿ ಯಾವುದೇ ದಿಢೀರ್ ಏರಿಕೆ ಕಂಡುಬಂದಿಲ್ಲ ಮತ್ತು ಮಾರುಕಟ್ಟೆ ಸಂಪೂರ್ಣ ಸ್ಥಿರವಾಗಿದೆ. ಆದರೆ ಬೆಳ್ಳಿ ಖರೀದಿಸುವವರು ನಿನ್ನೆಗಿಂತ ಕೊಂಚ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.
ಗಮನಿಸಿ: ಈ ಮೇಲಿನ ದರಗಳು ಜಿಎಸ್‌ಟಿ ಮತ್ತು ಮೇಕಿಂಗ್ ಚಾರ್ಜ್‌ಗಳನ್ನ ಒಳಗೊಂಡಿರುವುದಿಲ್ಲ, ನೀವು ಭೇಟಿ ನೀಡುವ ಸ್ಥಳೀಯ ಆಭರಣ ಮಳಿಗೆಗಳಲ್ಲಿ ದರಗಳು ಕೊಂಚ ಬದಲಾಗಬಹುದು.


Click it and Unblock the Notifications
