Gold Rate: ಮೂರು ದಿನಗಳಲ್ಲಿ ₹10,300 ಕುಸಿದ ಚಿನ್ನದ ಬೆಲೆ: ಬೆಳ್ಳಿ ದರ ಎಷ್ಟಿದೆ?

ಚಿನ್ನದ ಬೆಲೆಯ ಏರಿಳಿಕೆ ಸಾಮಾನ್ಯ, ಆದರೆ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಸತತವಾಗಿ ಕುಸಿಯುತ್ತಿರುವುದು ಆಭರಣ ಪ್ರಿಯರಿಗೆ ಖುಷಿ ಸುದ್ದಿಯಾಗಿದೆ. ಮೂರು ದಿನಗಳಲ್ಲಿ ಚಿನ್ನದ ಬೆಲೆ ಒಟ್ಟಾರೆ 10,300 ರೂಪಾಯಿ ಕುಸಿತ ಕಂಡಿದೆ.

ಗುರುವಾರ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ 1600 ರೂಪಾಯಿ ಕಡಿಮೆಯಾಗಿದ್ದರೆ, ಶುಕ್ರವಾರ 4500 ರೂಪಾಯಿ ಕಡಿಮೆಯಾಗಿತ್ತು, ಶನಿವಾರ ಮತ್ತೆ 3800 ರೂಪಾಯಿ ಕುಸಿಯುವ ಮೂಲಕ ಕಳೆದ ಮೂರು ದಿನಗಳಲ್ಲಿ 10,300 ರೂಪಾಯಿ ಕುಸಿತ ಕಂಡಿದೆ.

Gold and Silver Rate in Bengaluru on July 21st

ಅದಕ್ಕೂ ಮುನ್ನ ಮಂಗಳವಾರ ಮತ್ತು ಬುಧವಾರ (ಜುಲೈ 15, 16) ಎರಡೇ ದಿನದಲ್ಲಿ ಚಿನ್ನದ ಬೆಲೆ 100 ಗ್ರಾಂಗೆ 13,600 ರೂಪಾಯಿ ಏರಿಕೆ ಕಂಡು ಬಂಗಾರ ಪ್ರಿಯರಿಗೆ ಶಾಕ್ ಕೊಟ್ಟಿತ್ತು. ಅದಾದ ಬಳಿಕ ಸತತವಾಗಿ ಕುಸಿತ ಕಾಣುವ ಮೂಲಕ ನಿಟ್ಟುಸಿರುವ ಬಿಡುವಂತೆ ಮಾಡಿದೆ.

ಚಿನ್ನದ ಬೆಲೆ ಇಂದು ಎಷ್ಟಿದೆ?

ಇಂದು ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6780 ರೂಪಾಯಿ ಇದ್ದರೆ, 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7397 ರೂಪಾಯಿ ಇದೆ. ಜುಲೈ 23ರಂದು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 'ಒಂದು ದೇಶ ಒಂದು ಚಿನ್ನದ ದರ' ಯೋಜನೆ ತರುವ ಸಾಧ್ಯತೆ ಇದ್ದು, ಚಿನ್ನದ ಬೆಲೆ ಮತ್ತಷ್ಟು ಕುಸಿಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಬೆಳ್ಳಿ ಬೆಲೆ ಕೂಡ ಕುಸಿತ

ಚಿನ್ನ ಮಾತ್ರವಲ್ಲ ಬೆಳ್ಳಿ ಬೆಲೆ ಕೂಡ ಮೂರು ದಿನಗಳು ಸತತವಾಗಿ ಕುಸಿತ ಕಂಡಿದೆ. ಜುಲೈ 17ರಂದು 96000 ರೂಪಾಯಿ ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ಮೂರು ದಿನಗಳಲ್ಲಿ 4500 ರೂಪಾಯಿ ಕುಸಿದಿದ್ದು ಇಂದು 91,500 ರೂಪಾಯಿಯಂತೆ ಮಾರಾಟವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+