Gold, Silver Rate Feb 18: ಚಿನ್ನ ಪ್ರಿಯರಿಗೆ 4ನೇ ದಿನವೂ ಸಂತೋಷ: ಬೆಳ್ಳಿ ಬೆಲೆ ಬರೋಬ್ಬರಿ 5,000 ರೂ. ಇಳಿಕೆ
Gold, Silver Rate Feb 18: ಚಿನ್ನ ಪ್ರಿಯರಿಗೆ ನಾಲ್ಕನೇ ದಿನವೂ ಸಂತೋಷದ ಸುದ್ದಿ ಇಲ್ಲಿದೆ. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿತ್ತು. ಇದೀಗ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿದ್ದು, ಮಹತ್ವದ ಬದಲಾವಣೆ ಆಗಿಲ್ಲ. ಕಳೆದ ಮೂರು ನಾಲ್ಕು ತಿಂಗಳುಗಳಿಂದ ವಿಪರೀತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಇದೀಗ ಭರ್ಜರಿ ಇಳಿಕೆಯ ಹಾದಿಯಲ್ಲಿದೆ. ಚಿನ್ನದ ಬೆಲೆ ಇಳಿಕೆ ಆಗಿರುವುದು ಬಂಗಾರ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಮದುವೆಯ ಸೀಸನ್ ಸಹ ಆಗಿರುವುದರಿಂದ ಚಿನ್ನದ ಬೆಲೆ ಇಳಿಕೆ ಆಗಿರುವುದು ನಿರಾಳತೆ ಮೂಡಿಸಿದೆ.
ಕಳೆದ ತಿಂಗಳು ಚಿನ್ನದ ಬೆಲೆ ಏಕಾಏಕಿ ಹೆಚ್ಚಾದಾಗ ಚಿನ್ನ ಖರೀದಿ ಮಾಡಬೇಕು ಎಂದುಕೊಂಡವರು ಹಾಗೂ ಮದುವೆ ಕಾರ್ಯಕ್ರಮಗಳಿಗೆ ಚಿನ್ನವನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದವರು ಕಂಗಾಲಾಗಿದ್ದರು. ಅಲ್ಲದೆ ಕೆಲವರು ಮದುವೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನೇ ಮುಂದೂಡಿದ್ದೂ ಇದೆ. ಆದರೆ ಇದೀಗ ಚಿನ್ನದ ಬೆಲೆ ಇಳಿಕೆಯಾಗುತ್ತಿರುವುದು ಹಾಗೂ ಯಥಾಸ್ಥಿತಿ ಕಾಪಾಡಿಕೊಳ್ಳುತ್ತಿರುವುದು ಚಿನ್ನ ಪ್ರಿಯರಲ್ಲಿ ಸಂತೋಷನ್ನುಂಟು ಮಾಡಿದೆ. ಆದರೆ ಇದೇ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ಇನ್ನಷ್ಟು ದುಬಾರಿ ಆಗಬಹುದು ಎನ್ನುವ ಕನಸು ಕಂಡಿದ್ದವರು ಕೈಸುಟ್ಟುಕೊಂಡಿದ್ದಾರೆ. ಇನ್ನು ಫೆಬ್ರವರಿ 18ರ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ನೋಡೋಣ.

24 ಕ್ಯಾರೆಟ್ ಚಿನ್ನದ ಬೆಲೆ: ಚಿನ್ನದ ವಿವಿಧ ಕ್ಯಾರೆಟ್‌ನ ಬೆಲೆಯು ಸತತ ನಾಲ್ಕನೇ ದಿನವೂ ಇಳಿಕೆಯಾಗಿದೆ. 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 15,420 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,54,200 ರೂ. ಆಗಿದೆ. ಮಂಗಳವಾರಕ್ಕೆ / ಫೆಬ್ರವರಿ 17ಕ್ಕೆ ಹೋಲಿಕೆ ಮಾಡಿದರೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ನೆನ್ನೆಗೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯು ಯಥಾಸ್ಥಿತಿ ಮುಂದುವರಿದಿದೆ.
22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕಳೆದ ಮೂರು ದಿನಗಳಿಂದ ಭರ್ಜರಿ ಇಳಿಕೆಯಾಗಿದ್ದು, ಸತತ ನಾಲ್ಕನೇ ದಿನವಾದ ಫೆಬ್ರವರಿ 18ರಂದು ಚಿನ್ನದ ಬೆಲೆಯು ಯಥಾಸ್ಥಿತಿ ಮುಂದುವರಿದಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 14,135 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,41,350 ರೂ. ಆಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 11,565 ರೂಪಾಯಿ ಆಗಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 1,15,650 ರೂ. ಆಗಿದೆ. 24 ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆಯಂತೆಯೇ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಯಾವುದೇ ಬದಲಾವಣೆ ಆಗಿಲ್ಲ.
Gold, Silver Rate Feb 18: ಬೆಳ್ಳಿ ಬೆಲೆ ಎಷ್ಟಿದೆ ?
ಚಿನ್ನಕ್ಕಿಂತಲೂ ಹೆಚ್ಚು ಶಾಕ್ ನೀಡಿರುವುದು ಬೆಳ್ಳಿ. ಬೆಳ್ಳಿ ಬೆಲೆಯು ಕಳೆದ 15 ದಿನಗಳಲ್ಲಿ ಭಾರೀ ಏರಿಳಿತ ಕಂಡಿದೆ. ಫೆಬ್ರವರಿ 18 ರಂದು 1 ಗ್ರಾಂ ಬೆಳ್ಳಿ ಬೆಲೆಯು 255 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 2,55,000 ರೂ. ಆಗಿದೆ. ಫೆಬ್ರವರಿ 17ರ ಮಂಗಳವಾರಕ್ಕೆ ಹೋಲಿಕೆ ಮಾಡಿದರೆ ಬೆಳ್ಳಿ ಬೆಲೆಯು 1 ಗ್ರಾಂನ ಮೇಲೆ 5 ರೂಪಾಯಿ ಹಾಗೂ ಒಂದು ಕೆ.ಜಿಯ ಮೇಲೆ ಬರೋಬ್ಬರಿ 5,000 ಸಾವಿರ ರೂಪಾಯಿ ಕಡಿಮೆಯಾಗಿದೆ. ಒಟ್ಟಾರೆ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯು ಬಂಗಾರ ಮತ್ತು ಬೆಳ್ಳಿ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ.












Click it and Unblock the Notifications