Gold Rate Today: ಮೇ 18 ರಂದು ನಿಮ್ಮ ನಗರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ?
ಬೆಂಗಳೂರು, ಮೇ. 18: ಭಾರತದಲ್ಲಿ ಶನಿವಾರ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಯುಎಸ್ ದರ ಕಡಿತದಿಮದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ 30 ಡಾಲರ್‌ಗಿಂತ ಏರಿಕೆ ಕಂಡು ಬಂದಿದೆ. ಮೇ 18 ರಂದು ಭಾರತದಲ್ಲಿ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 74,620 ರೂ, 22 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 68,400 ರೂಪಾಯಿಯಾಗಿದೆ. ಬೆಳ್ಳಿ ಒಂದು ಕಿಲೋಗ್ರಾಂಗೆ 89,000 ರೂಪಾಯಿಗೆ ಏರಿದೆ.
ನಿಮ್ಮ ನಗರದಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ತಿಳಿಯಿರಿ
ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹ 68,400 ಮತ್ತು 24 ಕ್ಯಾರೆಟ್ ಚಿನ್ನಕ್ಕೆ 74,620 ರೂಪಾಯಿಯಿದೆ. ಬೆಳ್ಳಿಯ ಬೆಲೆ ಒಂದು ಕೆಜಿಗೆ 89,000 ರೂಪಾಯಿಯಿದೆ.

ದೆಹಲಿ: ದೆಹಲಿಯಲ್ಲಿ ಇಂದಿನ ಚಿನ್ನದ ಬೆಲೆ 10 ಗ್ರಾಂಗೆ 75,731. ಮೇ 17ರಂದು ಚಿನ್ನದ ಬೆಲೆ 74,247 ಇತ್ತು. ಬೆಳ್ಳಿ ಬೆಲೆ ಕೆಜಿಗೆ 86,460 ರೂಪಾಯಿ ಆಗಿದೆ. ಮೇ 17ರಂದು ಬೆಳ್ಳಿಯ ದರ 84,760 ರೂಪಾಯಿ ಆಗಿತ್ತು.
ಚೆನ್ನೈ: ಚೆನ್ನೈನಲ್ಲಿ ಇಂದಿನ ಚಿನ್ನದ ಬೆಲೆ 10 ಗ್ರಾಂಗೆ 75,218 ರೂಪಾಯಿ. ಮೇ 17 ರಂದು ಚಿನ್ನದ ಬೆಲೆ 74,320 ರೂಪಾಯಿ. ಚೆನ್ನೈನಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 86,550 ರೂಪಾಯಿಯಾಗಿದೆ.
ಮುಂಬೈ: ಮುಂಬೈನಲ್ಲಿ ಇಂದಿನ ಚಿನ್ನದ ಬೆಲೆ 10 ಗ್ರಾಂಗೆ 75, 144 ಇದೆ. ಮೇ 17 ರಂದು ಚಿನ್ನದ ಬೆಲೆ 10 ಗ್ರಾಂಗೆ 74,393 ರೂ. ಇತ್ತು. ಬೆಳ್ಳಿ ಬೆಲೆ ಒಂದು ಕೆಜಿಗೆ 86,460 ರೂಪಾಯಿಯಿದೆ.

ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ಇಂದಿನ ಚಿನ್ನದ ಬೆಲೆ ಹತ್ತು ಗ್ರಾಂಗೆ 74,777 ರೂಪಾಯಿಯಿದೆ. ನಿನ್ನೆ ಚಿನ್ನದ ಬೆಲೆ ಹತ್ತು ಗ್ರಾಂಗೆ 75,268 ರೂಪಾಯಿಯಿತ್ತು. ಬೆಳ್ಳಿ ಬೆಲೆ ಒಂದು ಕೆಜಿಗೆ 86,460 ರೂಪಾಯಿಯಿದೆ.
ಹೈದರಾಬಾದ್: ಹೈದರಾಬಾದ್ ನಗರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,600 ರೂಪಾಯಿಯಾಗಿದೆ, 10 ಗ್ರಾಂಗೆ 24 ಕ್ಯಾರೆಟ್‌ನ ಶುದ್ಧ ಚಿನ್ನದ ದರ ಈಗ 73,750 ರೂಪಾಯಿಯಾಗಿದೆ. ಹೈದರಾಬಾದ್‌ನಲ್ಲಿ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿಗೆ 96,500 ರೂಪಾಯಿಯಿದೆ.












Click it and Unblock the Notifications