Get Updates
Get notified of breaking news, exclusive insights, and must-see stories!

Gold Silver Price Today: ಗಗನಕ್ಕೇರಿದ ಬೆಳ್ಳಿ-ಚಿನ್ನದ ದರ! ಎರಡೇ ದಿನಕ್ಕೆ ಬೆಳ್ಳಿ ದರ ₹9000 ಏರಿಕೆ, ಇಂದಿನ ಬೆಲೆ

ಬೆಂಗಳೂರು: ಚಿನ್ನ-ಬೆಳ್ಳಿ ಲೋಗಳನ್ನು ಕೊಳ್ಳುವವರಿಗೆ ನಿತ್ಯವು ಆಘಾತ ಎದುರಾಗುತ್ತಿದೆ. ಸದ್ಯಕ್ಕೆ ಚಿನ್ನ ಬೆಳ್ಳಿ ಖರೀದಿ ವಿಚಾರವೇ ಬೇಡವೇ ಬೇಡ ಎನ್ನುವಷ್ಟರ ಮಟ್ಟಿಗೆ ಅವುಗಳ ದರ ಗಗನಕ್ಕೇರುತ್ತಿದೆ. ಸದ್ಯಕ್ಕೆ ಇಳಿಕೆ ಆಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಬೆಳ್ಳಿ ದರ ಒಂದೇ ತಿಂಗಳಲ್ಲಿ 50,000 ರೂಪಾಯಿಗೆ ಜಿಗಿದಿದೆ. ಚಿನ್ನ ಬೆಲೆಯೂ ನಿತ್ಯ ಹೆಚ್ಚಾಗುತ್ತಿದೆ. ಇಂದು ಹಸ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ಬಂಗಾರ, ಬೆಳ್ಳಿ ದರವೆಷ್ಟಿದೆ...?

ವರ್ಷದಿಂದ ವರ್ಷಕ್ಕೆ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಮಧ್ಯಮ ವರ್ಗದವರು ಒಂದಷ್ಟು ಹಣ ಕೂಡಿಟ್ಟು, ಸಾಲ ಮಾಡಿ ಆದರೂ ಅಗತ್ಯತೆ ನೋಡಿಕೊಂಡು ಕಾರ್ಯಕ್ರಮ, ಸಮಾರಂಭ, ಹಬ್ಬ ಹರಿದಿನಗಳಲ್ಲಿ ಚಿನ್ನ ಖರೀದಿಸುತ್ತಿದ್ದರು. ಈ ಬೆಲೆ ಏರಿಕೆ ಪ್ರಭಾವದಿಂದಾಗಿ ಆ ಸಂಸ್ಕೃತಿ ಮರೆಯಾಗಬಹುದು. ಡಿಸೆಂಬರ್ 18ರಿಂದ 23ರವರೆಗೆ ಒಂದು ವಾರದಲ್ಲಿ ಒಂದೇ ಒಂದು ಬಾರಿ ಮಾತ್ರವೇ ಚಿನ್ನದ ಬೆಲೆ ಕನಿಷ್ಠ ಪ್ರಮಾಣದಲ್ಲಿ ಇಳಿಕೆ ಆಗಿದ್ದು ಬಿಟ್ಟರೆ, ಮತ್ತೆ ಕುಸಿತ ಕಂಡಿಲ್ಲ. ಆದರೆ ನಿತ್ಯವು ಈ ಲೋಹದ ಬೆಲೆ ಏರಿಕೆ ಆಗುತ್ತಲೇ ಇದೆ. ಇತ್ತ ಬೆಳ್ಳಿ ದರವು ಕೈಗೆಟುಕದಂತೆ ಸಾವಿರಾರು ರೂಪಾಯಿಗಳ ಲೆಕ್ಕದಲ್ಲಿ ಏರಿಕೆಯ ಓಟ ಮುಂದುವರಿಸಿದೆ.

Gold and Silver Prices Rise Today Across India Silver Rs 9000 Jump in Just 2 Days Know Gold rate

ಒಂದೇ ದಿನಕ್ಕೆ ಚಿನ್ನ ದರ 2,400ರೂ. ಹೆಚ್ಚಳ!

ಬೆಂಗಳೂರಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂಗೆ 1,27,000 ರೂಪಾಯಿ ಇದೆ. ಒಂದು ಒಂದೇ ದಿನಕ್ಕೆ ಬರೋಬ್ಬರಿ 2,200 ರೂಪಾಯಿ ಏರಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಬಂಗಾರಕ್ಕೆ 2,400 ರೂಪಾಯಿ ಹೆಚ್ಚಾಗುವ ಮೂಲಕ 1,38,500 ರೂ.ಗೆ ಏರಿದೆ. ಇದನ್ನು ನೋಡಿದ ಗ್ರಾಹಕರು ಚಿನ್ನ ಖರೀದಿಯಿಂದ ದೂರು ಸರಿಯುತ್ತಿದ್ದಾರೆ. ಭವಿಷ್ಯದ ಲಾಭಕ್ಕಾಗಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಈ ಲೋಹಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

ಎರಡೇ ದಿನಕ್ಕೆ ಬೆಳ್ಳಿ ದರ 9000 ರೂ.ಗೆ ಜಿಗಿತ!

ಇನ್ನೂ ಬೆಳ್ಳಿ ದರವು 10 ಗ್ರಾಂಗೆ 40 ರೂಪಾಯಿಯಂತೆ 1 ಕೆಜಿ ಬೆಳ್ಳಿಯು ಒಂದೇ ದಿನಕ್ಕೆ 4000 ರೂಪಾಯಿ ಹೆಚ್ಚಿಸಿಕೊಂಡಿದೆ. ನೆನ್ನೆ ಸೋಮವಾರ (ಡಿ.22) ಇದೇ ಒಂದು ಕೆಜಿ ಬೆಳ್ಳಿಯ ದರವು 5000 ರೂಪಾಯಿ ಏರಿಕೆ (ಎರಡು ದಿನದಲ್ಲಿ ಬೆಳ್ಳಿ ದರ 9000 ರೂ.ಏರಿಕೆ) ಆಗಿತ್ತು. ಇದೆಲ್ಲ ನೋಡಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎನ್ನುತ್ತಾರೆ ಆರ್ಥಿಕ ತಜ್ಞರು

ಕಳೆದ ಒಂದು ತಿಂಗಳಲ್ಲಿ ಬೆಳ್ಳಿಯ ದರವು 50,000 ರೂಪಾಯಿ ಹೆಚ್ಚಾಗಿದೆ. ಕಳೆದ ಒಂದೇ ವರ್ಷದಲ್ಲಿ ಬರೋಬ್ಬರಿ 94ರಷ್ಟು ಏರಿಕೆ ಕಂಡು ಬಂದಿದೆ. ಇಂದು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ದರವು 2,23,000 ರೂಪಾಯಿ ಇದೆ. ಡಿಸೆಂಬರ್ 18ರಿಂದ ಡಿಸೆಂಬರ್ 23ರವರೆಗೆ ಒಂದು ಬಾರಿ ಮಾತ್ರವೇ ಇಳಿಕೆ ಕಂಡಿದ್ದ ಬೆಳ್ಳಿ ದರ, ಮೂರು ಭಾರಿ ಭರ್ಜರಿಯಾಗಿ ಜಿಗಿತ ಕಂಡಿದೆ. ನಗರವಾರು ಚಿನ್ನ-ಬೆಳ್ಳಿ ದರ ವಿವರ.

ನಗರವಾರು ಇಂದಿನ 1kg ಬೆಳ್ಳಿ ದರಪಟ್ಟಿ

ಬೆಂಗಳೂರು : 2,23,000 ರೂಪಾಯಿ

ಹೈದರಾಬಾದ್: 2,34,000 ರೂಪಾಯಿ

ದೆಹಲಿ: 2,23,000 ರೂಪಾಯಿ

ಕೋಲ್ಕತ್ತಾ: 2,23,000 ರೂಪಾಯಿ

ಚೆನ್ನೈ: 2,34,000 ರೂಪಾಯಿ

ಮುಂಬೈ: 2,23,000 ರೂಪಾಯಿ

ಕೇರಳ :2,34,000 ರೂಪಾಯಿ

ಜೈಪುರ : 2,19,100 ರೂಪಾಯಿ

ಪುಣೆ : 2,23,000 ರೂಪಾಯಿ

ಅಹಮದಾಬಾದ್ : 2,23,000 ರೂಪಾಯಿ

22k 10 ಗ್ರಾಂ ಚಿನ್ನದ ದರಪಟ್ಟಿ

ಬೆಂಗಳೂರು : 126,784 ರೂಪಾಯಿ

ದೆಹಲಿ : 126,472 ರೂಪಾಯಿ

ಮುಂಬೈ : 126,683 ರೂಪಾಯಿ

ಚೆನ್ನೈ : 127,059 ರೂಪಾಯಿ

ಅಹಮದಾಬಾದ್ : 126,857 ರೂಪಾಯಿ

ಪುಣೆ : 126,683 ರೂಪಾಯಿ

ಹೈದರಾಬಾದ್ : 126,885 ರೂಪಾಯಿ

ಕೊಚ್ಚಿ : 123,000 ರೂಪಾಯಿ

ಭುವನೇಶ್ವರ್ : 123,000 ರೂಪಾಯಿ

ಕೋಲ್ಕತ್ತಾ : 126,518 ರೂಪಾಯಿ

ಚಂಡೀಗಢ : 123,150 ರೂಪಾಯಿ

ಜೈಪುರ : 123,150 ರೂಪಾಯಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+