Gold Price: ಗ್ರಾಹಕರಿಗೆ ಶಾಕ್: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, ಬೆಳ್ಳಿ ದರ ಸ್ಥಿರ
ಬೆಂಗಳೂರು, ಅಕ್ಟೋಬರ್ 02: ಭಾರತದಲ್ಲಿ ಸತತ ನಾಲ್ಕು ದಿನಗಳಿಂದ ನಿರಂತರವಾಗಿ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಚೇತರಿಕೆ ಕಂಡಿದೆ. ಗಾಂಧಿ ಜಯಂತಿ ದಿನದಂದು ಬಂಗಾರದ ದರವು ಹೆಚ್ಚಳವಾಗಿದೆ. ಇತ್ತ ವಿದೇಶಗಳಲ್ಲಿ ಚಿನ್ನದ ಬೆಲೆ ಯಥಾ ಸ್ಥಿತಿಯಲ್ಲಿ ಮುಂದುವರಿದಿದೆ. ಈ ಮೂಲಕ ಚಿನ್ನಕ್ಕೆ ಮತ್ತೆ ಬೇಡಿಕೆ ಶುರುವಾಗಿದೆ. ಬೆಲೆ ಎಷ್ಟೆ ಇಳಿಕೆ ಆದರೂ ಹಾಗೂ ಏರಿಕೆ ಆದರೂ ಸಹಿತ ಇದರ ಬೇಡಿಕೆ ಮಾತ್ರ ಮುಂದುವರಿಯುತ್ತಲೇ ಸಾಗುತ್ತದೆ.
ಇಂದು ಬುಧವಾರ ಅಕ್ಟೋಬರ್ 02ರಂದು ಭಾರತದಲ್ಲಿ ಚಿನ್ನದ ದರ 50 ರೂಪಾಯಿಗೆ ಇಳಿಕೆ ಆಗಿದೆ. ಇದರಿಂದಾಗಿ 22ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 71000 ರೂಪಾಯಿಗೆ ಏರಿದೆ. 24 ಕ್ಯಾರಟ್ 10 ಗ್ರಾಂ ಬಂಗಾರದ ದರ 77450 ರೂಪಾಯಿ ಹೆಚ್ಚಾಗಿದೆ. ಸದ್ಯ ದೇಶದಲ್ಲಿ ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 100 ಗ್ರಾಂ ಬೆಳ್ಳಿ ದರ 9500 ರೂಪಾಯಿಗೆ ಮಾರಾಟವಾಗುತ್ತಿದೆ.

ಬೆಂಗಳೂರಿನಲ್ಲಿ ಭಾರತದ ಇತರ ನಗರಗಳಲ್ಲಿ ಇರುವಂತೆ ಚಿನ್ನದ ಬೆಲೆ ಸಮವಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಕಡಿಮೆ ಇದೆ. ಅಂದರೆ ಬೇರೆಡೆ ನಿಮಗೆ 100 ಗ್ರಾಂ ಬೆಳ್ಳಿ ದರ 9500 ರೂ.ಗೆ ಸಿಕ್ಕರೆ, ಬೆಂಗಳೂರಿನಲ್ಲಿ ಮಾತ್ರ ನಿಮಗೆ 9000 ರೂ.ಗೆ ಸಿಗುತ್ತದೆ. ಇನ್ನು ಚಿನ್ನಾಭರಣ ಖರೀದಿ ವೇಳೆ ವೇಸ್ಟೇಜ್, ಇತರ ಶುಲ್ಕ ಸೇರಿ ಕೊಂಚ ವ್ಯತ್ಯಾಸವಾಗಬಹುದು ಎಂಬುದನ್ನು ಗ್ರಾಹಕರು ಗಮನಿಸಬೇಕು.
ದೇಶವಾರು 22 ಕ್ಯಾರಟ್ 10 ಗ್ರಾಂ ಬಂಗಾರದ ಬೆಲೆ, ಪಟ್ಟಿ
ಭಾರತ: 71000 ರೂಪಾಯಿ
ಓಮನ್: 69,060 ರೂಪಾಯಿ
ಕುವೇತ್: 66,610 ರೂಪಾಯಿ
ದುಬೈ: 68,110 ರೂಪಾಯಿ
ಅಮೆರಿಕ: 67,100 ರೂಪಾಯಿ
ಸಿಂಗಾಪುರ: 69,740 ರೂಪಾಯಿ
ಸೌದಿ ಅರೇಬಿಯಾ: 68,180 ರೂಪಾಯಿ
ಮಲೇಷ್ಯಾ: 70,120 ರೂಪಾಯಿ
ನಗರವಾರು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ
ಬೆಂಗಳೂರು: 71,000 ರೂಪಾಯಿ
ಮುಂಬೈ: 71,000 ರೂಪಾಯಿ
ದೆಹಲಿ: 71,150 ರೂಪಾಯಿ
ಚೆನ್ನೈ: 71,000 ರೂಪಾಯಿ
ಅಹ್ಮದಾಬಾದ್: 71,050 ರೂಪಾಯಿ
ಲಕ್ನೋ: 71,150 ರೂಪಾಯಿ
ಭುವನೇಶ್ವರ್: 71,000 ರೂಪಾಯಿ
ಕೋಲ್ಕತಾ: 71,000 ರೂಪಾಯಿ
ಕೇರಳ: 71,000 ರೂಪಾಯಿ
ನಗರವಾರು ಬೆಳ್ಳಿ 100 ಗ್ರಾಂ ಬೆಲೆ
ಬೆಂಗಳೂರು: 9,000 ರೂಪಾಯಿ
ದೆಹಲಿ: 9,500 ರೂಪಾಯಿ
ಕೋಲ್ಕತಾ: 9,500 ರೂಪಾಯಿ
ಕೇರಳ: 10,100 ರೂಪಾಯಿ
ಚೆನ್ನೈ: 10,100 ರೂಪಾಯಿ
ಭುವನೇಶ್ವರ್: 10,100 ರೂಪಾಯಿ
ಅಹ್ಮದಾಬಾದ್: 9,500 ರೂಪಾಯಿ
ಜೈಪುರ್: 9,500 ರೂಪಾಯಿ
ಮುಂಬೈ: 9,500 ರೂಪಾಯಿ












Click it and Unblock the Notifications