Gold Price on March 15: ಹೋಳಿ ನಂತರ ದುಬಾರಿಯಾದ ಚಿನ್ನ: 10 ಗ್ರಾಂ ಖರೀದಿಸಲು 100 ಬಾರಿ ಯೋಚಿಸಿ

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಏರಿಳಿತವಾಗುತ್ತಲೇ ಇದೆ. ಆದರೆ ಹೋಳಿ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆ ಹೊಸ ದಾಖಲೆಯನ್ನು ನಿರ್ಮಿಸಿದೆ. ಹೀಗಾಗಿ ಯುಗಾದಿ ಹಬ್ಬಕ್ಕೆಂದು ಚಿನ್ನ ಖರೀದಿ ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡುವಂತಾಗಿದೆ. ಯುಗಾದಿಗೂ ಮುನ್ನ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತ.

ಹೌದು ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆ 1,000 ರೂ.ಗಳಷ್ಟು ಹೆಚ್ಚಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 1090 ರೂ. ಏರಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 1000 ರೂ. ಅಧಿಕವಾಗಿದೆ. ಇದು ಹೀಗೆ ಮುಂದುವರಿದರೆ ಚಿನ್ನ ಶೀಘ್ರದಲ್ಲೇ 90 ಸಾವಿರ ರೂ.ಗಳನ್ನು ದಾಟಲಿದೆ. ಅಲ್ಲದೆ ಬೆಳ್ಳಿ ಬೆಲೆಯೂ ಏರಿಕೆಯಾಗಿದ್ದು ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ 1,03,100 ರೂಪಾಯಿ ಆಗಿದೆ. ಹಾಗಾದರೆ ಇಂದು ಭಾರತದಾದ್ಯಂತ ಚಿನ್ನ ಬೆಳ್ಳಿ ಬೆಲೆ ಯಾವ ರೀತಿಯಾಗಿದೆ ಎಂದು ಈಗ ತಿಳಿಯೋಣ.

Gold and silver prices increased across India including Bengaluru on March 15

ಭಾರತದಾದ್ಯಂತ ಚಿನ್ನದ ಬೆಲೆ (ಮಾರ್ಚ್ 15)

*ಬೆಂಗಳೂರು ಚಿನ್ನದ ದರ: ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 81,250 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 88,630 ರೂ.

*ದೆಹಲಿಯಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ 10 ಗ್ರಾಂ ಚಿನ್ನದ ಬೆಲೆ 87,730 ರೂ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 81,350 ರೂ. ಇದೆ

*ಮುಂಬೈ ಚಿನ್ನದ ದರ: ಮುಂಬೈನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 88,580 ರೂ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 81,200 ರೂ.

*ಕೋಲ್ಕತ್ತಾ ಚಿನ್ನದ ದರ: ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 81,200 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 88,580 ರೂ.

* ಚೆನ್ನೈ ಚಿನ್ನದ ಬೆಲೆ: ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 81,200 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 88,580 ರೂ.

Gold and silver prices increased across India including Bengaluru on March 15

*ಅಹಮದಾಬಾದ್ ಚಿನ್ನದ ದರ: ಅಹಮದಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 81,250 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 88,630 ರೂ.

*ಲಕ್ನೋ ಚಿನ್ನದ ದರ: ಲಕ್ನೋದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 81,350 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 88,730 ರೂ.

*ಜೈಪುರದಲ್ಲಿ ಚಿನ್ನದ ಬೆಲೆ: ಜೈಪುರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 81,350 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 88,730 ರೂ.

*ಪಾಟ್ನಾ ಚಿನ್ನದ ದರ: ಪಾಟ್ನಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 81,250 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 88,630 ರೂ.

*ಹೈದರಾಬಾದ್ ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 81,200 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 88,580 ರೂ.

*ಗುರುಗ್ರಾಮದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 81,200 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 88,580 ರೂ.

* ನೋಯ್ಡಾ ಚಿನ್ನದ ಬೆಲೆ: ನೋಯ್ಡಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 81,350 ರೂ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 87,730 ರೂ.

ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಗೆ 5 ಪ್ರಮುಖ ಕಾರಣಗಳು:-

*ಅಮೆರಿಕ ಅಧ್ಯಕ್ಷರ ಸುಂಕ ನಿರ್ಧಾರಗಳಲ್ಲಿನ ಏರಿಳಿತಗಳು ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ ಬೀರಿವೆ, ಇದು ಚಿನ್ನದ ಬೇಡಿಕೆಯನ್ನು ಹೆಚ್ಚಿಸಿವೆ.

*ಸಿಪಿಐ ಮತ್ತು ಪಿಪಿಐ ದತ್ತಾಂಶಗಳು ಮಾರುಕಟ್ಟೆ ನಿರೀಕ್ಷೆಗಳನ್ನು ಮೀರಿದ್ದು, ಜೂನ್‌ನಲ್ಲಿ ದರ ಕಡಿತದ ಸಾಧ್ಯತೆಯನ್ನು ಹೆಚ್ಚಿಸಿದೆ.

*ಈ ವರ್ಷ ಡಾಲರ್ ಸೂಚ್ಯಂಕ ಶೇಕಡಾ 4 ಕ್ಕಿಂತ ಹೆಚ್ಚು ಕುಸಿದಿದ್ದು, ಹೂಡಿಕೆದಾರರಿಗೆ ಚಿನ್ನ ಆಕರ್ಷಕವಾಗಿದೆ.

*ಜಾಗತಿಕ ಕೇಂದ್ರ ಬ್ಯಾಂಕುಗಳು ನಿರಂತರವಾಗಿ ಚಿನ್ನವನ್ನು ಖರೀದಿಸುತ್ತಿವೆ. ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷ 1000 ಟನ್‌ಗಳಿಗಿಂತ ಹೆಚ್ಚು ಚಿನ್ನವನ್ನು ಖರೀದಿಸಲಾಗಿದೆ.

*ಜಾಗತಿಕ ವ್ಯಾಪಾರ ನೀತಿಗಳಲ್ಲಿನ ಅನಿಶ್ಚಿತತೆಯಿಂದಾಗಿ ಹೂಡಿಕೆದಾರರು ಷೇರುಗಳಿಂದ ಚಿನ್ನಕ್ಕೆ ಬದಲಾವಣೆ ಆಗುತ್ತಿದ್ದಾರೆ.

ಚಿನ್ನದ ಬೆಲೆಗಳು ಮತ್ತಷ್ಟು ಏರುತ್ತವೆಯೇ ಅಥವಾ ಇಳಿಯುತ್ತವೆಯೇ ಎಂಬುದನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ನ ನೀತಿ ಸಭೆಗಳು ಮತ್ತು ಅಮೆರಿಕದ ಚಿಲ್ಲರೆ ಮಾರಾಟದ ದತ್ತಾಂಶಗಳು ನಿರ್ಧರಿಸುತ್ತವೆ. ಇದಲ್ಲದೆ, ಭೌಗೋಳಿಕ ರಾಜಕೀಯ ಘಟನೆಗಳು ಸಹ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಬಹುದು. ರಷ್ಯಾ-ಉಕ್ರೇನ್ ಸಂಘರ್ಷ ಅಥವಾ ಸುಂಕ ಯುದ್ಧದಲ್ಲಿ ಯಾವುದೇ ಹೊಸ ತಿರುವು ಚಿನ್ನವನ್ನು ದುಬಾರಿಯಾಗಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+