Gold and Silver prices: ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ? - ನಗರವಾರು ಬೆಲೆಗಳ ವಿವರ
ನವದೆಹಲಿ, ನವೆಂಬರ್, 20: ಚಿನ್ನ ಅಂದರೆ ಹೆಣ ಕೂಡನೂ ಬಾಯಿ ಬಿಡುತ್ತಂತೆ ಎನ್ನುವ ಮಾತೇ ಇದೆ. ಅದರಲ್ಲೂ ದರ ಕಡಿಮೆಯಾದರೆ ಸಾಕು ಚಿನ್ನದ ಅಂಗಡಿಗಳ ಮುಂದೆ ಜನರು ಕ್ಯೂನಲ್ಲಿ ನಿಲ್ಲುತ್ತಾರೆ. ಹಾಗೆಯೇ ಕಳೆದ ವಾರವಷ್ಟೇ ಚಿನ್ನದ ದರ ಇಳಿಕೆಯಾಗಿದ್ದು, ಮತ್ತೆ ತುಸು ಏರಿಕೆಯಾಗಿ ಮತ್ತೆ ಇದೀಗ ಇಳಿಕೆಯಾಗಿದೆ. ಹಾಗಾದರೆ ಬೆಂಗಳೂರು ಸೇರಿದಂತೆ ದೇಶದ ಯಾವ್ಯಾವ ನಗರಗಳಲ್ಲಿ ಇಂದು (ನವೆಂಬರ್ 20) ದರ ಎಷ್ಟಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಚಿನ್ನ ಖರೀದಿಯಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳೇ ಒಂದು ಹೆಜ್ಜೆ ಮುಂದಿರುತ್ತಾರೆ. ಏಕೆಂದರೆ ಆಭರಣಗಳು ಹೆಣ್ಣಿನ ಮೇಲೆ ಇದ್ದರೆ ಚೆಂದ ಹಾಗಾಗಿ. ನಮ್ಮ ದೇಶದಲ್ಲಿ ಶುಭ ಸಮಾರಂಭಗಳು ಹೆಚ್ಚಿರುವಂತೆ ಆಭರಣ ಪ್ರಿಯರ ಸಂಖ್ಯೆನೂ ಹೆಚ್ಚಾಗಿಯೇ ಇದೆ. ಚಿನ್ನ, ಬೆಳ್ಳಿ ದರ ಆಗಾಗ್ಗೆ ಏರಿಕೆ, ಇಳಿಕೆ ಆಗುತ್ತಿರುತ್ತದೆ. ಷೇರು ಮಾರುಕಟ್ಟೆಯಲ್ಲಿ ಏರಿಕೆ-ಇಳಿಕೆಯ ಆಧಾರದ ಮೇಲೂ ಆಭರಣ ಬೆಲೆಯಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ.

1. 1 ಗ್ರಾಂ ಬಂಗಾರ
* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ: 5,650 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 6,164 ರೂಪಾಯಿ
2. 8 ಗ್ರಾಂ ಚಿನ್ನ
* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ: 45,200 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ): 49,312 ರೂಪಾಯಿ
3. 10 ಗ್ರಾಂ ಚಿನ್ನ
* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ: 56,500 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ): 61,640 ರೂಪಾಯಿ
4. 100 ಗ್ರಾಂ ಚಿನ್ನ
* 22 ಕ್ಯಾರೆಟ್ ಚಿನ್ನದ ಬೆಲೆ: 5,65,000 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ): 6,16,400 ರೂಪಾಯಿ
* ವಿವಿಧ ನಗರಗಳಲ್ಲಿ ಚಿನ್ನದ ದರ 22 ಕ್ಯಾರಟ್ (10 ಗ್ರಾಂ)
1. ಬೆಂಗಳೂರು - 56,500 ರೂಪಾಯಿ
2. ಮುಂಬೈ - 56,500 ರೂಪಾಯಿ
3. ದೆಹಲಿ - 56,650 ರೂಪಾಯಿ
4. ಕೇರಳ - 56,500 ರೂಪಾಯಿ
5. ಅಹ್ಮದಾಬಾದ್ - 56,550 ರೂಪಾಯಿ
6. ಜೈಪುರ್ - 56,650 ರೂಪಾಯಿ
* ವಿವಿಧ ನಗರಗಳಲ್ಲಿ ಬೆಳ್ಳಿ ದರ (1ಕೆಜಿ)
1. ಬೆಂಗಳೂರು - 75,250 ರೂಪಾಯಿ
2. ಚೆನ್ನೈ - 79,000 ರೂಪಾಯಿ
3. ಮುಂಬೈ 76,000 ರೂಪಾಯಿ
4. ಕೋಲ್ಕತ್ತ 76,000 ರೂಪಾಯಿ
5. ನವದೆಹಲಿ - 76,000 ರೂಪಾಯಿ
ನಿನ್ನೆ ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 56,550ರೂಪಾಯಿ ಇತ್ತು. ಆದರೆ ಇಂದು 56,500 ರೂಪಾಯಿ ಆಗಿದೆ. ಇದನ್ನು ಗಮನಿಸಿದರೆ ನಿನ್ನೆ (ನವೆಂಬರ್ 19) ಇದ್ದ ಬೆಲೆಗಿಂತ 50 ರೂಪಾಯಿ ಇಳಿಕೆ ಆಗಿದೆ. ಇನ್ನು ನಿನ್ನೆ (ನವೆಂಬರ್ 19) ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 61,690 ರೂಪಾಯಿ ಇತ್ತು. ಆದರೆ ಇಂದು (ನವೆಂಬರ್ 20) 61,640 ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆಗಿಂತ 50 ರೂಪಾಯಿ ಇಳಿಕೆ ಆಗಿದೆ.












Click it and Unblock the Notifications