Gold Silver Price: ಚಿನ್ನಾಭರಣ ಖರೀದಿಗೆ ಇಂದು ಸುವರ್ಣ ಸಮಯ: ಬಂಗಾರ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ
ಅಮೆರಿಕ ಸುಂಕ ಘೋಷಿಸಿರುವುದರಿಂದ ಭಾರತ ಸೇರಿದಂತೆ 180 ದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಕುಸಿತ ಉಂಟಾಗಿದೆ. ಭಾರತದಲ್ಲಿ ಮದುವೆ ಹಾಗೂ ಶುಭ ಕಾರ್ಯಗಳು ಆರಂಭವಾಗುವ ಈ ಸಂದರ್ಭದಲ್ಲಿ ಚಿನ್ನಾಭರಣ ಖರೀದಿದಾರರಿಗೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆ ಖುಷಿ ತಂದಿದೆ. ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಚಿನ್ನದ ಬೆಲೆ ಗಗನಕ್ಕೇರಿತ್ತು. ಇದೀಗ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು ಗ್ರಾಹಕರು ಚಿನ್ನಾಭರಣ ಖರೀದಿಗೆ ಮುಗಿಬಿದ್ದಿದ್ದಾರೆ.
ಹೌದು ಭಾರತದಲ್ಲಿ ಇಂದು (ಏಪ್ರಿಲ್ 5) ಚಿನ್ನ ತುಂಬಾ ಅಗ್ಗವಾಗಿದೆ. ಎರಡು ದಿನಗಳಲ್ಲಿ ಚಿನ್ನದ ಬೆಲೆ 2000 ರೂ.ಗಳಿಗೂ ಹೆಚ್ಚು ಇಳಿಕೆಯಾಗಿದೆ. ಜೊತೆಗೆ ಬೆಳ್ಳಿ ದರವು ಕೂಡ 7 ಸಾವಿರ ರೂ.ಗಳಿಗೂ ಹೆಚ್ಚು ಇಳಿಕೆ ಕಂಡಿದೆ. ಹಾಗಾದರೆ ಭಾರತದಲ್ಲಿ ಇಂದು ಚಿನ್ನ ಬೆಳ್ಳಿಯ ಬೆಲೆ ಎಷ್ಟಿದೆ ಎಂದು ಈಗ ತಿಳಿಯೋಣ.

ಏಪ್ರಿಲ್ 5 ರಂದು ಭಾರತದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 89,360 ರೂಪಾಯಿ ಇದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 81,913 ರೂಪಾಯಿ ಇದೆ. ಜೊತೆಗೆ ಇಂದು ಬೆಳ್ಳಿ ಕೆಜಿಗೆ 87,720 ರೂಪಾಯಿಗೆ ಮಾರಾಟವಾಗುತ್ತಿದೆ. ನವದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಪರಿಶೀಲಿಸಿ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 5)
* ದೆಹಲಿಯಲ್ಲಿ 10 ಗ್ರಾಂ ಗಟ್ಟಿ ಚಿನ್ನದ ದರ 89,050 ರೂಪಾಯಿ ಇದ್ದು ಕೆಜಿಗೆ ಬೆಳ್ಳಿ ದರ 87,410 ರೂಪಾಯಿ ಇದೆ.
* ಮುಂಬೈನಲ್ಲಿ 10 ಗ್ರಾಂ ಗಟ್ಟಿ ಚಿನ್ನದ ದರ 89,200 ರೂಪಾಯಿ ಇದ್ದು ಕೆಜಿಗೆ ಬೆಳ್ಳಿ ದರ 87,560 ರೂಪಾಯಿ ಇದೆ
* ಹೈದರಾಬಾದ್‌ನಲ್ಲಿ 10 ಗ್ರಾಂ ಗಟ್ಟಿ ಚಿನ್ನದ ದರ 89,340 ರೂಪಾಯಿ ಇದ್ದು ಕೆಜಿಗೆ ಬೆಳ್ಳಿ ದರ 87,700 ರೂಪಾಯಿ ಇದೆ.
* ಚೆನ್ನೈನಲ್ಲಿ 10 ಗ್ರಾಂ ಗಟ್ಟಿ ಚಿನ್ನದ ದರ 89,460 ರೂಪಾಯಿ ಇದ್ದು ಕೆಜಿಗೆ ಬೆಳ್ಳಿ ದರ 87,810 ರೂಪಾಯಿ ಇದೆ.
* ಕೋಲ್ಕತ್ತಾದಲ್ಲಿ 10 ಗ್ರಾಂ ಗಟ್ಟಿ ಚಿನ್ನದ ದರ 89,080 ರೂಪಾಯಿ ಇದ್ದು ಕೆಜಿಗೆ ಬೆಳ್ಳಿ ದರ 87,440 ರೂಪಾಯಿ ಇದೆ.
* ಬೆಂಗಳೂರಿನಲ್ಲಿ 10 ಗ್ರಾಂ ಗಟ್ಟಿ ಚಿನ್ನದ ದರ 89,270 ರೂಪಾಯಿ ಇದ್ದು ಕೆಜಿಗೆ ಬೆಳ್ಳಿ ದರ 87,431 ರೂಪಾಯಿ ಇದೆ.
*ವಿಜಯವಾಡದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 85,600 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 93,380 ರೂಪಾಯಿ ಇದೆ.
*ಪುಣೆ ಹಾಗೂ ಕೊಯಮತ್ತೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 85,600 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 93,380 ರೂಪಾಯಿ ಇದೆ.
*ಅಹಮದಾಬಾದ್‌ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 85,600 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 90,050 ರೂಪಾಯಿ ಇದೆ.
*ಚಂಡೀಗಢದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 85,250 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 92,990 ರೂಪಾಯಿ ಇದೆ.
*ಕೊಚ್ಚಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 85,600 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 93,380 ರೂಪಾಯಿ ಇದೆ.
*ಲಕ್ನೋದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 85,250 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 92,990 ರೂಪಾಯಿ ಇದೆ.
*ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 85,600 ರೂಪಾಯಿ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 93,380 ರೂಪಾಯಿ ಇದೆ.












Click it and Unblock the Notifications