Gold And Silver Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಮತ್ತೆ ಕುಸಿದ ಚಿನ್ನದ ಬೆಲೆ: ಇಲ್ಲಿದೆ ದರ ಪಟ್ಟಿ
ಬೆಂಗಳೂರು, ನವೆಂಬರ್ 04: ಕಳೆದ ಎರಡು ವಾರಗಳ ಕಾಲ ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆ ಕೆಲ ದಿನಗಳಿಂದ ಇಳಿಕೆ ಕಂಡಿದೆ. ನಿನ್ನೆ(ಭಾನುವಾರ) ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು(ಸೋಮವಾರ) ಮತ್ತೆ ಕಡಿಮೆ ಆಗಿದೆ. ಈ ಹಳದಿ ಲೋಹದ ಬೆಲೆ ಗ್ರಾಮ್ಗೆ ಒಂದು ರೂನಷ್ಟು ಅಲ್ಪ ಇಳಿಕೆ ಕಂಡಿದೆ. 22 ಕ್ಯಾರಟ್ನ ಆಭರಣ ಚಿನ್ನದ ಬೆಲೆ 7,370 ರೂ ಇದ್ದದ್ದು 7,369 ರೂಗೆ ಇಳಿದಿದೆ.
ಕಳೆದ ಶುಕ್ರವಾರದಿಂದ ಮೂರು ಬಾರಿ ಚಿನ್ನದ ಬೆಲೆ ಇಳಿದಿದೆ. ಹತ್ತಿರ ಹತ್ತಿರ ಗ್ರಾಮ್ಗೆ 90 ರೂನಷ್ಟು ಕಡಿಮೆ ಆಗಿದೆ. ಇಂದು (ಸೋಮವಾರ) 1 ರೂ ಮಾತ್ರವೇ ಇಳಿಕೆ ಆಗಿದೆ. ಬೆಳ್ಳಿ ಬೆಲೆಯ ಯಥಾಸ್ಥಿತಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 73,690 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 80,390 ರುಪಾಯಿ ಆಗಿದೆ. ಹಾಗಾದರೇ ವಿವಿಧ ನಗರದಲ್ಲಿ ನವೆಂಬರ್ 04 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ನವೆಂಬರ್ 4 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,690 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,390 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,290 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 97 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,690 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 80,390 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 97 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 73,690 ರೂ
ಚೆನ್ನೈ: 73,690 ರೂ
ಮುಂಬೈ: 73,690 ರೂ
ದೆಹಲಿ: 73,790 ರೂ
ಕೋಲ್ಕತಾ: 73,690 ರೂ
ಕೇರಳ: 73,690 ರೂ
ಅಹ್ಮದಾಬಾದ್: 73,740 ರೂ
ಜೈಪುರ್: 73,790 ರೂ
ಲಕ್ನೋ: 73,790 ರೂ
ಭುವನೇಶ್ವರ್: 73,690 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 3,680 ರಿಂಗಿಟ್ (70,910 ರುಪಾಯಿ)
ದುಬೈ: 3,070 ಡಿರಾಮ್ (70,270 ರುಪಾಯಿ)
ಅಮೆರಿಕ: 820 ಡಾಲರ್ (68,940 ರುಪಾಯಿ)
ಸಿಂಗಾಪುರ: 1,109 ಸಿಂಗಾಪುರ್ ಡಾಲರ್ (70,850 ರುಪಾಯಿ)
ಕತಾರ್: 3,080 ಕತಾರಿ ರಿಯಾಲ್ (71,030 ರೂ)
ಸೌದಿ ಅರೇಬಿಯಾ: 3,040 ಸೌದಿ ರಿಯಾಲ್ (68,050 ರುಪಾಯಿ)
ಓಮನ್: 324.50 ಒಮಾನಿ ರಿಯಾಲ್ (70,860 ರುಪಾಯಿ)
ಕುವೇತ್: 248.30 ಕುವೇತಿ ದಿನಾರ್ (68,100 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)ಎಷ್ಟು?
ಬೆಂಗಳೂರು: 9,700 ರೂ
ಚೆನ್ನೈ: 10,600 ರೂ
ಮುಂಬೈ: 9,700 ರೂ
ದೆಹಲಿ: 9,700 ರೂ
ಕೋಲ್ಕತಾ: 9,700 ರೂ
ಕೇರಳ: 10,600 ರೂ
ಅಹ್ಮದಾಬಾದ್: 9,700 ರೂ
ಜೈಪುರ್: 9,700 ರೂ
ಲಕ್ನೋ: 9,700 ರೂ
ಭುವನೇಶ್ವರ್: 10,600 ರೂ
ಸದ್ಯ ಸಣ್ಣ ಪ್ರಮಾಣದಲ್ಲಿ ಚಿನ್ನದ ಬೆಲೆ ಇಳಿಕೆಯಾಗುವ ಮೂಲಕ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ ಒಂದು ಲಕ್ಷಕ್ಕಿಂತ ಹೆಚ್ಚಾಗಲಿದೆ ಎನ್ನಲಾಗಿದೆ.












Click it and Unblock the Notifications