Gold Price on August 20: ಬಂಗಾರ ದರ ಮತ್ತೆ ಭರ್ಜರಿ ಇಳಿಕೆ: ಇಲ್ಲಿದೆ ಆಗಸ್ಟ್ 20ರ ದರಪಟ್ಟಿ
Gold Price on August 20: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲಿರುತ್ತದೆ. ಅದರಲ್ಲೂ ಶ್ರಾವಣ ಮಾಸದ ಆರಂಭದಿಂದಲೂ ಬೆಲೆ ಭರ್ಜರಿ ಇಳಿಕೆಯತ್ತ ಸಾಗುತ್ತಾ ಬಂದಿದೆ. ಹಾಗಾದ್ರೆ ಇಂದು (ಆಗಸ್ಟ್ 20) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬಂಗಾರ ದರಗಳ ವಿವರ: ನಿನ್ನೆ (ಆಗಸ್ಟ್ 19) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 92,350 ರೂಪಾಯಿ ಇದ್ದರೆ, ಇಂದು (ಆಗಸ್ಟ್ 20) ರೂಪಾಯಿಗೆ ಇಳಿಕೆ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,00,750 ರೂಪಾಯಿ ಇತ್ತು. ಇನ್ನು ಇಂದು 1,00,150 ರೂಪಾಯಿಗೆ ಇಳಿಕೆ ಆಗಿದೆ. ಹಾಗಾದರೆ, ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ, ಬೆಳ್ಳಿ ದರ ಪಟ್ಟಿ ಇಲ್ಲಿದೆ ಪರಿಶೀಲಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 73,440 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 80,120 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 91,800 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,00,150
ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 91,800 ರೂಪಾಯಿ
* ಚೆನ್ನೈ - 91,800 ರೂಪಾಯಿ
* ಮುಂಬೈ - 91,800 ರೂಪಾಯಿ
* ಕೋಲ್ಕತ್ತಾ - 91,800 ರೂಪಾಯಿ
* ನವದೆಹಲಿ - 91,950ರೂಪಾಯಿ
* ಹೈದರಾಬಾದ್ - 91,800 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,00,150 ರೂಪಾಯಿ
* ಚೆನ್ನೈ - 1,00,150 ರೂಪಾಯಿ
* ಮುಂಬೈ - 1,00,150 ರೂಪಾಯಿ
* ಕೋಲ್ಕತ್ತಾ - 1,00,150 ರೂಪಾಯಿ
* ನವದೆಹಲಿ - 1,00,300 ರೂಪಾಯಿ
* ಹೈದರಾಬಾದ್ - 1,00,150 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,15,000 ರೂಪಾಯಿ (1,000 ಇಳಿಕೆ)
* ಚೆನ್ನೈ - 1,25,000 ರೂಪಾಯಿ (1,000 ಇಳಿಕೆ)
* ಮುಂಬೈ - 1,15,000 ರೂಪಾಯಿ (1,000 ಇಳಿಕೆ)
* ಕೋಲ್ಕತ್ತಾ - 1,15,000 ರೂಪಾಯಿ (1,000ಇಳಿಕೆ)
* ನವದೆಹಲಿ - 1,15,000 ರೂಪಾಯಿ (1,000 ಇಳಿಕೆ)
* ಹೈದರಾಬಾದ್ - 1,25,000 ರೂಪಾಯಿ (1,000 ಇಳಿಕೆ)
ಬಂಗಾರ, ಬೆಳ್ಳಿ ದರಪಟ್ಟಿ: ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಸಾಮಾನ್ಯ ದಿನಗಳಲ್ಲೂ ಸಹ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇರುವುದಿಲ್ಲ. ದರ ಕಡಿಮೆಯಿರಲಿ, ಬಿಡಲಿ ಆಭರಣಗಳನ್ನು ಕಷ್ಟದ ಕಾಲಕ್ಕೆ ಆಗುತ್ತವೆಂದು ಕೊಂಡುಕೊಳ್ಳುತ್ತಲಿರುತ್ತಾರೆ. ಹಬ್ಬ, ಹರಿ ದಿನಗಳಲ್ಲಂತೂ ತುಸು ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಕೊಳ್ಳುತ್ತಾರೆ. ಅದರಲ್ಲೂ ಇದೀಗ ಶ್ರಾವಣ ಮಾಸದಲ್ಲಿ ದರ ಕಡಿಮೆಯಾಗುತ್ತಲಿದೆ. ಮುಂದಿನ ದಿನಗಳಲ್ಲಿ ಏರಿಕೆಯತ್ತ ಸಾಗಿದರೂ ಆಶ್ಚರ್ಯವಿಲ್ಲ. ಆದ್ದರಿಂದ, ಈಗಲೇ ಕೊಂಡುಕೊಳ್ಳುವವರಿಗೆ ಇದೊಂದು ಸುವರ್ಣಾವಕಾಶ ಎಂದು ಹೇಳಬಹುದು.












Click it and Unblock the Notifications