Gold Price on August 18: ಬಂಗಾರ ದರ ಭರ್ಜರಿ ಇಳಿಕೆ: ಆಗಸ್ಟ್ 18ರ ದರಪಟ್ಟಿ ಹೀಗಿದೆ
Gold Price on August 18: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲಿರುತ್ತದೆ. ಅದರಲ್ಲೂ ಶ್ರಾವಣ ಮಾಸದ ಆರಂಭದಲ್ಲಿ ಬೆಲೆ ಭರ್ಜರಿ ಇಳಿಕೆಯತ್ತ ಸಾಗಿತ್ತು. ಹಾಗೆಯೇ ಇದೀಗ ಇಂದು (ಆಗಸ್ಟ್ 18) ಕೂಡ ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಇಳಿಕೆಯಾಗಿದೆ. ಹಾಗಾದ್ರೆ, ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬಂಗಾರ ದರಗಳ ವಿವರ: ನಿನ್ನೆ (ಆಗಸ್ಟ್ 17) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 92,750 ರೂಪಾಯಿ ಇದ್ದರೆ, ಇಂದು (ಆಗಸ್ಟ್ 18) 92,740 ರೂಪಾಯಿಗೆ ಇಳಿಕೆಯಾಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,01,180 ರೂಪಾಯಿ ಇತ್ತು. ಇನ್ನು ಇಂದು 1,01,170 ರೂಪಾಯಿಗೆ ಇಳಿಕೆಯಾಗಿದೆ. ಹಾಗಾದರೆ, ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ, ಬೆಳ್ಳಿ ದರ ಪಟ್ಟಿ ಇಲ್ಲಿದೆ ಪರಿಶೀಲಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 74,192 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 80,936 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 92,740 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,01,170
ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 92,740 ರೂಪಾಯಿ
* ಚೆನ್ನೈ - 92,740 ರೂಪಾಯಿ
* ಮುಂಬೈ - 92,740 ರೂಪಾಯಿ
* ಕೋಲ್ಕತ್ತಾ - 92,740 ರೂಪಾಯಿ
* ನವದೆಹಲಿ - 92,890 ರೂಪಾಯಿ
* ಹೈದರಾಬಾದ್ - 92,740 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,01,170 ರೂಪಾಯಿ
* ಚೆನ್ನೈ - 1,01,170 ರೂಪಾಯಿ
* ಮುಂಬೈ - 1,01,170 ರೂಪಾಯಿ
* ಕೋಲ್ಕತ್ತಾ - 1,01,170 ರೂಪಾಯಿ
* ನವದೆಹಲಿ - 1,01,320 ರೂಪಾಯಿ
* ಹೈದರಾಬಾದ್ - 1,01,170 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,16,100 ರೂಪಾಯಿ (100 ಇಳಿಕೆ)
* ಚೆನ್ನೈ - 1,26,100 ರೂಪಾಯಿ (100 ಇಳಿಕೆ)
* ಮುಂಬೈ - 1,16,100 ರೂಪಾಯಿ (100 ಇಳಿಕೆ)
* ಕೋಲ್ಕತ್ತಾ - 1,16,100 ರೂಪಾಯಿ (100 ಇಳಿಕೆ)
* ನವದೆಹಲಿ - 1,16,100 ರೂಪಾಯಿ (100 ಇಳಿಕೆ)
* ಹೈದರಾಬಾದ್ - 1,26,100 ರೂಪಾಯಿ (100 ಇಳಿಕೆ)
ಬಂಗಾರ, ಬೆಳ್ಳಿ ದರಪಟ್ಟಿ: ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಸಾಮಾನ್ಯ ದಿನಗಳಲ್ಲೂ ಸಹ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇರುವುದಿಲ್ಲ. ದರ ಕಡಿಮೆಯಿರಲಿ, ಬಿಡಲಿ ಆಭರಣಗಳನ್ನು ಕಷ್ಟದ ಕಾಲಕ್ಕೆ ಆಗುತ್ತವೆಂದು ಖರೀದಿ ಮಾಡುತ್ತಾರೆ. ಹಬ್ಬ, ಹರಿ ದಿನಗಳಲ್ಲಂತೂ ತುಸು ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಕೊಳ್ಳುತ್ತಾರೆ. ಅದರಲ್ಲೂ ಶ್ರಾವಣ ಮಾಸದಲ್ಲಿ ದರ ಕಡಿಮೆಯಾಗುತ್ತಲಿದೆ. ಮುಂದಿನ ದಿನಗಳಲ್ಲಿ ಏರಿಲೆಯಾದರೂ ಆಗಬಹುದು. ಆದ್ದರಿಂದ ಈಗಲೇ ಕೊಂಡುಕೊಳ್ಳುವುದಕ್ಕೆ ಉತ್ತಮ ಸಮಯ ಎನ್ನಲಾಗುತ್ತಿದೆ.












Click it and Unblock the Notifications