Gold Price on 11th May: ಗ್ರಾಹಕರಿಗೆ ಕಣ್ಣೀರು ತರಿಸಿದ ಬಂಗಾರ: ಇಂದಿನ ಚಿನ್ನ ಬೆಳ್ಳಿ ಬೆಲೆ ಹೆಚ್ಚಳ
ಅಕ್ಷಯ ತೃತೀಯ ನಂತರ (ಮೇ 11) ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಅಕ್ಷಯ ತೃತೀಯ ದಿನ ಎಲ್ಲೆಡೆ ಚಿನ್ನಾಭರಣ ಖರೀದಿ ಜೋರಾಗಿತ್ತು. ರಾಜ್ಯದಲ್ಲಿ ಚಿನ್ನ 2,050 ಕೆಜಿ ಮಾರಾಟವಾಗಿದ್ದು ಮಾರಾಟಗಾರರು ಸಂತೋಷಗೊಂಡಿದ್ದಾರೆ. ಆದರೆ ಇಂದು ಚಿನ್ನಾಭರಣಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ ಚಿನ್ನಾಭರಣ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ.
ಇಂದಿನ ಚಿನ್ನ ಬೆಳ್ಳಿ ಬೆಲೆ ಹೆಚ್ಚಾಗಿದ್ದು ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿ ಮಾಡದೇ ಇರುವ ಗ್ರಾಹಕರಿಗೆ ಬೇಸರ ತಂದಿದೆ. ಹಬ್ಬದ ಬಳಿಕ ಚಿನ್ನಾಭರಣಗಳ ಬೆಲೆ ಕಡಿಮೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಚಿನ್ನದ ಬೆಲೆ ಶೇ.20ರಷ್ಟು ಹೆಚ್ಚಾಗಿದೆ. ಆದರೆ ಇಂದು ಚಿನ್ನದ ಬೆಲೆ ಎಂದಿಗಿಂತ ಕೊಂಚ ಹೆಚ್ಚಾಗಿದೆ.

*ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ಬೆಲೆ ಮೇ 10ರಂದು ಹೇಗಿದೆ ಎಂದು ನೋಡುವುದಾದರೆ- ಬೆಂಗಳೂರಿನಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 66,560 ರೂಪಾಯಿ ಇದೆ. ಇನ್ನೂ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 73,700 ರೂಪಾಯಿ ಇದೆ.
*ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ಹೇಗಿದೆ ಎಂದು ತಿಳಿಯುವುದಾದರೆ- ಕೋಲ್ಕತಾದಲ್ಲಿ 67,560 ರೂಪಾಯಿ ಇದೆ. ಕೇರಳದಲ್ಲಿ 67,560 ರೂಪಾಯಿ, ಅಹ್ಮದಾಬಾದ್ ನಲ್ಲಿ 66,200 ರೂಪಾಯಿ ಇದ್ದರೆ, ಬೆಂಗಳೂರಿನಲ್ಲಿ 66,560 ರೂಪಾಯಿ ಇದೆ. ಇನ್ನೂ ಚೆನ್ನೈನಲ್ಲಿ 67,710 ರೂಪಾಯಿ ಇದ್ದರೆ, ಮುಂಬೈನಲ್ಲಿ 67,560 ರೂಪಾಯಿ, ದೆಹಲಿಯಲ್ಲಿ 67,710 ರೂಪಾಯಿ, ಜೈಪುರ್ ದಲ್ಲಿ 66,300 ರೂಪಾಯಿ ಇದ್ದರೆ, ಲಕ್ನೋದಲ್ಲಿ 66,300 ರೂಪಾಯಿ ಇದ್ದರೆ ಭುವನೇಶ್ವರ್ದಲ್ಲಿ 66,150 ರೂಪಾಯಿ ಇದೆ.

*ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಹೇಗಿದೆ ಎಂದು ತಿಳಿಯುವುದಾದರೆ- ಇನ್ನೂ ಕತಾರ್: 2,650 ಕತಾರಿ ರಿಯಾಲ್ (60,692 ರೂ), ಸೌದಿ ಅರೇಬಿಯಾ: 2,660 ಸೌದಿ ರಿಯಾಲ್ (59,223 ರುಪಾಯಿ), ಓಮನ್: 280 ಒಮಾನಿ ರಿಯಾಲ್ (60,742 ರುಪಾಯಿ), ಕುವೇತ್: 220.50 ಕುವೇತಿ ದಿನಾರ್ (59,859 ರುಪಾಯಿ) ಮಲೇಷ್ಯಾ: 3,360 ರಿಂಗಿಟ್ (59,156 ರುಪಾಯಿ), ದುಬೈ: 2,595 ಡಿರಾಮ್ (59,078 ರುಪಾಯಿ), ಅಮೆರಿಕ: 705 ಡಾಲರ್ (58,868 ರುಪಾಯಿ), ಸಿಂಗಾಪುರ: 976 ಸಿಂಗಾಪುರ್ ಡಾಲರ್ (60,073 ರುಪಾಯಿ) ಇದೆ.

Click it and Unblock the Notifications