Gold Price: ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ, ಬೆಳ್ಳಿಯ ಬೆಲೆ ಎಷ್ಟಾಯ್ತು?
ಚಿನ್ನದ ಬೆಲೆಯಲ್ಲಿ ಸತತವಾಗಿ ಕುಸಿತ ದಾಖಲಾಗುತ್ತಿತ್ತು, ಆದರೆ ದಸರಾ & ಆಯುಧ ಪೂಜೆ ಸಂಭ್ರಮದ ಸಮಯದಲ್ಲೇ ಇದೀಗ ಬಂಗಾರ ಹಾಗೂ ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆಯು ಕಂಡುಬಂದಿದೆ. ಚಿನ್ನದ ಮಾರುಕಟ್ಟೆಯಲ್ಲಿ ಇಂದು ಒಂದೇ ದಿನ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರುವ ಮೂಲಕ, 70,950 ರೂಪಾಯಿ ಗಡಿ ದಾಟಿದೆ 22 ಕ್ಯಾರೆಟ್‌ನ ಚಿನ್ನ. ಹಾಗಾದ್ರೆ ಬೆಳ್ಳಿ ಬೆಲೆ ಇಂದು ಎಷ್ಟಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಆಭರಣ ಪ್ರಿಯರು ಬಂಗಾರ & ಬೆಳ್ಳಿ ಖರೀದಿ ಮಾಡಬೇಕು ಅಂತಾ ಕಾಯುತ್ತಿದ್ದರು. ಆದರೆ ದಸರಾ & ಆಯುಧ ಪೂಜೆ ಸಂಭ್ರಮದ ಸಮಯದಲ್ಲೇ ಆಭರಣ ಪ್ರಿಯರಿಗೆ ಭರ್ಜರಿ ಆಘಾತ ಎದುರಾದಂತೆ ಕಾಣುತ್ತಿದೆ. ಚಿನ್ನದ ಬೆಲೆಯಲ್ಲಿ ದಿಢೀರ್ ಭಾರಿ ಏರಿಕೆ ಕಂಡುಬಂದಿದೆ. ಈ ಒಂದೇ ದಿನ ಚಿನ್ನದ ಬೆಲೆಯಲ್ಲಿ ಸುಮಾರು 700 ರೂಪಾಯಿ ಏರಿಕೆ ಕಂಡು ಬಂದು ಭಾರಿ ಶಾಕ್ ಸಿಕ್ಕಂತಾಗಿದೆ. ಅಲ್ಲದೆ ಮತ್ತೊಂದು ಕಡೆ ಬೆಳ್ಳಿ ಬೆಲೆಯಲ್ಲಿ ಕೂಡ ದಿಢೀರ್ ಏರಿಕೆಯು ಕಂಡು ಬಂದಿದೆ. ಹಾಗಾದ್ರೆ ಇಂದು ಎಷ್ಟಿದೆ ಚಿನ್ನ & ಬೆಳ್ಳಿ ಬೆಲೆ? ಮಾಹಿತಿಗಾಗಿ ಮುಂದೆ ಓದಿ.

ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ?
ಹಳದಿ ಲೋಹ ಚಿನ್ನದ ಬೆಲೆ ಮತ್ತೆ ಮತ್ತೆ ಹೆಚ್ಚಾಗುವ ಮೂಲಕ, ಆಭರಣ ಖರೀದಿ ಮಾಡಲು ಕಾದು ಕುಳಿತ ಮಧ್ಯಮ ವರ್ಗದ ಜನರಿಗೆ ಪದೇ ಪದೇ ಭಾರಿ ಆಘಾತವನ್ನೇ ನೀಡ್ತಾ ಇದೆ. ಅಂದಹಾಗೆ ಚಿನ್ನದ ಬೆಲೆ ಇಂದು ಪ್ರತಿ 10 ಗ್ರಾಂಗೆ ಹತ್ತಿರ ಹತ್ತಿರ 700 ರೂಪಾಯಿ ಹೆಚ್ಚಾಗಿದ್ದು, ದಸರಾ & ಆಯುಧ ಪೂಜೆ ಸಂಭ್ರಮದ ಸಮಯದಲ್ಲೇ ಏರಿಕೆ ಕಾಣುವ ಮೂಲಕ ಸಾಮಾನ್ಯ ಜನರಿಗೆ ಶಾಕ್ ಕೊಟ್ಟಿದೆ. ಹಾಗೇ ಇದರ ಜೊತೆಗೆ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆಯ ಕಂಡಿದ್ದು ಬೆಳ್ಳಿ ದರ ಪ್ರತಿ 1 ಕೆಜಿಗೆ 2000 ಸಾವಿರ ರೂಪಾಯಿ ಏರಿಕೆ ಕಂಡಿದೆ.
ಬೆಳ್ಳಿ ಬೆಲೆ 96,000 ರೂಪಾಯಿ!
ಹೀಗೆ ಬೆಲೆ ಏರಿಕೆ ನಂತರ ಭಾರತದಲ್ಲಿ ಈಗ ಪ್ರತಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 70,950 ರೂಪಾಯಿ ತಲುಪಿದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆಯು 77,400 ರೂಪಾಯಿ ಇದೆ. 100 ಗ್ರಾಂ ಬೆಳ್ಳಿ ಬೆಲೆ 9,600 ರೂಪಾಯಿ ಆಗಿದೆ. ಹಾಗೇ ಪ್ರತಿ 1 ಕೆಜಿ ಬೆಳ್ಳಿಯ ಬೆಲೆ ಇದೀಗ ಬರೋಬ್ಬರಿ 96,000 ರೂಪಾಯಿ ಆಗಿದೆ. ಹಾಗೇ ಮತ್ತೊಂದು ಕಡೆ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಸರಿ ಸುಮಾರು ಇದೇ ಬೆಲೆಯಲ್ಲಿ ಚಿನ್ನ & ಬೆಳ್ಳಿ ಮಾರಾಟ ಆಗುತ್ತಿದೆ.












Click it and Unblock the Notifications