Gold Rate: ವಾರದ ಕುಸಿತದ ನಂತರ ಪುಟಿದೆದ್ದ ಹಳದಿ ಲೋಹ: ಫೆ.22ರ ಚಿನ್ನ-ಬೆಳ್ಳಿ ದರಗಳ ಸಂಪೂರ್ಣ ಮಾಹಿತಿ
ಬೆಂಗಳೂರು: ಚಿನ್ನಕ್ಕೆ ಭಾರತದಲ್ಲಿ ಅತ್ಯಧಿಕ ಬೇಡಿಕೆ ಇದೆ. ಬೆಳ್ಳಿ ದರ ಗಗನ ಮುಟ್ಟಿದ್ದರಿಂದ ಅದಕ್ಕೂ ಭಾರೀ ಡಿಮ್ಯಾಂಡ್ ಬಂದಿದೆ. ಹೂಡಿಕೆದಾರರು ಮಾತ್ರವಲ್ಲದೇ ಗ್ರಾಹಕರು ಈ ಲೋಹಗಳತ್ತ ಸದಾ ಒಲವು ಹೊಂದಿದ್ದಾರೆ. ಇವುಗಳ ಬೆಲೆಯಲ್ಲಿನ ಏರಿಳಿತ ಮುಂದುವರಿದಿದೆ. ಗರಿಷ್ಠ ಮಟ್ಟದ ತಲುಪಿದ ಚಿನ್ನದ ದರ ನಿರಂತರ ಕುಸಿತ ಕಂಡು, ಮತ್ತೆ ಸಣ್ಣ ಪ್ರಮಾಣದಲ್ಲಿ ಚೇತರಿಕೆ ಹಾದಿ ಹಿಡಿದಿದೆ. ಇದಕ್ಕೆ ಒಂದು ವಾರದಲ್ಲಿ ದರದಲ್ಲಾದ ಬದಲಾವಣೆಗಳೇ ಸಾಕ್ಷಿ.
ವಾರದ ಹಿಂದೆ (ಫೆಬ್ರವರಿ 16) 22 ಕ್ಯಾರಟ್ ಚಿನ್ನದ 01 ಗ್ರಾಂ ದರ 14,340 ರೂಪಾಯಿ ಹಾಗೂ 24 ಕ್ಯಾರಟ್‌ನ ಒಂದು ಗ್ರಾಂ ಬಂಗಾರದ ಬೆಲೆಯು 15,644 ರೂಪಾಯಿ ಇತ್ತು. ಅದಾದ ಬಳಿಕ ಎರಡು ದಿನ ಅಂದರೆ ಫೆಬ್ರವರಿ 17 ಕ್ರಮವಾಗಿ ಒಂದು ಗ್ರಾಂ ಚಿನ್ನ ದರವು 14,135 ರೂ. ಮತ್ತು 15,420 ಹಾಗೂ ಫೆಬ್ರವರಿ 18ರಂದು ಕ್ರಮವಾಗಿ 14,135 ರೂ. ಮತ್ತು 15,420 ರೂಪಾಯಿಗೆ ಇಳಿಕೆ ಕಂಡಿತು.

ನಂತರ ಫೆಬ್ರವರಿ 19ರಿಂದ ಶನಿವಾರವರೆಗೆ (ಫೆ.21) ನಿರಂತರವಾಗಿ ಮೂರು ದಿನ ಏರಿಕೆ ಆಗುವ ಮೂಲಕ ಚೇತರಿಕೆಯ ಹಾದಿ ಹಿಡಿಯಿತು. ಫೆ.21ರವರೆಗೆ ಕಳೆದ ಮೂರು ದಿನ 22 ಕ್ಯಾರಟ್ ಚಿನ್ನ ಕ್ರಮವಾಗಿ 14,435 ರೂಪಾಯಿ, 14,425 ರೂಪಾಯಿ ಮತ್ತು 14,600 ರೂಪಾಯಿ ಹೆಚ್ಚಾಯಿತು. ಅದೇ ರೀತಿ 24 ಕ್ಯಾರಟ್ ಬಂಗಾರವು ಕ್ರಮವಾಗಿ 15,649 ರೂಪಾಯಿ 17,737 ರೂಪಾಯಿ ಮತ್ತು 15,928 ರೂಪಾಯಿ ಏರಿಕೆ ಆಯಿತು. ಇಂದು ಭಾನುವಾರ ಫೆಬ್ರವರಿ 22ರಂದು ಚಿನ್ನದ ಬೆಲೆ ಸ್ಥಿರವಾಗಿದೆ.
ಒಂದು ವಾರದ ಬೆಳ್ಳಿ ದರದಲ್ಲಿ ಬದಲಾವಣೆ
ಇನ್ನು ಬೆಳ್ಳಿ ದರವು ಕಳೆದ ಒಂದು ವಾರದಲ್ಲಿ ಎರಡು ಬಾರಿ ಕನಿಷ್ಠ ಮಟ್ಟಕ್ಕೆ ಕುಸಿದ್ದು ಬಿಟ್ಟರೆ ಉಳಿದೆಲ್ಲ ದಿನಗಳು ಏರುಗತಿಯಲ್ಲಿತ್ತು. ಕೆಜಿ ಬೆಳ್ಳಿ ದರ ಫೆಬ್ರವರಿ 16ರಂದು 2,68 ಲಕ್ಷ ರೂ. ಫೆಬ್ರವರಿ 17ರಂದು 2,60 ಲಕ್ಷ ರೂ. ನಂತರದ ಇನ 2,55 ಲಕ್ಷ ರೂ.ಗೆ ಇಳಿಯಿತು. ಫೆಬ್ರವರಿ 19 ರಂದು ಹೆಚ್ಚಾದ ಬೆಳ್ಳಿ ದರವು 2.70 ಲಕ್ಷ ರೂ. ತಲುಪಿದರೆ ಫೆಬ್ರವರಿ 20ಕ್ಕೆ ಯಥಾ ಸ್ಥಿತಿಯಲ್ಲಿತ್ತು. ಫೆಬ್ರವರಿ 21ಕ್ಕೆ 2.75ಲಕ್ಷ ರೂ.ಗೆ ಏರಿತು. ಇಂದು ಫೆಬ್ರವರಿ 22 ರಂದು ಅದೇ ದರ ಸ್ಥಿರವಾಗಿದೆ.
ಜಾಗತಿಕ ಆರ್ಥಿಕ ಪರಿಸ್ಥಿತಿಗಳು, ಯುದ್ಧ ಸನ್ನಿವೇಶಗಳು, ಸುಂಕ ನೀತಿ, ಡಾಲರ್ ಮೌಲ್ಯ ಕುಸಿತದಿಂದ ಹೆಚ್ಚಾಗಿದ್ದ ಚಿನ್ನದ ಬೆಲೆಯು ಇದೀಗ ಮತ್ತೆ ಕುಸಿತ ಕಾಣುತ್ತಿದೆ. ಇದಕ್ಕೆ ರಷ್ಯಾ ಹಾಗೂ ಯುಎಸ್ ಒಪ್ಪಂದಗಳು ಸೇರಿದಂತೆ ಕೆಲವು ಕಾರಣಗಳನ್ನು ಉಲ್ಲೇಖಿಸಲಾಗುತ್ತಿದೆ. ಈ ಎರಡು ಲೋಹಗಳ ಮೇಲಿನ ದರ ಬದಲಾವಣೆಯು ಹೂಡಿಕೆದಾರರು, ವ್ಯಾಪಾರಿಗಳನ್ನು ಚಿಂತೆಗೀಡು ಮಾಡಿದೆ. ಅಸ್ಥಿರತೆಯ ಬೆಲೆಗಳು ಖರೀದಿ, ಹೂಡಿಕೆ, ಮಾರಾಟದಲ್ಲಿ ನೇರ ಪರಿಣಾಮ ಬೀರುತ್ತವೆ.












Click it and Unblock the Notifications