Gold Price: ಚಿನ್ನದ ಬೆಲೆಯಲ್ಲಿ ಬರೋಬ್ಬರಿ 17,900 ರೂ. ಇಳಿಕೆ! ಇಂದು ಎಷ್ಟಿದೆ ಚಿನ್ನದ ಬೆಲೆ!
Gold prices fall: ಕರ್ನಾಟಕದಲ್ಲಿ ಚಿನ್ನದ ಬೆಲೆ ಭಾರೀ ಕುಸಿತವಾಗಿದೆ. ಇದು ಚಿನ್ನ ಪ್ರಿಯರ ಖುಷಿ ಹೆಚ್ಚಳಕ್ಕೆ ಕಾರಣವಾಗಿದೆ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಡಾಲರ್ ಬೆಲೆ ಹೆಚ್ಚಳವಾಗುತ್ತಿದ್ದು, ಚಿನ್ನದ ಬೆಲೆ ಗಣನೀಯವಾಗಿ ಕುಸಿತವಾಗುತ್ತಿದೆ. ಡಾಲರ್ ಬೆಲೆ ಹೆಚ್ಚಾಗುತ್ತಿರುವುದರಿಂದ ಚಿನ್ನದ ಬೆಲೆ ಏಕಾಏಕಿ ಕುಸಿತವಾಗಿದೆ. ಇದು ಸಹಜವಾಗಿಯೇ ಚಿನ್ನ ಪ್ರಿಯರಿಗೆ ಖುಷಿಯಾಗಿದೆ. ಚಿನ್ನದ ಬೆಲೆಯ ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ಚಿನ್ನ ಖರೀದಿ ಪ್ರಕ್ರಿಯೆ ಜೋರಾಗುವ ಸಾಧ್ಯತೆ ಇದೆ. ಚಿನ್ನ ಎಂದರೆ, ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಆದರೆ ಬೆಲೆ ನೋಡಿ ಜನ ಕಂಗಾಲಾಗಿದ್ದರು. ಈಗ ಚಿನ್ನದ ಬೆಲೆ ಭರ್ಜರಿ ಕುಸಿತ ಕಂಡಿದೆ.
ಚಿನ್ನ ಎನ್ನುವುದು ಸಂಕಷ್ಟದ ಸಮಯದಲ್ಲಿ ಇರುವ ಆರ್ಥಿಕ ಖಜಾನೆ. ಭವಿಷ್ಯದ ದೃಷ್ಟಿಯಿಂದಲೇ ಚಿನ್ನ ಖರೀದಿ ಮಾಡುವವರ ಸಂಖ್ಯೆ ಹೆಚ್ಚು. ಚಿನ್ನದ ಬೆಲೆ ಇಳಿಕೆಯಾದಾಗಲೇ ಚಿನ್ನ ಖರೀದಿ ಮಾಡುವುದು ಜಾಸ್ತಿ. ಕಳೆದ ಎರಡು ತಿಂಗಳ ಹಿಂದೆ ಚಿನ್ನದ ಬೆಲೆ ಇನ್ನೇನು 1 ಲಕ್ಷ ರೂಪಾಯಿ ತಲುಪಲಿದೆ. ಇನ್ಮುಂದೆ ಚಿನ್ನ ತೆಗೆದುಕೊಳ್ಳುವುದು ಕನಸು ಅಂತಲೇ ಚಿನ್ನ ಪ್ರಿಯರು ಭಯ ಬಿದಿದ್ದರು. ಈಗ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ಇಳಿಕೆಯಾಗುತ್ತಿದ್ದು, ಚಿನ್ನ ಹಾಗೂ ಬೆಳ್ಳಿ ಖರೀದಿಯ ಕಡೆ ಜನರ ಒಲವು ಹೆಚ್ಚಾಗಿದೆ.

ಇಂದಿನ ಚಿನ್ನದ ಬೆಲೆ ಎಷ್ಟು ?
ಚಿನ್ನದ ಬೆಲೆಯು ಬುಧವಾರ (ನವೆಂಬರ್ 6ಕ್ಕಿಂತ) ಗುರುವಾರ (ನವೆಂಬರ್ 7ಕ್ಕೆ) ಇನ್ನಷ್ಟು ಇಳಿಕೆಯಾಗಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯೂ ಭರ್ಜರಿ ಇಳಿಕೆಯಾಗಿದೆ. ಶುದ್ಧ ಚಿನ್ನ 24 ಕ್ಯಾರೆಟ್ ಬಂಗಾರದ ಬೆಲೆ ಭಾರೀ ಹಾಗೂ ದಾಖಲೆಯ ಬೆಲೆ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು 100 ಗ್ರಾಂಗೆ 17,900 ರೂಪಾಯಿ ಇಳಿಕೆಯಾಗಿದೆ. ನೆನ್ನೆ 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 8,03,500 ರೂಪಾಯಿ ಇತ್ತು. ನವೆಂಬರ್ 7ಕ್ಕೆ 7,85,600 ರೂಪಾಯಿ ಆಗಿದೆ.
ಇನ್ನು ಶುದ್ಧ ಚಿನ್ನ ಬೆಲೆ 1 ಗ್ರಾಂ 7,856 ರೂಪಾಯಿ ಆಗಿದೆ. ನೆನ್ನೆ ಇದು 8,035 ರೂಪಾಯಿ ಇತ್ತು. 22 ಕ್ಯಾರೆಟ್ ಆಭರಣ ಚಿನ್ನ ಬೆಲೆಯಲ್ಲೂ ಮಾರುಕಟ್ಟೆಯಲ್ಲಿ ಏಕಾಏಕಿ ಕುಸಿತ ಮುಂದುವರಿದಿದೆ. ಪ್ರತಿ 100 ಗ್ರಾಂ ಆಭರಣ ಚಿನ್ನ ಬೆಲೆಯು ಇದೀಗ 16,500 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ 100 ಗ್ರಾಂಗೆ 7,20,000 ಸಾವಿರ ರೂಪಾಯಿ ಆಗಿದೆ. 22 ಕ್ಯಾರೆಟ್‌ನ ಪ್ರತಿ 10 ಗ್ರಾಂ ಆಭರಣ ಚಿನ್ನ ಬೆಲೆ 72,000 ರೂಪಾಯಿ ಆಗಿದೆ. ಇದು ನೆನ್ನೆಗೆ ಹೋಲಿಕೆ ಮಾಡಿದರೆ, ಬರೋಬ್ಬರಿ 1,650 ರೂಪಾಯಿ ಇಳಿಕೆ ಆಗಿದೆ.
ಚಿನ್ನದ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಳಿಕೆಯಾಗುತ್ತಿದೆ. ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದ ಮೇಲೆ ಚಿನ್ನದ ಬೆಲೆ ಏಕಾಏಕಿ ಕುಸಿದೆ. ವಿವಿಧ ಕರೆನ್ಸಿಗಳ ಮುಂದೆ ಅಮೆರಿಕನ್ ಡಾಲರ್ ಮೌಲ್ಯ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ವಿವಿಧ ದೇಶಗಳ ಕರೆನ್ಸಿಯ ಮುಂದೆ ಅಮೆರಿಕನ್ ಡಾಲರ್ ಮೌಲ್ಯ ಗಟ್ಟಿಯಾಗುತ್ತಿದ್ದು, ಇದರಿಂದ ಚಿನ್ನದ ಮೇಲಿನ ಹೂಡಿಕೆ ಇಳಿಕೆಯಾಗಿದೆ. ಸಹಜವಾಗಿಯೇ ಡಾಲರ್ ಮೌಲ್ಯ ಹೆಚ್ಚಾಗುತ್ತಿರುವುದರಿಂದ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುವುದನ್ನು ಬಿಟ್ಟು ಅದಕ್ಕಿಂತಲೂ ಹೆಚ್ಚು ಲಾಭ ತಂದುಕೊಡುವ ಡಾಲರ್ ಮೇಲೆ ಹೂಡಿಕೆ ಮಾಡ್ತಿದ್ದಾರೆ.












Click it and Unblock the Notifications