ಇಂದು ಚಿನ್ನದ ಬೆಲೆ ಎಷ್ಟು ಏರಿಳಿತಗೊಂಡಿದೆ: ಪ್ರಮುಖ ನಗರಗಳ ದರ ಇಲ್ಲಿದೆ
ನವದೆಹಲಿ, ಸೆಪ್ಟೆಂಬರ್ 05: ಭಾರತೀಯ ಮಾರುಕಟ್ಟೆಯಲ್ಲಿ ಶನಿವಾರ ಹಳದಿ ಲೋಹದ ಬೆಲೆ ಕೆಲವೊಂದು ನಗರಗಳಲ್ಲಿ ಏರಿಳಿತಗೊಂಡಿದ್ದು, ರಾಜಧಾನಿ ದೆಹಲಿಯಲ್ಲಿ ಕಳೆದ ಎರಡು ದಿನಗಳಲ್ಲಿ ಯಾವುದೇ ವ್ಯತ್ಯಾಸಗೊಂಡಿಲ್ಲ ಮತ್ತು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚು ಬದಲಾವಣೆ ಆಗದೇ ಉಳಿದಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 49,600 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 54,110 ರೂಪಾಯಿಗೆ ತಟಸ್ಥಗೊಂಡಿದೆ. ಬೆಳ್ಳಿ ಬೆಲೆ ಕೆಜಿಗೆ 150 ರೂಪಾಯಿ ಏರಿಕೆಗೊಂಡು 67,200 ರೂಪಾಯಿಗೆ ತಲುಪಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಸೆಪ್ಟೆಂಬರ್ 05: 48,150-52,520 (ಬದಲಾವಣೆ ಇಲ್ಲ)
ಸೆಪ್ಟೆಂಬರ್ 04: 48,150-52,520
ಸೆಪ್ಟೆಂಬರ್ 03: 48,120-52,490
ಸೆಪ್ಟೆಂಬರ್ 02: 48,250-52,720

ದೆಹಲಿಯಲ್ಲಿ ಚಿನ್ನದ ಬೆಲೆ
ಸೆಪ್ಟೆಂಬರ್ 05: 49,600-54,110 (ಬದಲಾವಣೆ ಇಲ್ಲ)
ಸೆಪ್ಟೆಂಬರ್ 04: 49,600-54,110
ಸೆಪ್ಟೆಂಬರ್ 03: 49,600-54,110
ಸೆಪ್ಟೆಂಬರ್ 02: 50,000-54,600

ಚೆನ್ನೈನಲ್ಲಿ ಚಿನ್ನದ ಬೆಲೆ
ಸೆಪ್ಟೆಂಬರ್ 05: 48,880-53,310 (20 ರೂಪಾಯಿ ಏರಿಕೆ)
ಸೆಪ್ಟೆಂಬರ್ 04: 48,860-53,290
ಸೆಪ್ಟೆಂಬರ್ 03: 48,770-53,200
ಸೆಪ್ಟೆಂಬರ್ 02: 49,160-53,630

ಮುಂಬೈ ಚಿನ್ನದ ಬೆಲೆ
ಸೆಪ್ಟೆಂಬರ್ 05: 49,500-50,500 (40 ರೂಪಾಯಿ ಇಳಿಕೆ)
ಸೆಪ್ಟೆಂಬರ್ 04: 49,540-50,540
ಸೆಪ್ಟೆಂಬರ್ 03: 49,340-50,340
ಸೆಪ್ಟೆಂಬರ್ 02: 49,540-50,540

ಜೈಪುರ ಚಿನ್ನದ ಬೆಲೆ
ಸೆಪ್ಟೆಂಬರ್ 05: 49,600-54,110 (ಬದಲಾವಣೆ ಇಲ್ಲ)
ಸೆಪ್ಟೆಂಬರ್ 04: 49,600-54,110
ಸೆಪ್ಟೆಂಬರ್ 03: 49,600-54,100
ಸೆಪ್ಟೆಂಬರ್ 02: 50,000-54,600

ಚಂಡೀಗಡ ಚಿನ್ನದ ಬೆಲೆ
ಸೆಪ್ಟೆಂಬರ್ 05: 48,900-51,900 (ಬದಲಾವಣೆ ಇಲ್ಲ)
ಸೆಪ್ಟೆಂಬರ್ 04: 48,900-51,900
ಸೆಪ್ಟೆಂಬರ್ 03: 48,900-51,900
ಸೆಪ್ಟೆಂಬರ್ 02: 48,850-51,850

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications