ಚಿನ್ನದ ಬೆಲೆ ಮತ್ತಷ್ಟು ಇಳಿಕೆ: ಫೆಬ್ರವರಿ 04ರ ಬೆಲೆ ಹೀಗಿದೆ
ನವದೆಹಲಿ, ಫೆಬ್ರವರಿ 04: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತವಾಗಿ ಕುಸಿಯುತ್ತಿದ್ದು, ಗುರುವಾರ ಕೂಡ ಹಳದಿ ಲೋಹದ ಮೌಲ್ಯ ತಗ್ಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಅಮೂಲ್ಯವಾದ ಲೋಹದ ದರಗಳ ಕುಸಿತದ ನಡುವೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಡಿಮೆಯಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಸತತ ನಾಲ್ಕನೇ ದಿನ ಇಳಿಕೆಯಾಗಿದೆ.
ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,500 ರೂಪಾಯಿ ದಾಖಲಾಗಿದೆ. ಶುದ್ಧ ಚಿನ್ನ 10 ಗ್ರಾ 50,730 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆ ಕೆಜಿಗೆ 1,000 ರೂಪಾಯಿ ಇಳಿಕೆಗೊಂಡಿದ್ದು, 68,000 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಫೆಬ್ರವರಿ 04: 44,350-48,380 (440 ರೂಪಾಯಿ ಇಳಿಕೆ)
ಫೆಬ್ರವರಿ 03: 44,750-48,820
ಫೆಬ್ರವರಿ 02: 45,150-49,260
ಫೆಬ್ರವರಿ 01: 45,500-49,640

ದೆಹಲಿಯಲ್ಲಿ ಚಿನ್ನದ ಬೆಲೆ
ಫೆಬ್ರವರಿ 04: 46,500-50,730 (430 ರೂಪಾಯಿ ಇಳಿಕೆ)
ಫೆಬ್ರವರಿ 03: 46,900-51,160
ಫೆಬ್ರವರಿ 02: 47,300-51,600
ಫೆಬ್ರವರಿ 01: 48,150-52,270

ಚೆನ್ನೈನಲ್ಲಿ ಚಿನ್ನದ ಬೆಲೆ
ಫೆಬ್ರವರಿ 04: 44,830-48,900 (500 ರೂಪಾಯಿ ಇಳಿಕೆ)
ಫೆಬ್ರವರಿ 03: 45,290-49,400
ಫೆಬ್ರವರಿ 02: 45,650-49,800
ಫೆಬ್ರವರಿ 01: 46,250-50,450

ಮುಂಬೈ ಚಿನ್ನದ ಬೆಲೆ
ಫೆಬ್ರವರಿ 04: 46,600-47,600 (1400 ರೂಪಾಯಿ ಇಳಿಕೆ)
ಫೆಬ್ರವರಿ 03: 48,000-49,000
ಫೆಬ್ರವರಿ 02: 47,590-48,590
ಫೆಬ್ರವರಿ 01: 48,450-49,450

ಜೈಪುರ ಚಿನ್ನದ ಬೆಲೆ
ಫೆಬ್ರವರಿ 04: 46,500-50,730 (430 ರೂಪಾಯಿ ಇಳಿಕೆ)
ಫೆಬ್ರವರಿ 03: 46,900-51,160
ಫೆಬ್ರವರಿ 02: 47,300-51,600
ಫೆಬ್ರವರಿ 01: 48,150-52,270

ಚಂಡೀಗಡ ಚಿನ್ನದ ಬೆಲೆ
ಫೆಬ್ರವರಿ 04: 46,500-50,730 (430 ರೂಪಾಯಿ ಇಳಿಕೆ)
ಫೆಬ್ರವರಿ 03: 46,900-51,160
ಫೆಬ್ರವರಿ 02: 48,000-51,600
ಫೆಬ್ರವರಿ 01: 48,150-51,900

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications