ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಆಗಸ್ಟ್ 24ರ ದರ ಹೀಗಿದೆ
ನವದೆಹಲಿ, ಆಗಸ್ಟ್ 24: ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡು ದಾಖಲೆಯನ್ನೇ ಸೃಷ್ಟಿಸಿದ್ದ ಹಳದಿ ಲೋಹದ ಬೆಲೆ ಕಳೆದ ಕೆಲ ವಹಿವಾಟುಗಳಲ್ಲಿ ಇಳಿಕೆಯತ್ತ ಮುಖಮಾಡಿದೆ. ಸೋಮವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 50,700 ರೂಪಾಯಿಗೆ ತಗ್ಗಿದ್ದು, ಶುದ್ಧ ಚಿನ್ನ 10 ಗ್ರಾಂ 55,310 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 410 ರೂಪಾಯಿ ಕಡಿಮೆಯಾಗಿ 66,700 ರೂಪಾಯಿಗೆ ತಲುಪಿದೆ.
Recommended Video
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಆಗಸ್ಟ್ 24: 49,200-53,670 (310 ರೂಪಾಯಿ ಇಳಿಕೆ)
ಆಗಸ್ಟ್ 23: 49,510-54,010
ಆಗಸ್ಟ್ 22: 49,500-54,000
ಆಗಸ್ಟ್ 21: 49,600-54,100

ದೆಹಲಿಯಲ್ಲಿ ಚಿನ್ನದ ಬೆಲೆ
ಆಗಸ್ಟ್ 24: 50,700-55,310 (310 ರೂಪಾಯಿ ಇಳಿಕೆ)
ಆಗಸ್ಟ್ 23: 51,010-55,610
ಆಗಸ್ಟ್ 22: 51,000-55,600
ಆಗಸ್ಟ್ 21: 51,300-55,950

ಚೆನ್ನೈನಲ್ಲಿ ಚಿನ್ನದ ಬೆಲೆ
ಆಗಸ್ಟ್ 24: 50,030-54,580 (460 ರೂಪಾಯಿ ಇಳಿಕೆ)
ಆಗಸ್ಟ್ 23: 50,490-55,070
ಆಗಸ್ಟ್ 22: 50,480-55,060
ಆಗಸ್ಟ್ 21: 50,840-55,460

ಮುಂಬೈ ಚಿನ್ನದ ಬೆಲೆ
ಆಗಸ್ಟ್ 24: 50,710-51,710 (250 ರೂಪಾಯಿ ಇಳಿಕೆ)
ಆಗಸ್ಟ್ 23: 50,960-51,960
ಆಗಸ್ಟ್ 22: 50,950-51,950
ಆಗಸ್ಟ್ 21: 50,980-51,980

ಜೈಪುರ ಚಿನ್ನದ ಬೆಲೆ
ಆಗಸ್ಟ್ 24: 50,700-55,310 (310 ರೂಪಾಯಿ ಇಳಿಕೆ)
ಆಗಸ್ಟ್ 23: 51,010-55,610
ಆಗಸ್ಟ್ 22: 51,000-55,600
ಆಗಸ್ಟ್ 21: 51,300-55,950

ಚಂಡೀಗಡ ಚಿನ್ನದ ಬೆಲೆ
ಆಗಸ್ಟ್ 24: 50,500-53,800 (10 ರೂಪಾಯಿ ಇಳಿಕೆ)
ಆಗಸ್ಟ್ 23: 50,510-53,250
ಆಗಸ್ಟ್ 22: 50,500-53,240
ಆಗಸ್ಟ್ 21: 50,500-53,240

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications