ಮನ್ನಾ ಫುಡ್ಸ್ ನಲ್ಲಿ ಮಾರ್ಗನ್ ಸ್ಟ್ಯಾನ್ಲಿಯಿಂದ 152 ಕೋಟಿ ಹೂಡಿಕೆ

Posted By:
Subscribe to Oneindia Kannada

ಚೆನ್ನೈ ಮೂಲದ ಸದರ್ನ್ ಹೆಲ್ತ್ ಫುಡ್ಸ್ ಸಂಸ್ಥೆಯಲ್ಲಿ ಮಾರ್ಗನ್ ಸ್ಟ್ಯಾನ್ಲಿ ಪಿಇ ಏಷ್ಯಾದಿಂದ ನಿರ್ವಹಣೆ ಆಗುತ್ತಿರುವ ನಿಧಿಯಿಂದ 152 ಕೋಟಿ ರುಪಾಯಿ ಹೂಡಿಕೆ ಮಾಡಲಾಗುತ್ತಿದೆ. ಸದರ್ನ್ ಹೆಲ್ತ್ ಫುಡ್ಸ್ ನ ನೈಸರ್ಗಿಕ ಆರೋಗ್ಯಕರ ಆಹಾರ ಉತ್ಪನ್ನಗಳ ಬ್ರಾಂಡ್ 'ಮನ್ನಾ ಫುಡ್ಸ್' (http://www.mannafoods.in/).

ಸಾಂಪ್ರದಾಯಿಕವಾಗಿ ಬಹುಧಾನ್ಯಗಳು, ಕಿರುಧಾನ್ಯಗಳು ಮತ್ತು ಬೇಳೆಗಳ ಮಿಶ್ರಣದೊಂದಿಗೆ ಬಿಸಿ ಹಾಲಿನಲ್ಲಿ ಬೇಯಿಸಿ ಮನೆಯಲ್ಲೇ ತಯಾರಿಸಲಾಗುವ 'ಸತುಮಾವು'ನ ಸುಧಾರಿತ ರೂಪ 'ಮನ್ನಾ ಫುಡ್ಸ್'ನ ಪ್ರಮುಖ ಉತ್ಪನ್ನ 'ಮನ್ನಾ ಹೆಲ್ತ್ ಮಿಕ್ಸ್'.

ಅಷ್ಟೇ ಅಲ್ಲ, ಮನ್ನಾ ಫುಡ್ಸ್ ನ ದೃಢವಾದ ಆಹಾರ ಉತ್ಪನ್ನಗಳ ಶ್ರೇಣಿಯಲ್ಲಿ ಬೇಯಿಸಿದ ಕಿರುಧಾನ್ಯ ಆಧರಿತ ಶಿಶು ಆಹಾರ, ಕಿರುಧಾನ್ಯಗಳು, ಸೋಯಾ ನಗೆಟ್ ಗಳು, ಡ್ರೈಫ್ರೂಟ್ ಗಳು, ಪ್ಯೂರಿಗಳು, ಪೇಸ್ಟ್ ಗಳು ಮುಂತಾದವು ಸೇರಿವೆ. ಮನ್ನಾ ದಕ್ಷಿಣ ಭಾರತದಲ್ಲಿ ಮನೆಮಾತಾಗಿದ್ದು, ದೊಡ್ಡ ಸಂಖ್ಯೆಯ ಗ್ರಾಹಕರ ನಂಬಿಕೆ ಗಳಿಸಿದೆ.

 A fund managed by Morgan Stanley PE Asia has invested 152 Crore in Manna Foods

ಸಂಸ್ಥೆಯ ಪ್ರೋತ್ಸಾಹಕರಾದ ಐಎಸ್ ಎಕೆ ನಾಜರ್ ಮಾತನಾಡಿ, "ಮನ್ನಾ ಹೆಲ್ತ್ ಮಿಕ್ಸ್ ಮುಂಚೂಣಿಯಲ್ಲಿರುವುದರೊಂದಿಗೆ ನೈಸರ್ಗಿಕ, ಸಂರಕ್ಷಕಗಳಿಂದ ಮುಕ್ತ ಮತ್ತು ದೇಶೀಯ ಆಹಾರ ಉತ್ಪನ್ನಗಳ ಶ್ರೇಣಿಯೊಂದಿಗೆ ಅನನ್ಯ ಆಹಾರೋತ್ಪನ್ನಗಳ ವೇದಿಕೆಯನ್ನು ಮನ್ನಾ ಫುಡ್ಸ್ ಸೃಷ್ಟಿಸಿದೆ" ಎಂದಿದ್ದಾರೆ.

"ಜನರು ಕೃತಕ ವಸ್ತುಗಳನ್ನು ಬಿಟ್ಟು ಸಾವಯವ ಮತ್ತು ಸಾಂಪ್ರದಾಯಿಕ ಆಹಾರ ಪದಾರ್ಥಗಳ ಕಡೆಗೆ ಬದಲಾಗುತ್ತಿರುವುದರ ಹಿನ್ನೆಲೆಯಲ್ಲಿ ಭಾರತದ ಆಹಾರ ಉತ್ಪನ್ನಗಳ ಕ್ಷೇತ್ರದಲ್ಲಿ ನೈಜ ಯಶಸ್ಸಿನ ಕಥೆ ಬರೆಯಲು ಮಾರ್ಗನ್ ಸ್ಟಾನ್ಲಿಯೊಂದಿಗೆ ಪಾಲುದಾರಿಕೆ ಬಗ್ಗೆ ಮನ್ನಾ ಫುಡ್ಸ್ ಉತ್ಸಾಹಿತವಾಗಿದೆ" ಎಂದು ಹೇಳಿದ್ದಾರೆ.

ಮಾರ್ಗನ್ ಸ್ಟಾನ್ಲಿ ಪ್ರೈವೇಟ್ ಈಕ್ವಿಟಿ ಏಷ್ಯಾಗೆ ಭಾರತದಲ್ಲಿ ಸಹ ಮುಖ್ಯಸ್ಥರಾದ ಅರ್ಜುನ್ ಸೈಗಲ್ ಮಾತನಾಡಿ, ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಮನ್ನಾದಂತಹ ಬ್ರಾಂಡ್ ಬೆಂಬಲಿಸುವಲ್ಲಿ ನಾವು ಉತ್ಸಾಹಿತರಾಗಿದ್ದೇವೆ. ಈ ಬ್ರಾಂಡ್ ಸತತವಾಗಿ ನೈಸರ್ಗಿಕ, ಆರೋಗ್ಯಕರ ಮತ್ತು ಉನ್ನತ ಗುಣಮಟ್ಟದ ಉತ್ಪನ್ನಗಳೊಂದಿಗೆ ತನ್ನ ಗ್ರಾಹಕರ ಭರವಸೆಯನ್ನು ಪೂರೈಸಿದೆ.

ಭಾರತದ ಆಹಾರಾಭ್ಯಾಸಗಳು ಮತ್ತು ಜೀವನ ಶೈಲಿ ಆರೋಗ್ಯ ಸವಾಲುಗಳನ್ನು ಸೃಷ್ಟಿಸುತ್ತಿರುವ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸುವ ಆಯ್ಕೆಗಳನ್ನು ನೀಡಲು ಮನ್ನಾ ಅವರ ನೈಸರ್ಗಿಕ ಆಹಾರಗಳು ಉತ್ತಮ ಸ್ಥಾನದಲ್ಲಿವೆ ಎಂದು ನಾವು ನಂಬಿದ್ದೇವೆ. ಹೆಚ್ಚುವರಿಯಾಗಿ ಸ್ವದೇಶಿ ಧಾನ್ಯಗಳಾದ ಕಿರುಧಾನ್ಯಗಳು ತಮ್ಮ ಜನಪ್ರಿಯತೆಯನ್ನು ಮತ್ತೆ ಗಳಿಸಿಕೊಳ್ಳುತ್ತಿದ್ದು 'ಸೂಪರ್ ಫುಡ್' ಮಾದರಿಯ ಪೋಷಕಾಂಶಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿವೆ. ಮನ್ನಾದ ಬೆಳವಣಿಗೆಯನ್ನು ನಾವು ಎದುರುನೋಡುತ್ತಿದ್ದೇವೆ ಎಂದಿದ್ದಾರೆ.

ದಕ್ಷಿಣ ಭಾರತದಲ್ಲಿ ಸಂಸ್ಥೆಯ ವಿಸ್ತರಣೆಗೆ ಈ ನಿಧಿಯನ್ನು ಬಳಸಲಾಗುವುದು. ಜತೆಗೆ ಪ್ರಸ್ತುತ ಹೂಡಿಕೆದಾರರಿಗೆ ಭಾಗಶಃ ಬಂಡವಾಲ ಹಿಂತಿರುಗಿಸಲು ಉಪಯೋಗಿಸಲಾಗುತ್ತಿದೆ. 2015ರಲ್ಲಿ ಸಂಸ್ಥೆಯು ಫಲ್ಕ್ರಮ್ ನೇತೃತ್ವದ ಬೆಳವಣಿಗೆ ಹೂಡಿಕೆದಾರರಿಂದ 30 ಕೋಟಿ ರುಪಾಯಿಗಳನ್ನು ಪಡೆದಿತ್ತು.

"2015ರಲ್ಲಿ ಮನ್ನಾದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಹಾಗೂ ನಾಜರ್ ಅವರ ನೇತೃತ್ವದ ಅಡಿಯ ಮನ್ನಾದ ತಂಡದೊಂದಿಗೆ ಕೆಲಸ ಮಾಡಿ ಫಲ್ಕ್ರಮ್ ಬಹಳ ಹರ್ಷಗೊಂಡಿದೆ. ಮನ್ನಾ ದೃಢವಾದ ಬ್ರಾಂಡ್ ಆಗಿದ್ದು, ಎರಡು ವರ್ಷಗಳಲ್ಲಿ ಸಂಸ್ಥೆಯ ದೃಢವಾದ ಮಾರಾಟ ಬೆಳವಣಿಗೆಯಲ್ಲಿ ಬಿಂಬಿತವಾಗಿದೆ. ಎಫ್‍ ಎಂಸಿಜಿ ಕ್ಷೇತ್ರದಲ್ಲಿ ಸಂಸ್ಥೆಯ ಸ್ಥಾನವನ್ನು ದೃಢಗೊಳಿಸುವಲ್ಲಿ ಮಾರ್ಗನ್ ಸ್ಟಾನ್ಲಿಯೊಂದಿಗೆ ಕೈ ಜೋಡಿಸುವುದರೊಂದಿಗೆ ಮತ್ತಷ್ಟು ನೆರವಾಗಲಿದೆ'' ಎಂದು ಫಲ್ಕ್ರಮ್ ನ ಪಾಲುದಾರರಾದ ಎಥಾನ್ ಖತ್ರಿ ಹೇಳಿದ್ದಾರೆ.

ಅಂದಹಾಗೆ ಈ ವಹಿವಾಟಿಗೆ ಏಕಮೇವ ಹಣಕಾಸು ಸಲಹಾಕಾರರಾಗಿ ಎಂಎಪಿಇ ಅಡ್ವೈಸರಿ ಗ್ರೂಪ್ ಕಾರ್ಯ ನಿರ್ವಹಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A fund managed by Morgan Stanley Private Equity Asia has invested INR 152 Cr in Southern Health Foods, makers of “Manna Foods” (http://www.mannafoods.in/) brand of natural health food products.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ