ತೈಲ ಬೆಲೆಯಲ್ಲಿ ಮತ್ತೆ ಹೆಚ್ಚಳ: ಪೆಟ್ರೋಲ್ 28, ಡೀಸೆಲ್ 22 ಪೈಸೆ ತುಟ್ಟಿ

ನವದೆಹಲಿ, ಸೆಪ್ಟೆಂಬರ್ 14: ತೈಲ ಬೆಲೆಯಲ್ಲಿ ಸಾರ್ವಕಾಲಿಕ ಏರಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 28 ಪೈಸೆ ಮತ್ತು ಡೀಸೆಲ್ ಬೆಲೆ 22 ಪೈಸೆಗಳಷ್ಟು ಹೆಚ್ಚಳ ಕಂಡಿವೆ.

ದೆಹಲಿಯಲ್ಲಿ ಶುಕ್ರವಾರ ಪೆಟ್ರೋಲ್ ಲೀಟರ್‌ಗೆ 81.28 ರೂ. ದರದಲ್ಲಿ ಹಾಗೂ ಡೀಸೆಲ್ ಲೀಟರ್‌ಗೆ 73.30 ರೂ.ನಂತೆ ಮಾರಾಟವಾಗುತ್ತಿದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 88.67ಕ್ಕೆ ತಲುಪಿದೆ. ಡೀಸೆಲ್ ಲೀಟರ್‌ಗೆ 77.82 ರೂ. ರಂತೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಶುಕ್ರವಾರ ಪೆಟ್ರೋಲ್ ದರ ಲೀಟರ್‌ಗೆ 83.94 ರೂ.ಗೆ ಮುಟ್ಟಿದೆ. ಡೀಸೆಲ್ ಬೆಲೆ 75.67 ರೂ. ತಲುಪಿದೆ.

fuel price hike: petrol 28 paise and diesel price 22 jumped in new delhi

ಸೆ. 5 ಮತ್ತು 12 ರಂದು ಹೊರತುಪಡಿಸಿ ದೇಶದಲ್ಲಿ ಪ್ರತಿನಿತ್ಯ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಡಾಲರ್ ಎದುರು ದುರ್ಬಲಗೊಂಡಿರುವ ರೂಪಾಯಿ, ಅಧಿಕ ಸುಂಕ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಗಳು ಪೆಟ್ರೋಲ್ ಮತ್ತು ಡೀಸೆಲ್ ತುಟ್ಟಿಯಾಗಲು ಕಾರಣ.

ತೈಲ ಬೆಲೆಯಲ್ಲಿನ ಹೆಚ್ಚಳ ಖಂಡಿಸಿ ವಿರೋಧ ಪಕ್ಷಗಳು ಸೆ. 10ರಂದು ಬಂದ್ ಆಚರಿಸಿದ್ದವು. ಆದರೂ ಕೇಂದ್ರ ಸರ್ಕಾರ ತೈಲದ ಮೇಲಿನ ಸುಂಕದ ಪ್ರಮಾಣವನ್ನು ಕಡಿತಗೊಳಿಸಲು ನಿರಾಕರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+