Get Updates
Get notified of breaking news, exclusive insights, and must-see stories!

ಕೂನಲ್ಲಿ ಹೂಡಿಕೆ ಮಾಡಿದ ಮಾಜಿ ಭಾರತೀಯ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ಬೆಂಗಳೂರು, ಮಾರ್ಚ್ 23: ಭಾರತದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ಭಾರತೀಯ ಮೈಕ್ರೋಬ್ಲಾಗ್‌ ಕೂನ ಮೂಲ ಸಂಸ್ಥೆಯಾದ ಬಾಂಬಿನೇಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡಿದ್ದಾರೆ.

ಶ್ರೀನಾಥ್ ಅವರು ರಾಷ್ಟ್ರದ ಅತಿ ವೇಗದ ಬೌಲರ್ ಮತ್ತು ಏಕದಿನ ಪಂದ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ವಿಕೆಟ್‌ಗಳನ್ನು ಗಳಿಸಿದ ಇತಿಹಾಸ ಹೊಂದಿದ್ದಾರೆ. ಶ್ರೀನಾಥ್ 11 ವರ್ಷಗಳ ಕ್ರಿಕೆಟ್ ವೃತ್ತಿ ಬದುಕನ್ನು ಕಂಡು 2003 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು ಮತ್ತು ಪ್ರಸ್ತುತ ಐಸಿಸಿ ಮ್ಯಾಚ್ ರೆಫರಿಯಾಗಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಮತ್ತು ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರು ಮಾತನಾಡಿ "ಭಾರತದ ಪ್ರಸ್ತುತ ಸಾಮಾಜಿಕ‌ ಮಾಧ್ಯಮಗಳಲ್ಲಿ ಒಂದಾದ ಕೂಗೆ ಬೆಂಬಲ ನೀಡುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಕಳೆದ ವರ್ಷ ಕೂ ಕನ್ನಡ ಪ್ರಾರಂಭವಾದಾಗಿನಿಂದ ನಾನು ಈ ವೇದಿಕೆಯ ಭಾಗವಾಗಿದ್ದೇನೆ. ಕೂ ತಂಡದವರು ಯಾವ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿರುವರೋ ಅದನ್ನು ನಾನು ಅರಿತಿದ್ದೇನೆ ಮತ್ತು ಮತ್ತು ಅದರ ಪರಿಹಾರಕ್ಕಾಗಿ ಸಹಕರಿಸುತ್ತೇನೆ. ಭಾರತವು 1000 ಭಾಷೆಗಳು ಮತ್ತು ಉಪಭಾಷೆಗಳನ್ನು ಹೊಂದಿರುವ ವೈವಿಧ್ಯಮಯ ದೇಶವಾಗಿದೆ. ಈ ಎಲ್ಲಾ ವೈವಿಧ್ಯಮಯ ಧ್ವನಿಗಳಿಗೆ ಒಂದು ವೇದಿಕೆಯನ್ನು ನೀಡುವುದು ಅತಿಮುಖ್ಯವಾಗಿದ್ದು, ತನ್ಮೂಲಕ ಅವರ ಭಾವನೆಗಳು ಮತ್ತಷ್ಟು ಗಟ್ಟಿಗೊಳ್ಳುತ್ತವೆ. ಭಾರತೀಯ ಭಾಷೆಯ ಪ್ರೇಕ್ಷಕರ ಧ್ವನಿಯನ್ನು ಅಂತರ್ಜಾಲದಲ್ಲಿ ವ್ಯಕ್ತಪಡಿಸುವ ಕೂ ವೇದಿಕೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ತೀವ್ರ ಉತ್ಕಟ ಬೆಂಬಲಿಗನಾಗಿ, ಭಾರತವನ್ನು ಮುಂಚೂಣಿಯಲ್ಲಿಡುವಲ್ಲಿ ಸಹಾಯ ಮಾಡುವ ಯಾವುದೇ ಕಾರ್ಯಕ್ಕೂ ನನ್ನ ಪೂರ್ಣ ಸಹಮತವನ್ನು ಹೃದಯಪೂರ್ವಕವಾಗಿ ನೀಡುತ್ತೇನೆ ಎಂದು ಹೇಳಿದರು.

Former Cricketer Javagal Srinath invests in Koo App

ಕೂ ಸಿಇಒ ಮತ್ತು ಸಹ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರು ಮಾತನಾಡಿ, "ಜಾವಗಲ್ ಶ್ರೀನಾಥ್ ಅವರು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಆರಂಭಿಕ ದಿನಗಳಿಂದಲೂ ಕೂಗೆ ಬೆಂಬಲವಾಗಿ ನಿಂತಿದ್ದಕ್ಕಾಗಿ ಮತ್ತು ಪ್ರಸ್ತುತ ಹೂಡಿಕೆದಾರರಾಗಿ ನಮ್ಮ ಪ್ರಯಾಣಕ್ಕೆ ಸರ‍್ಪಡೆಗೊಂಡಿದ್ದಕ್ಕಾಗಿ ನಾನು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ. ನಾವು ಭಾರತೀಯ ಸಮೂಹ ಮಾಧ್ಯಮದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಿರುವುದನ್ನು ಅವರು ಗೌರವಿಸುತ್ತಾರೆ ಮತ್ತು ಕೂ ನಂತಹ ಉತ್ಪನ್ನಗಳ ಬಗ್ಗೆ ಉತ್ಸುಕರಾಗಿದ್ದಾರೆ. ಈ ಹಿಂದೆ, ಗ್ಲೋಬಲ್ ಫೀನಿಕ್ಸ್ ಸೊಲ್ಯೂಷನ್ಸ್ ಮೂಲಕ, ತಂತ್ರಜ್ಞಾನವನ್ನು ಕ್ರೀಡೆಯಲ್ಲಿ ತಂದ ಮೊದಲ ವ್ಯಕ್ತಿಗಳಲ್ಲಿ ಅವರು ಕೂಡ ಒಬ್ಬರು. ಅಲ್ಲದೆ ಅವರು ಸಮಸ್ಯೆಗಳ ಪರಿಹಾರಕ್ಕಾಗಿ ತಂತ್ರಜ್ಞಾನವನ್ನು ಬಳಸುವುದರಲ್ಲಿ ನಂಬಿಕೆಯುಳ್ಳವರಾಗಿದ್ದಾರೆ" ಎಂದು ಹೇಳಿದರು.

ಕೂ ಸಹ ಸಂಸ್ಥಾಪಕ ಮಯಾಂಕ್ ಬಿಡಾವತ್ಕಾ ಅವರು ಮಾತನಾಡಿ, "ಶ್ರೀನಾಥ್ ಬಗ್ಗೆ ಹೇಳುವುದಾದರೆ ಅವರು ಕ್ರಿಕೆಟ್ ಲೋಕದ ದಂತಕಥೆ. ಅವರು ಹಲವು ವೈಯಕ್ತಿಕ ಅಡೆ ತಡೆಗಳ ನಡುವೆಯೂ ಭಾರತಕ್ಕಾಗಿ ಆಡಿದ್ದಾರೆ. ಅವರದ್ದು ಎಲ್ಲರೂ ಗೌರವಿಸುವಂತಹ ಆರ್ಹ ವ್ಯಕ್ತಿತ್ವ. ಕೂ ಅವರ ಕ್ರೀಡಾ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಂತಿದೆ. ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಒಬ್ಬರು ಈಗ ತಂತ್ರಜ್ಞಾನದಲ್ಲೂ ಸ್ವಾವಲಂಬಿಗಳಾಗುತ್ತಿರುವ ಭಾರತೀಯರ ಅನ್ವೇಷಣೆಯನ್ನು ಬೆಂಬಲಿಸುತ್ತಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ" ಎಂದು ಹೇಳಿದರು.

ವೇದಿಕೆಯಲ್ಲಿ ಕನ್ನಡ ಭಾಷೆಯ ಆಯ್ಕೆಯೊಂದೇ ಲಭ್ಯವಿದ್ದಾಗ ಜಾವಗಲ್ ಶ್ರೀನಾಥ್ ಕೂಗೆ ಸೇರಿದರು. ಟ್ವಿಟ್ಟರಲ್ಲಿ 11,250 ಅನುಯಾಯಿಗಳಿಗೆ ಹೋಲಿಸಿದರೆ ಅವರು ಕೂನಲ್ಲಿ 100,000+ ಅನುಯಾಯಿಗಳನ್ನು ಹೊಂದಿದ್ದಾರೆ. ಕೂನಲ್ಲಿ ತನ್ನ ಅನುಯಾಯಿಗಳೊಂದಿಗೆ ಸಂಪರ್ಕದಲ್ಲಿರಲು ಅವರು ಆಡಿಯೋ ಕೂಗಳನ್ನು ಬಳಸುವುದು ಸಾಮಾನ್ಯವಾಗಿದೆ.

Recommended Video

      ಬಂಗಾರದ ಬೆಲೆಯಲ್ಲಿ ಸ್ವಲ್ಪ ಇಳಿಕೆ! | Oneindia Kannada

      ಕೂ ಎಂಬುದು ಭಾರತದ ಸ್ಥಳೀಯ ಭಾಷೆಗಳಲ್ಲಿ ಮೈಕ್ರೊ-ಬ್ಲಾಗಿಂಗ್ ವೇದಿಕೆಯಾಗಿದೆ. ಜನರು ಪಠ್ಯ, ಆಡಿಯೋ ಅಥವಾ ವಿಡಿಯೋ ಬಳಸಿ ತಮ್ಮ ಮಾತೃಭಾಷೆಯಲ್ಲಿ ತಮ್ಮ ಮನದಾಳವನ್ನು ತಾವು ವ್ಯಕ್ತಪಡಿಸಿಕೊಳ್ಳಬಹುದು. ಬಳಕೆದಾರರು ಇತರರನ್ನು ಹಿಂಬಾಲಿಸಬಹುದು ಮತ್ತು ಅವರ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಕೇಳಬಹುದು. ಕೂ ಮೊದಲು ಕನ್ನಡ ಭಾಷೆಯಲ್ಲಿ ಪ್ರಾರಂಭವಾಯಿತು ಹಾಗೂ ಇಂದು ಅನೇಕ ಭಾರತೀಯ ಭಾಷೆಗಳಲ್ಲಿದೆ. ಪ್ರಸ್ತುತ ಹಿಂದಿ, ಕನ್ನಡ, ತೆಲುಗು, ಬಂಗಾಳಿ, ಮುಂತಾದ ಅನೇಕ ಭಾಷೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+