ಸತತ 13ನೇ ವರ್ಷವೂ ಭಾರತದ ಶ್ರೀಮಂತ ವ್ಯಕ್ತಿಯಾಗಿ ಉಳಿದ ಮುಕೇಶ್ ಅಂಬಾನಿ
ನವದೆಹಲಿ, ಅಕ್ಟೋಬರ್ 08: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಸತತ 13 ನೇ ವರ್ಷವೂ ಶ್ರೀಮಂತ ಭಾರತೀಯರಾಗಿ ಉಳಿದಿದ್ದಾರೆ. ಫೋರ್ಬ್ಸ್ ಗುರುವಾರ 2020 ರ ಅಗ್ರ 100 ಶ್ರೀಮಂತ ಭಾರತೀಯರ ಪಟ್ಟಿಯನ್ನು ಬಿಡುಗಡೆ ಮಾಡಿತು.
ಭಾರತದಲ್ಲಿ ಕೊರೊನಾವೈರಸ್ ತೀವ್ರವಾಗಿ ಪರಿಣಾಮ ಬೀರಿರುವುದರ ಜೊತೆಗೆ, 2020 ರ ಫೋರ್ಬ್ಸ್ ಇಂಡಿಯಾ ಶ್ರೀಮಂತ ಪಟ್ಟಿಯಲ್ಲಿ ಸ್ಥಾನ ಪಡೆದ 100 ಶ್ರೀಮಂತರಲ್ಲಿ ಅರ್ಧದಷ್ಟು ಜನರು ಲಾಭಗಳಿಸಿದ್ದಾರೆ. ಅವರ ಸಾಮೂಹಿಕ ನಿವ್ವಳ ಮೌಲ್ಯವು ಹಿಂದಿನ ವರ್ಷಕ್ಕಿಂತ ಶೇ. 14ರಷ್ಟು ಏರಿಕೆಯಾಗಿ 517.5 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ'' ಎಂದು ಫೋರ್ಬ್ಸ್ ಹೇಳಿದೆ.
"ಜಾಗತಿಕ ಆರ್ಥಿಕತೆಗೆ ಪ್ರಕ್ಷುಬ್ಧ ವರ್ಷದಲ್ಲಿ, ಭಾರತದ ಶ್ರೀಮಂತರು ತಮ್ಮ ಸಂಪತ್ತನ್ನು ಸಂರಕ್ಷಿಸಿದ್ದಾರೆ. ಮುಖೇಶ್ ಅಂಬಾನಿ ಸತತ 13 ನೇ ವರ್ಷವೂ ತನ್ನ ನಿವ್ವಳ ಮೌಲ್ಯಕ್ಕೆ 37.3 ಶತಕೋಟಿ ಹಣವನ್ನು ಸೇರಿಸಿದ್ದಾರೆ "ಎಂದು ಫೋರ್ಬ್ಸ್ ಹೇಳಿದೆ.

ಇನ್ನೂ ಅಗ್ರ 10 ರಲ್ಲಿ ಹೊಸದಾಗಿ ಪ್ರವೇಶಿಸಿದವರು ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಯ ಅಧ್ಯಕ್ಷರಾಗಿರುವ ಸೈರಸ್ ಪೂನವಾಲ್ಲಾ. ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ಕಂಪನಿಯ ಅಧ್ಯಕ್ಷರು ಇವರಾಗಿದ್ದಾರೆ.
ಭಾರತದ ಅಗ್ರ 20 ಶ್ರೀಮಂತ ವ್ಯಕ್ತಿಗಳ ಪಟ್ಟಿ:
1. ಮುಖೇಶ್ ಅಂಬಾನಿ (88.7 ಬಿಲಿಯನ್ ಡಾಲರ್)
2. ಗೌತಮ್ ಅದಾನಿ (25.2 ಬಿಲಿಯನ್ ಡಾಲರ್)
3. ಶಿವ ನಾಡರ್ (20.4 ಬಿಲಿಯನ್ ಡಾಲರ್)
4. ರಾಧಾಕಿಶನ್ ದಮಾನಿ (15.4 ಬಿಲಿಯನ್ ಡಾಲರ್)
5. ಹಿಂದೂಜಾ ಸಹೋದರರು (12.8 ಬಿಲಿಯನ್ ಡಾಲರ್)
6. ಸೈರಸ್ ಪೂನವಾಲ್ಲಾ (11.5 ಬಿಲಿಯನ್ ಡಾಲರ್)
7. ಪಲ್ಲೊಂಜಿ ಮಿಸ್ತ್ರಿ (11.4 ಬಿಲಿಯನ್ ಡಾಲರ್)
8. ಉದಯ್ ಕೊಟಕ್ (11.3 ಬಿಲಿಯನ್ ಡಾಲರ್)
9. ಗೋದ್ರೇಜ್ ಕುಟುಂಬ (11 ಬಿಲಿಯನ್ ಡಾಲರ್)
10. ಲಕ್ಷ್ಮಿ ಮಿತ್ತಲ್ (10.3 ಬಿಲಿಯನ್ ಡಾಲರ್)
11. ಸುನಿಲ್ ಮಿತ್ತಲ್ (10.2 ಬಿಲಿಯನ್ ಡಾಲರ್)
12. ದಿಲೀಪ್ ಶಾಂಘ್ವಿ (9.5 ಬಿಲಿಯನ್ ಡಾಲರ್)
13. ಬರ್ಮನ್ ಕುಟುಂಬ (9.2 ಬಿಲಿಯನ್ ಡಾಲರ್)
14. ಕುಮಾರ್ ಬಿರ್ಲಾ (8.5 ಬಿಲಿಯನ್ ಡಾಲರ್)
15. ಅಜೀಮ್ ಪ್ರೇಮ್‌ಜಿ (7.9 ಬಿಲಿಯನ್ ಡಾಲರ್)
16. ಬಜಾಜ್ ಕುಟುಂಬ (7.4 ಬಿಲಿಯನ್ ಡಾಲರ್)
17. ಮಧುಕರ್ ಪರೇಖ್ (7.2 ಬಿಲಿಯನ್ ಡಾಲರ್)
18. ಕುಲದೀಪ್ ಮತ್ತು ಗುರ್ಬಚನ್ ಸಿಂಗ್ ಧಿಂಗ್ರಾ (6.8 ಬಿಲಿಯನ್ ಡಾಲರ್)
19. ಸಾವಿತ್ರಿ ಜಿಂದಾಲ್ (6.6 ಬಿಲಿಯನ್ ಡಾಲರ್)
20. ಮುರಳಿ ದಿವಿ (6.5 ಬಿಲಿಯನ್ ಡಾಲರ್)
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications