ಫ್ಲಿಪ್‌ಕಾರ್ಟ್‌ನಿಂದ ವೋಲ್‌ಸೇಲ್ ವ್ಯಾಪಾರ ಶುರು
ಬೆಂಗಳೂರು, ಸೆಪ್ಟೆಂಬರ್ 02: ಫ್ಲಿಪ್‌ಕಾರ್ಟ್ ಕಂಪನಿಯು ದೇಶದಲ್ಲಿ ಸಗಟು ವ್ಯಾಪಾರ ಸೇವೆಯನ್ನು ಪ್ರಾರಂಭಿಸಿದೆ. ಸ್ಥಳೀಯ ತಯಾರಕರನ್ನು ಚಿಲ್ಲರೆ ವ್ಯಾಪಾರಿಗಳೊಂದಿಗೆ ಸಂಪರ್ಕಿಸುವ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಇಡೀ ಸಗಟು ಮಾರುಕಟ್ಟೆಯನ್ನು ತಮ್ಮ ಬೆರಳ ತುದಿಗೆ ತರುವ ಉದ್ದೇಶದಿಂದ ಇ-ಕಾಮರ್ಸ್ ಈ ಸೇವೆ ಆರಂಭಿಸಿದೆ.
ಫ್ಲಿಪ್‌ಕಾರ್ಟ್ ಗ್ರೂಪ್‌ನ ಡಿಜಿಟಲ್ ಬಿ 2 ಬಿ ಮಾರುಕಟ್ಟೆಯಾದ ಫ್ಲಿಪ್‌ಕಾರ್ಟ್ ಸಗಟು ಕಿರಾಣಿ, ಸ್ಥಳೀಯ ಎಂಎಸ್‌ಎಂಇಗಳಿಗಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಬುಧವಾರ ಪ್ರಾರಂಭಿಸಿದೆ.
ಕಿರಾಣಿ ಅಂಗಡಿಗಳಿಗೆ ಒಂದೇ ಉತ್ಪನ್ನವು ವಿವಿಧ ಬ್ರ್ಯಾಂಡ್ ಮತ್ತು ಬೆಲೆಯ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ವಹಿವಾಟಿನ ಮೂಲಕ ಅಮೆಜಾನ್ ಮತ್ತು ರಿಲಯನ್ಸ್ ರಿಟೇಲ್‌ಗೆ ಪೈಪೋಟಿ ನೀಡಲು ಸಾಧ್ಯ.

ಚಿಲ್ಲರೆ ವ್ಯಾಪಾರ ಮತ್ತು ಸಗಟು ಸೇರಿದಂತೆ ಫ್ಯೂಚರ್ ಗ್ರೂಪ್‌ನ ಪ್ರಮುಖ ವ್ಯವಹಾರಗಳನ್ನು ರಿಲಯನ್ಸ್ ರಿಟೇಲ್ ಮೆಗಾ ಸ್ವಾಧೀನಪಡಿಸಿಕೊಂಡ ನಂತರ, ಭಾರತೀಯ ಆನ್‌ಲೈನ್ ಮಾರುಕಟ್ಟೆ ಹಿಂದೆಂದಿಗಿಂತಲೂ ಹೆಚ್ಚು ಸದ್ದು ಮಾಡುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಕಂಡು ಬಂದಿದೆ.
ವರ್ಷಾಂತ್ಯದ ವೇಳೆಗ ತನ್ನ ಸಗಟು ವಹಿವಾಟುಗಳನ್ನು ಇನ್ನೂ 20 ನಗರಗಳಿಗೆ ವಿಸ್ತರಿಸುವ ಹಾಗೂ ದಿನಸಿ ವಸ್ತುಗಳನ್ನು ಮಾರಾಟ ಮಾಡು ಯೋಜನೆ ಇದೆ ಎಂದು ಕಂಪನಿ ತಿಳಿಸಿದೆ.












Click it and Unblock the Notifications