• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಟಾರ್ಟ್ ಅಪ್ ನಿಂಜಾಕಾರ್ಟ್ ನಲ್ಲಿ ಫ್ಲಿಪ್ ಕಾರ್ಟ್, ವಾಲ್ ಮಾರ್ಟ್ ಹೂಡಿಕೆ

|

ಬೆಂಗಳೂರು, ಡಿಸೆಂಬರ್ 11: ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಕಂಪನಿಗಳು ವಿನೂತನ ಸ್ಟಾರ್ಟ್ ಅಪ್ ಕಂಪನಿ ನಿಂಜಾಕಾರ್ಟ್ ನಲ್ಲಿ ಜಂಟಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ನಿಂಜಾಕಾರ್ಡ್ ಬಿ2ಬಿ ಪೂರೈಕೆಯ ಸ್ಟಾರ್ಟ್ ಅಪ್ ಕಂಪನಿಯಾಗಿದೆ.

ಈ ಮೂರು ಪಾಲುದಾರರು ದೇಶಾದ್ಯಂತದ ಚಿಲ್ಲರೆ ಮಾರಾಟಗಾರರು ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ತಾಜಾ ಉತ್ಪನ್ನಗಳನ್ನು ಪೂರೈಸುವ ಹಾಗೂ ಆ ಮೂಲಕ ರೈತರಿಗೆ ಉದ್ಯೋಗವಕಾಶ ಕಲ್ಪಿಸುವ ಗುರಿ ಹೊಂದಿದ್ದಾರೆ.

54 ಲಕ್ಷ ಷೇರುಗಳನ್ನು ವಾಲ್ಮಾರ್ಟಿಗೆ ಮಾರಿದ ಬಿನ್ನಿ ಬನ್ಸಾಲ್

ನಿಂಜಾಕಾರ್ಟ್ ನೊಂದಿಗೆ ಪಾಲುದಾರಿಕೆ ಹೊಂದುವುದರಿಂದ ವಾಲ್ ಮಾರ್ಟ್ ಮತ್ತು ಫ್ಲಿಪ್ ಕಾರ್ಟ್ ಕಂಪನಿಗಳಿಗೆ, ವಾಲ್ ಮಾರ್ಟ್ ಇಂಡಿಯಾದ ಉತ್ತಮ ದರದ ಬಿ2ಬಿ ಕ್ಯಾನ್ ಆಂಡ್ ಕ್ಯಾರಿ ಮಳಿಗೆಗಳಿಗೆ ಮತ್ತು ಫ್ಲಿಪ್ ಕಾರ್ಟ್ ನ ಆನ್ ಲೈನ್ ದಿನಸಿ ವ್ಯವಹಾರ ಸೂಪರ್ ಮಾರ್ಟ್ ಗಲಿಗೆ ನೇರವಾಗಿ ಸರಕುಗಳನ್ನು ಪೂರೈಕೆ ಮಾಡುವ ಅವಕಾಶ ಲಭಿಸಲಿದೆ. ಈ ಹೂಡಿಕೆಯಿಂದ ನಿಂಜಾಕಾರ್ಟ್ ನ ಗ್ರಾಹಕರು ಕೂಡ ಹೆಚ್ಚಾಗಲಿದ್ದು, ಹೊಸ ನಗರಗಳನ್ನು ತಲುಪಲು ಸಾಧ್ಯವಾಗುತ್ತದೆ.

2015ರಲ್ಲಿ ಆರಂಭಗೊಂಡಿರುವ ನಿಂಜಾಕಾರ್ಟ್ ದೇಶಾದ್ಯಂತ 200 ಸಂಗ್ರಹ ಕೇಂದ್ರಗಳೂ, 1200 ದಾಸ್ತಾನು ಕೇಂದ್ರಗಳನ್ನು ಹೊಂದಿದೆ. ಇದು ಪ್ರತಿನಿತ್ಯ 1,400 ಟನ್ ಗಳಷ್ಟು ತಾಜಾ ಆಹಾರ ಉತ್ಪನ್ನಗಳ ವಹಿವಾಟು ನಡೆಸುತ್ತದೆ.

ಈ ಪಾಲುದಾರಿಕೆ ಕುರಿತು ಪ್ರತಿಕ್ರಿಯಿಸಿರುವ ಫ್ಲಿಪ್ ಕಾರ್ಟ್ ಸಮೂಹದ ಸಿಇಓ ಕಲ್ಯಾಣ್ ಕೃಷ್ಣಮೂರ್ತಿ, ದೇಶೀಯ ಇ-ಕಾಮರ್ಸ್ ಕಂಪನಿಯಾಗಿ, ಸ್ಥಳೀಯ ಸಮಸ್ಯೆಗಳಿಗೆ ತಂತ್ರಜ್ಞಾನಗಳ ಮೂಲಕ ಸ್ಪಂದಿಸುವುದು ಹಾಗೂ ಬದಲಾವಣೆಗಳನ್ನು ತರುವುದು ನಮ್ಮ ಸಹಜ ಗುಣವಾಗಿದೆ.

ಕಳೆದ ಕೆಲ ವರ್ಷಗಳಿಂದ ನಾವು ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸುವುದು, ಸ್ಥಳೀಯ ರೈತರು, ಉತ್ಪಾದಕರು ಮತ್ತು ಆಹಾರ ಸಂಸ್ಕರಣೆ ಮಾಡುವವರನ್ನು ಬೆಂಬಲಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗುವುದರ ಜೊತೆಗೆ ಸಾವಿರಾರು ಜನರಿಗೆ ಉದ್ಯೋಗ ದೊರೆತಿದೆ. ನಿಂಜಾಕಾರ್ಟ್ ನಲ್ಲಿ ನಮ್ಮ ಕಂಪನಿ ನಮ್ಮ ಮೌಲ್ಯಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಭಾರತದ ಜೀವನ ಶೈಲಿ ಸುಧಾರಣೆಗೆ ತಂತ್ರಜ್ಞಾನ ಆಧಾರಿತ ಬದ್ಧತೆಯನ್ನು ಕೂಡ ಹಂಚಿಕೊಳುತ್ತಿದೆ'' ಎಂದರು.

ನಿಂಜಾಕಾರ್ಟ್ ನ ಸಿಇಒ ಮತ್ತು ಸಹ ಸಂಸ್ಥಾಪಕ ತಿರುಕುಮಾರನ್ ನಾಗರಾಜನ್, ನಿಂಜಾಕಾರ್ಟ್ ಆಹಾರವನ್ನು ಜನರಿಗೆ ಕೈಗಟುವ ದರದಲ್ಲಿ ಸುರಕ್ಷಿತ ಹಾಗೂ ಸುಲಭವಾಗಿ ದೊರಕುವಂತೆ ಮಾಡಲು ಬಯಸುತ್ತದೆ. ಈ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಹಾಗೂ ವಾಲ್ ಮಾರ್ಟ್ ನಮ್ಮೊಂದಿಗೆ ಕೈಜೋಡಿಸಿರುವುದು ಸಂತಸ ತಂದಿದೆ. ಅವರ ಬೆಂಬಲದಿಂದ ನಾವು ರೈತರು, ಚಿಲ್ಲರೆ ವ್ಯಾಪಾರಿಗಳೂ ಹಾಗೂ ರೆಸ್ಟೋರೆಂಟ್ ಪಾಲುದಾರರ ಜೀವನವನ್ನು ಕೂಡ ಸುಧಾರಿಸುವ ಸಾಧ್ಯತೆಯನ್ನು ಕಾಣುತ್ತಿದ್ದೇವೆ'' ಎಂದರು.

ವಾಲ್ ಮಾರ್ಟ್ ಇಂಡಿಯಾದ ಸಿಇಒ ಹಾಗೂ ಅಧ್ಯಕ್ಷ ಕ್ರಿಶ್ಲರ್, "ನಿಂಜಾಕಾರ್ಟ್ ನ ಹೊಲದಿಂದ ನೇರವಾಗಿ ಆಹಾರವನ್ನು ಗ್ರಾಹಕರಿಗೆ ಪೂರೈಸುವ ಉದ್ದೇಶ, ವಾಲ್ ಮಾರ್ಟ್ ನ ಉದ್ದೇಶದೊಂದಿಗ ತಳುಕು ಹಾಕಿಕೊಂಡಿದೆ. ನಾವು 2023ರ ವೇಳೆಗೆ ನಮ್ಮ ಕಾಶ್ ಆಂಡ್ ಕ್ಯಾರಿ ಮಳಿಗೆಗಳಿಂದ ಶೇ. 25ರಷ್ಟು ಆಹಾರ ಪದಾರ್ಥವನ್ನು ನೇರವಾಗಿ ರೈತರಿಗೆ ಪೂರೈಸುವ ಗುರಿ ಹೊಂದಿದ್ದೇವೆ.

ಇದು ಅವರಿಗ ಮಾರುಕಟ್ಟೆಯ ಸಂಪರ್ಕ ಕಲ್ಪಿಸುವುದರ ಜೊತೆಗೆ ಸಾಗಾಣಿಕೆಯ ವೆಚ್ಚ ಉಳಿತಾಯವಾಗುತ್ತದೆ. ನಿಂಜಾಕಾರ್ಟ್ ನೊಂದಿಗೆ ಪಾಲುದಾರಿಕೆ ಹೊಂದುವ ಮೂಲಕ ಸಣ್ಣ ರೈತರಿಗೆ ಇನ್ನಷ್ಟು ನೆರವಾಗುತ್ತದೆ ಮತ್ತು ಗ್ರಾಮಿಣ ಆದಾಯದ ಹೆಚ್ಚಳಕ್ಕೆ ಕೊಡುಗೆ ನೀಡುತ್ತದೆ ಎಂದು ವಿಶ್ವಾಸವಿದೆ'' ಎಂದರು. ಈ ವ್ಯವಹಾರಗಳು 2019ರ ವರ್ಷಾಂತ್ಯದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

English summary
Walmart and Flipkart today announced a joint strategic investment in supply chain start-up Ninjacart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X