ಸ್ವಾತಂತ್ರ್ಯೋತ್ಸವಕ್ಕೆ ಪ್ಲಿಫ್ ಕಾರ್ಟ್ ನಿಂದ ಭರಪೂರ ಕೊಡುಗೆ

ಬೆಂಗಳೂರು, ಆಗಸ್ಟ್ 07: ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಆನ್ ಲೈನ್ ಇ ಕಾಮರ್ಸ್ ತಾಣಗಳು ಪೈಪೋಟಿಯ ಮೇಲೆ ರಿಯಾಯಿತಿ, ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿವೆ. ಫ್ಲಿಫ್ ಕಾರ್ಟ್ ಆಗಸ್ಟ್ 7 ಹಾಗೂ 8 ರಂದೆ ತನ್ನ ಆಫರ್ ಗಳ ಬುಟ್ಟಿಯನ್ನು ಬಿಚ್ಚಿಟ್ಟುಕೊಂಡು ಕೂತಿದೆ. ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಿ

ಟಾಪ್ ಆಫರ್ ಗಳ ಪೈಕಿ ಎಲ್ ಇಡಿ ಟೆಲಿವಿಷನ್ ಗಳ ಮೇಲೆ ಶೇ 25ರಷ್ಟು ದರ ಕಡಿತ, ಸನ್ ಗ್ಲಾಸ್, ವಾಚ್ ಗಳ ಮೇಲೆ ಶೇ 40 ರಿಂದ 80 ರಷ್ಟು ದರ ಇಳಿಕೆ ಆಕರ್ಷಕವಾಗಿದೆ.[ಆಗಸ್ಟ್ ತಿಂಗಳಲ್ಲಿ ಎಂತೆಂಥಾ ಆನ್‌ಲೈನ್ ಆಫರ್‌ಗಳು!]

Flipkart Independence Day Sale

ಇದಲ್ಲದೆ ಪುರುಷರ ಶರ್ಟ್ ಗಳ ಮೇಲೆ ಶೇ 40ರಷ್ಟು ರಿಯಾಯಿತಿ, ಶೂ, ಕ್ರೀಡಾ ಉತ್ಪನ್ನಗಳ ಮೇಲೆ ಶೇ 45, ಮಹಿಳೆಯರಿಗೆ ಹ್ಯಾಂಡ್ ಬ್ಯಾಗ್, ಸೀರೆ, ಟಾಪ್ಸ್, ಫುಟ್ ವೇರ್ ಮೇಲೆ ಶೇ 60ರ ತನಕ ರಿಯಾಯತಿ ಸಿಗಲಿದೆ.[ಫ್ಲಿಪ್ ಕಾರ್ಟ್ ಸೀಮಿತ ಅವಧಿ ಕೊಡುಗೆಗಳನ್ನು ನೋಡಿ]

ಅದರೆ, ಎಲ್ಲವೂ ನಿಯಮಿತ ಅವಧಿಗೆ ಸೀಮಿತವಾಗಿರುತ್ತದೆ. ಫ್ಯಾಷನ್ ಜ್ಯುವೆಲ್ಲರಿ ಮೇಲೆ ಶೇ 70ರಷ್ಟು ರಿಯಾಯಿತಿ ಘೋಷಿಸಲಾಗಿದ್ದು, ಭಾರಿ ಬೇಡಿಕೆ ಹುಟ್ಟಿಹಾಕಿದೆ.

ಇದಲ್ಲದೆ ಫ್ಲಿಪ್ ಕಾರ್ಟ್ ಅಪ್ಲಿಕೇಷನ್ ಮೂಲಕ ಕೂಡಾ ಹೆಚ್ಚಿನ ಆಫರ್ ಗಳು ಗ್ರಾಹಕರಿಗೆ ಸಿಗಲಿವೆ. ಗೃಹೋಪಯೋಗಿ ಸಾಮಾಗ್ರಿಗಳು, ಮಿಕ್ಸರ್, ಗ್ರೈಂಡರ್, ಏರ್ ಕಂಡಿಷನರ್, ಒವನ್, ಅಡುಗೆ ಪರಿಕರಗಳ ಮೇಲೂ ರಿಯಾಯಿತಿ ಸಿಗಲಿದೆ.

ಇನ್ನು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಖರೀದಿಸಲು ಬಯಸುವವರಿಗೆ ಲೆನೆವೋ ಎ 6000 ಪ್ಲಸ್ ಮೇಲೆ 500 ರು ಕಡಿತ, ವಿನಿಮಯ ಮಾಡಿಕೊಂಡರೆ 2000 ರು ಇಳಿಕೆ ಆಫರ್ ಇದೆ, ಮೋಟೋರೋಲಾ ಜಿ ಮೇಲೆ 4000 ರು ವಿನಿಮಯದಲ್ಲಿ ಇಳಿಕೆಯಾಗಲಿದೆ,. ನೆಕ್ಸಸ್ 6 29.999 ರುಗೆ ಮೈಕ್ರೋಮ್ಯಾಕ್ಸ್ ಎಲ್ ಇಡಿ ಟಿವಿ 14,999 ರು ಟಾಪ್ ಟ್ರೆಂಡಿಂಗ್ ಎನಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+