ಫ್ಲಿಪ್ ಕಾರ್ಟ್ ನಲ್ಲಿ ಸಾಫ್ಟ್ ಬ್ಯಾಂಕ್ ವಿಷನ್ ಫಂಡ್ ನಿಂದ ಹೂಡಿಕೆ

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ಆಗಸ್ಟ್ 10: ಜಪಾನ್ ನ ಸಾಫ್ಟ್ ಬ್ಯಾಂಕ್ ವಿಷನ್ ಫಂಡ್ ನಿಂದ ಭಾರತದ ಇ ಕಾಮರ್ಸ್ ಕಂಪನಿ ಫ್ಲಿಪ್ ಕಾರ್ಟ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂದು ಗುರುವಾರ ಫ್ಲಿಪ್ ಕಾರ್ಟ್ ಘೋಷಿಸಿದೆ. ಎಷ್ಟು ಮೊತ್ತ ಎಂಬ ಸಂಗತಿಯನ್ನು ಬಯಲು ಮಾಡಿಲ್ಲ. ಆದರೆ ಇದು ಖಾಸಗಿ ವಲಯದಲ್ಲಿನ ಅತಿ ದೊಡ್ಡ ಹೂಡಿಕೆ ಆಗಲಿದೆ ಎಂಬ ಅಂದಾಜಿದೆ.

ಫ್ಲಿಫ್ ಕಾರ್ಟ್ ವಿಲೀನ ಪ್ರಕ್ರಿಯೆಯಿಂದ ಹಿಂದೆ ಸರಿದ ಸ್ನ್ಯಾಪ್ ಡೀಲ್

ಸಾಫ್ಟ್ ಬ್ಯಾಂಕ್ ವಿಷನ್ ಫಂಡ್ ಜಗತ್ತಿನಲ್ಲೇ ಅತಿ ದೊಡ್ಡದಾದ ತಾಂತ್ರಿಕ ಕೇಂದ್ರಿತ ಇನ್ವೆಸ್ಟ್ ಮೆಂಟ್ ಫಂಡ್ ಆಗಿದ್ದು, ಈ ಬಂಡವಾಳ ಹೂಡಿಕೆ ಮೂಲಕ ಫ್ಲಿಪ್ ಕಾರ್ಟ್ ನ ಅತಿ ದೊಡ್ಡ ಷೇರುದಾರ ಆಗಲಿದೆ. ಇದರಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಬಂಡವಾಳ ಒಳಗೊಳ್ಳಲಿದೆ.

Flipkart gets 'monumental' investment from SoftBank Vision Fund

"ಟೆನ್ಸೆಂಟ್, ಇ ಬೇ ಮತ್ತು ಮೈಕ್ರೋಸಾಫ್ಟ್ ಕಂಪನಿಗಳ ಮೂಲಕ ಫ್ಲಿಪ್ ಕಾರ್ಟ್ ಬಂಡವಾಳ ಸಂಗ್ರಹಕ್ಕೆ ಮುಂದಾಗಿದೆ ಎಂದು ಘೋಷಿಸಿತ್ತು. ಅದರ ಭಾಗವಾಗಿ ಈ ಬಂಡವಾಳ ಹರಿದುಬರುತ್ತಿದೆ. ಫ್ಲಿಪ್ ಕಾರ್ಟ್ ಗೆ ಈ ಎಲ್ಲ ಬಂಡವಾಳ ಬಂದ ನಂತರ ಬ್ಯಾಲೆನ್ಸ್ ಶೀಟ್ ನಲ್ಲಿ ನಾಲ್ಕು ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ನಗದು ಹೆಚ್ಚುವರಿಯಾಗಿ ಇರಲಿದೆ.

Snapdeal rejected an offer of Rs. 4800 crore from Flipkart | Oneindia kannada

ಭಾರತದ ಇ ಕಾಮರ್ಸ್ ಕಂಪನಿ ಪಾಲಿಗೆ ಇದೊಂದು ಐತಿಹಾಸಿಕ ಒಪ್ಪಂದ ಎಂದು ಫ್ಲಿಪ್ ಕಾರ್ಟ್ ನ ಸಹ ಸಂಸ್ಥಾಪಕರು ಹೇಳಿದ್ದಾರೆ. "ಜಾಗತಿಕ ಮಟ್ಟದ ಕೆಲವೇ ದೇಶದ ಆರ್ಥಿಕತೆಯು ಈ ರೀತಿ ಬಂಡವಾಳವನ್ನು ಆಕರ್ಷಿಸುತ್ತದೆ. ಇ ಕಾಮರ್ಸ್ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರಬಲ ಶಕ್ತಿಯನ್ನು ಗುರುತಿಸಲಾಗಿದೆ" ಎಂದು ಫ್ಲಿಪ್ ಕಾರ್ಟ್ ನ ಬಿನ್ನಿ ಬನ್ಸಾಲ್ ಹಾಗೂ ಸಚಿನ್ ಬನ್ಸಾಲ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Indian e-commerce giant Flipkart on Thursday announced investments from Japnese giant SoftBank Vision Fund. While the numbers have not been revealed, the deal is touted to be the largest ever private investment in an Indian technology company.
Please Wait while comments are loading...