ವಂಚನೆ ಪ್ರಕರಣ: ಫ್ಲಿಪ್ ಕಾರ್ಟ್ ಸ್ಥಾಪಕರ ವಿರುದ್ಧ ಎಫ್ ಐಆರ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 28: ಇ ಕಾಮರ್ಸ್ ದಿಗ್ಗಜ ಫ್ಲಿಪ್ ಕಾರ್ಟ್ ಸ್ಥಾಪಕರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಬೆಂಗಳೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಬೆಂಗಳೂರಿನ ಉದ್ಯಮಿಯೊಬ್ಬರು ಫ್ಲಿಪ್ ಕಾರ್ಟ್ ಸ್ಥಾಪಕರಾದ ಬನ್ಸಾಲ್ ಹಾಗೂ ಸಂಸ್ಥೆಯ ಇತರರ ವಿರುದ್ಧ 9.96 ಕೋಟಿ ರು ವಂಚನೆ ಪ್ರಕರಣ ದಾಖಲಿಸಿದ್ದಾರೆ.

FIR lodged against Flipkart founders for 'cheating'

ಸಚಿನ್ ಹಾಗೂ ಬಿನ್ನಿ ಬನ್ಸಾಲ್ ವಿರುದ್ಧ ಸರಿಯಾಗಿ ಪೇಮೆಂಟ್ ಮಾಡಿಲ್ಲ ಎಂದು ಆರೋಪಿಸಿ ಸಿ ಸ್ಟೋರ್ ಎಂಬ ಮಳಿಗೆಯ ನವೀನ್ ಕುಮಾರ್ ಎಂಬುವರು ದೂರು ದಾಖಲಿಸಿದ್ದಾರೆ.

ಲ್ಯಾಪ್ ಟಾಪ್, ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಾರಾಟ ಮಾಡುವ ಸಿ ಸ್ಟೋರ್ ಸುಮಾರು 14 ಸಾವಿರಕ್ಕೂ ಅಧಿಕ ಲ್ಯಾಪ್ ಟಾಪ್ ಮಾರಾಟ ಮಾಡಿದೆ. ಫ್ಲಿಪ್ ಕಾರ್ಡ್ 1,480 ರಿಟರ್ನ್ಡ್ ವಸ್ತುಗಳಿಗೆ ಮಾತ್ರ ಪೇಮೆಂಟ್ ಮಾಡಿದೆ. ಇತರೆ ಶುಲ್ಕ, ಶಿಪ್ಪಿಂಗ್ ಶುಲ್ಕ ಪಾವತಿಸಿಲ್ಲ ಎಂದು ದೂರಲಾಗಿದೆ.

ಐಪಿಸಿ ಸೆಕ್ಷನ್ 420 ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಪೊಲೀಸರು, ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An FIR has been lodged against e-commerce giant Flipkart's founders and a few other company officials for allegedly "cheating" a businessman to the tune of Rs 9.96 crore, police said today.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ