Get Updates
Get notified of breaking news, exclusive insights, and must-see stories!

ಹಬ್ಬದ ಸೀಸನ್ ನಲ್ಲಿ ಕಾರು ಖರೀದಿ ಡಿಸ್ಕೌಂಟ್, ಆಫರ್, ಕಡಿಮೆ ಬಡ್ಡಿದರ

ಬೆಂಗಳೂರು, ಸೆಪ್ಟೆಂಬರ್ 10: ಕಾರು ಖರೀದಿ ಮಾಡಬೇಕು ಅಂತಿದ್ದೀರಾ? ಈಗ ಖರೀದಿ ಮಾಡಬಹುದಾ ಅಥವಾ ಇನ್ನೂ ಸ್ವಲ್ಪ ದಿನ ಕಾಯೋಣವಾ ಎಂಬ ಆಲೋಚನೆಯಲ್ಲಿ ಇದ್ದೀರಾ? ಯಾವ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳುವುದು ಅನ್ನುವ ಬಗ್ಗೆ ಕೂಡ ತಲೆ ಕೊರೆಯುತ್ತಿದೆಯಾ?

ಹಾಗಿದ್ದರೆ ಈ ಲೇಖನ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ದೊರಕಿಸಲಿದೆ. ಮುಖ್ಯವಾಗಿ ಯಾವ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳುವುದು ಎಂಬ ಬಗ್ಗೆ ತಿಳಿದುಕೊಂಡು ಬಿಡಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಕಾರು ಸಾಲದ ಮೇಲೆ ಪ್ರೊಸೆಸಿಂಗ್ ಶುಲ್ಕ ಸಂಪೂರ್ಣವಾಗಿ ತೆಗೆದಿದ್ದಾರೆ. ಇನ್ನು ಕಾರು ಸಾಲದ ಮೇಲಿನ ಬಡ್ಡಿ ದರವನ್ನು 8.7% (ಫಿಕ್ಸೆಡ್) ನಿಗದಿ ಮಾಡಿದ್ದು, ಡಿಜಿಟಲ್ ಮೂಲಕ ಅರ್ಜಿ ಹಾಕಿದರೆ 25 ಬೇಸಿಸ್ ಪಾಯಿಂಟ್ ಹೆಚ್ಚುವರಿ ವಿನಾಯಿತಿ ಇದೆ.

ವಿವಿಧ ಬ್ಯಾಂಕ್ ಗಳಲ್ಲಿ ವಿಚಾರಿಸಿ, ಆ ನಂತರ ನಿಮ್ಮ ಮುಂದೆ ಈ ಅಂಕಿ- ಅಂಶವನ್ನು ಇಡುತ್ತಿದ್ದು, ಇದಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಕಾರು ಖರೀದಿಗೆ ಸಾಲ ಸಿಗುವುದು ಅಸಾಧ್ಯ. ಇನ್ನೇನು ದಸರಾ ಹಬ್ಬ ಹತ್ತಿರ ಇರುವುದರಿಂದ ಎಲ್ಲ ಕಾರು ಕಂಪೆನಿಗಳು ಹಲವು ಮಾಡೆಲ್ ಗಳ ಮೇಲೆ ದೊಡ್ಡ ಮಟ್ಟದಲ್ಲಿ ರಿಯಾಯಿತಿ ಘೋಷಿಸಿವೆ. ಆರ್ಥಿಕ ಹಿಂಜರಿತದಿಂದ ಕಾರು ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿರುವುದು ಸಹ ಇದಕ್ಕೆ ಕಾರಣವಾಗಿದೆ.

Festive Season: Car Purchase Offer, Discount, Bank Loan

ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಾರು ಮಾರಾಟ ಮಾಡುವ ಮಾರುತಿ, ಹುಂಡೈ, ಹೋಂಡಾ, ಟೊಯೋಟಾ, ಮಹೀಂದ್ರಾ ಕಂಪೆನಿಗಳು ದೊಡ್ಡ ಮಟ್ಟದಲ್ಲೇ ರಿಯಾಯಿತಿ ನೀಡುತ್ತಿವೆ.

ಆಯ್ದ ಕಾರು ಮಾಡೆಲ್ ಗಳ ಮೇಲಿನ ವಿನಾಯಿತಿ ಪಟ್ಟಿ ಹೀಗಿದೆ:
ಕಾರು ಮಾಡೆಲ್ ನಗದು ರಿಯಾಯಿತಿ ಇತರ ರಿಯಾಯಿತಿ ಹೆಚ್ಚುವರಿ ಅನುಕೂಲ
ಮಾರುತಿ ಡಿಜೈರ್ ರು. 49,000 25,000 ವಾರಂಟಿ 5 ವರ್ಷ ವಿಸ್ತರಣೆ
ಮಾರುತಿ ಸ್ವಿಫ್ಟ್ (ಡೀಸೆಲ್) 43,000 25,000 ವಾರಂಟಿ 5 ವರ್ಷ ವಿಸ್ತರಣೆ
ಮಾರುತಿ ಸಿಯಾಜ್ - 70,0000
ಹುಂಡೈ ಐ 10 60,000 35,000 -
ಹೋಂಡಾ ಅಮೇಜ್ NA 30,000 ವಾರಂಟಿ 5 ವರ್ಷ ವಿಸ್ತರಣೆ, ಉಚಿತ ಇನ್ಷೂರೆನ್ಸ್
ಹೋಂಡಾ ಸಿಟಿ 32,000 30,000 NA
ಟೊಯೋಟಾ ಇನೋವಾ - - 1.25 ಲಕ್ಷ, 2018 ಮಾಡೆಲ್ ಮೇಲೆ
ರೆನಾಲ್ಟ್ ಡಸ್ಟರ್ - - ಫೇಸ್ ಲಿಫ್ಟ್ ಮುಂಚಿನ ಮಾಡೆಲ್ ಗಳ ಮೇಲೆ 1 ಲಕ್ಷ
ಮಹೀಂದ್ರಾ ಕೆಯುವಿ100 39,000 29,000 ರು. 5,000 ಆಕ್ಸೆಸರೀಸ್
ರೆನಾಲ್ಟ್ ಕ್ವಿಡ್ 10,000 10,000 4 ವರ್ಷ ವಾರಂಟಿ
ಡಾಟ್ಸನ್ ರೆಡಿ ಗೋ 25,000 12,000

ಬೆಂಗಳೂರಿನ ಜೆ. ಪಿ. ನಗರದಲ್ಲಿ ಇರುವ ರೆನಾಲ್ಟ್ ಡಸ್ಟರ್ ಶೋರೂಮ್ ನ ಸೇಲ್ಸ್ ಮನ್ ಒಬ್ಬರನ್ನು ಒನ್ ಇಂಡಿಯಾ ಕನ್ನಡ ಮಾತನಾಡಿಸಿತು. "ಫೇಸ್ ಲಿಫ್ಟ್ ಗೆ ಮುಂಚಿನ ಎರಡು ವೇರಿಯಂಟ್ ಗೆ ಒಂದಕ್ಕೆ ಒಂದು ಲಕ್ಷಕ್ಕೂ ಹೆಚ್ಚು, ಮತ್ತೊಂದಕ್ಕೆ ಎರಡು ಲಕ್ಷ ರುಪಾಯಿ ನಗದು ರಿಯಾಯಿತಿ ಇದೆ. ಅದು ನಮ್ಮ ಬಳಿ ಇರುವ ದಾಸ್ತಾನು ಮುಗಿಯುವ ತನಕ ಇರುತ್ತದೆ" ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+