ಜುಲೈ 2021ರವರೆಗೆ ಫೇಸ್‌ಬುಕ್ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ
ನವದೆಹಲಿ, ಆಗಸ್ಟ್ 07: ಕೊರೊನಾವೈರಸ್ ಸಾಂಕ್ರಾಮಿಕ ರೋಗವು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್ ತನ್ನ ನೌಕರರಿಗೆ ಜುಲೈ 2021ರವರೆಗೆ ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡುವಂತೆ ಸೂಚಿಸಿದೆ.
ಮನೆಯಿಂದಲೇ ಕೆಲಸ ಮಾಡುವುದರ ಜೊತೆಗೆ 1 ಸಾವಿರ ಅಮೆರಿಕನ್ ಡಾಲರ್ ಸಹ ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣದ ವಕ್ತಾರರು ತಿಳಿಸಿದ್ದಾರೆ. ಈ ಹಣದ ಮೂಲಕ ಅವರು ಮನೆಯಲ್ಲಿಯೇ ಕಚೇರಿಯ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಹಾಯವಾಗುತ್ತದೆ.

ಫೇಸ್‌ಬುಕ್ ಈ ನಿರ್ಧಾರವು ಇತ್ತೀಚೆಗೆ ಗೂಗಲ್ ಕಂಪನಿಯ ನಿರ್ಧಾರವನ್ನು ಬೆಂಬಲಿಸಿದಂತಿದೆ. ಅಲ್ಫಾಬೆಟ್ ಇಂಕ್‌ನ ಗೂಗಲ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಜುಲೈ 2021ರವರೆಗೆ ವರ್ಕ್ ಫ್ರಮ್ ಹೋಮ್ ಘೋಷಣೆಯನ್ನು ಮಾಡಿದ ಮೊದಲ ಕಂಪನಿಯಾಗಿತ್ತು.
ಟ್ವಟರ್ ಕೂಡ ತಮ್ಮ ಕೆಲವು ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ.












Click it and Unblock the Notifications