ಬೆಂಗಳೂರಿನ ಕಂಪನಿ ಖರೀದಿಸಿದ ಫೇಸ್ ಬುಕ್

ಬೆಂಗಳೂರು, ಜ.9: ಸಾಮಾಜಿಕ ಜಾಲ ತಾಣ ಕ್ಷೇತ್ರದ ದಿಗ್ಗಜ ಫೇಸ್ ಬುಕ್ ಇದೇ ಮೊದಲ ಬಾರಿಗೆ ಬೆಂಗಳೂರಿನ ಮೊಬೈಲ್ ಅಪ್ಲಿಕೇಷನ್ ತಯಾರಕ ಸಂಸ್ಥೆಯನ್ನು ಖರೀದಿಸಿದೆ. ಮೊಬೈಲ್ ಕ್ಷೇತ್ರದಲ್ಲಿ ಫೇಸ್ ಬುಕ್ ಜನಪ್ರಿಯತೆ ಹೆಚ್ಚಿಸಲು ಮುಂದಾಗಿರುವ ಫೇಸ್ ಬುಕ್ ಸಂಸ್ಥೆ ಈಗ ಲಿಟ್ಲ್ ಐ ಲ್ಯಾಬ್ಸ್ ಖರೀದಿ ಮಾಡಿದೆ.

ಫೇಸ್ ಬುಕ್ ಪ್ರಪ್ರಥಮ ಬಾರಿಗೆ ಭಾರತದ ಟೆಕ್ ಕಂಪೆನಿಯನ್ನು ಖರೀದಿಸಿದೆ.ಬೆಂಗಳೂರಿನ ಆಪ್ ತಯಾರಕ ಲಿಟ್ಲ್ ಐ ಲ್ಯಾಬ್ ಕಂಪೆನಿಯನ್ನು ಫೇಸ್ ಬುಕ್ ಖರೀದಿಸಿದ್ದು ಲಿಟ್ಲ್ ಐ ಲ್ಯಾಬ್ಸ್ ಈ ಮಾಹಿತಿಯನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ಗಿರಿಧರ್ ಮೂರ್ತಿ,ಕುಮಾರ್ ರಂಗರಾಜನ್,ಸತ್ಯಂ ಕಂಡುಲ ಮತ್ತು ಲಕ್ಷ್ಮಣ್ ‌ ಕಕ್ಕಿರ್ಲ ಎಂಬುವರು ಮೇ 2012ರಲ್ಲಿ ಲಿಟ್ಲ್ ಐ ಲ್ಯಾಬ್ ಕಂಪೆನಿಯನ್ನು ಆರಂಭಿಸಿದ್ದು, ಕುಮಾರ್ ರಂಗರಾಜನ್ ಕಂಪೆನಿಯ ಸಿಇಒ ಆಗಿದ್ದಾರೆ. ಈ ಪೈಕಿ ಗಿರಿಧರ್ ಮೂರ್ತಿ ಅವರು ಈ ಮುಂಚೆ Apple ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕುಮಾರ್ ರಂಗರಾಜನ್ ಅವರು ಐಬಿಎಂ, ಎಚ್ ಪಿಯಲ್ಲಿದ್ದರು, ಸತ್ಯಂ ಕಂಡುಲಾ ಅವರು ಐಐಟಿ ಖರಗ್ ಪುರದ ಹಳೆ ವಿದ್ಯಾರ್ಥಿ, ಲಕ್ಷ್ಮಣ್ ಕಕ್ಕಿರ್ಲ ಐಬಿಎಂ ಹಾಗೂ ಯಾಹೂಂ ಸಂಸ್ಥೆ ಮಾಜಿ ಉದ್ಯೋಗಿ.

Facebook makes its first Indian acquisition

ಲಿಟ್ಲ್ ಐ ಲ್ಯಾಬ್ಸ್ ಕಂಪೆನಿ ಮೊಬೈಲ್ ಅಪ್ಲಿಕೇಷನ್ ಗಳಿಗೆ ಸಂಬಂಧಿಸಿದ ಟೂಲ್ ಗಳನ್ನು ಅಭಿವೃದ್ಧಿ ಪಡಿಸುವ ಕಂಪೆನಿಯಾಗಿದ್ದು ಈ ಕಂಪೆನಿಯನ್ನು ಫೇಸ್ ಬುಕ್ ಖರೀದಿಸಲಿದೆ ಎನ್ನುವ ಸುದ್ದಿಯನ್ನು ಗಿಝ್ ಬಾಟ್ ಈ ಹಿಂದೆ ಪ್ರಕಟಿಸಿತ್ತು. ಮೊಬೈಲ್ ಅಪ್ಲಿಕೇಷನ್ ಮಾಡುವ ಆಪ್ ಡೆವಲಪರ್ ಗಳಿಗೆ ಉಂಟಾಗುವ ತೊಂದರೆಗಳಿಗೆ ಲಿಟ್ಲ್ ಐ ಲ್ಯಾಬ್ ಪರಿಹಾರ ಸೂಚಿಸುವ ಮೂಲಕ ಬೆಳಕಿಗೆ ಬಂದಿತ್ತು.

ಫೇಸ್ ಬುಕ್ ಸಂಸ್ಥೆ ನಮ್ಮ ಸಂಸ್ಥೆಯನ್ನು ಖರೀದಿಸಿದೆ ಎಂದು ಲಿಟ್ಲ್ ಐ ಲ್ಯಾಬ್ಸ್ ಸಹ ಸ್ಥಾಪಕ ಕುಮಾರ್ ರಂಗರಾಜನ್ ಅವರು ತಮ್ಮ ಬ್ಲಾಗ್ ಹಾಗೂ ಟ್ವಿಟ್ಟರ್ ನಲ್ಲಿ ಘೋಷಿಸಿದ್ದರು. ಮೊಬೈಲ್ ತಂತ್ರಾಂಶ ಅಭಿವೃದ್ಧಿಯತ್ತ ಸಂಸ್ಥೆಗಳು ಕಾರ್ಯ ನಿರ್ವಹಿಸಲಿದೆ ಎಂದಿದ್ದಾರೆ.

ಫೇಸ್ ಬುಕ್ ಸಂಸ್ಥೆಗೂ ಮೊದಲು ಹಲವು ಅಂತಾರಾಷ್ಟ್ರೀಯ ಕಂಪನಿಗಳು ಭಾರತ/ಬೆಂಗಳೂರಿನ ಸ್ಟಾರ್ ಅಪ್ ಕಂಪನಿಗಳನ್ನು ಖರೀದಿಸಿದ ಉದಾಹರಣೆಗಳಿವೆ. [ಎಸ್ಪಿಐ ತೆಕ್ಕೆಗೆ ನ್ಯೂಜೆರ್ಸಿ ಕಂಪನಿ]
* ಫೇಸ್ ಬುಕ್ : ಲಿಟ್ಲ್ ಐ ಲ್ಯಾಬ್ಸ್ (ಬೆಂಗಳೂರು ಮೂಲದ ಕಂಪನಿ)
* ಗೂಗಲ್ : ಫ್ಲಟ್ಟರ್ (ಭಾರತೀಯ ಸ್ಥಾಪಿಸಿದ ಅಮೆರಿಕ ಮೂಲದ ಸಂಸ್ಥೆ)
* ಲಿಂಕ್ಡ್ ಇನ್ : ಸ್ಲೈಡ್ ಶೇರ್ (ರಶ್ಮಿ ಸಿನ್ಹಾ ಸಹ ಸ್ಥಾಪನೆ ಸಂಸ್ಥೆ)
* ಕಂಡೆನ್ಸ್ ಡಿಸೈನ್ : ಕಾಸ್ಮಿಕ್ ಸರ್ಕ್ಯೂಟ್ಸ್ (ಬೆಂಗಳೂರು ಮೂಲದ ಸಂಸ್ಥೆ)
* ರೆಡ್ ಹ್ಯಾಟ್ : ಗ್ಲಸ್ಟರ್ (ಬೆಂಗಳೂರಿನಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಹೊಂದಿರುವ ಯುಎಸ್ ಸಂಸ್ಥೆ)
* ಸೇಲ್ಸ್ ಫೋರ್ಸ್ : ಡಿಮ್ ಡಿಮ್ (ಇಂಡೆಕ್ಸ್ ವೆಂಚರ್ಸ್, ನೆಕ್ಸಸ್ ಇಂಡಿಯಾ ಹಾಗೂ ಡ್ರಾಪರ್ ರಿಚರ್ಡ್ಸ್ ಸಹಯೋಗ ಸಂಸ್ಥೆ)

ಹೀಗಾಗಿ ಬೆಂಗಳೂರಿನ ಸ್ಟಾರ್ ಅಪ್ ಗಳು ಸಣ್ಣ ಪ್ರಮಾಣದ ಸಂಸ್ಥೆಗಳು ಜಾಗತಿಕ ಮಟ್ಟದ ದೊಡ್ಡ ದೊಡ್ಡ ಕಂಪನಿಗಳ ಗಮನ ಸೆಳೆಯುತ್ತಲೇ ಇವೆ. ಆದರೆ, ಇಲ್ಲಿನ ಸ್ಟಾರ್ ಅಪ್ ಕಂಪನಿಗಳಿಗೆ ಸ್ಥಳೀಯ ಸರ್ಕಾರದಿಂದ ಹೆಚ್ಚಿನ ಉತ್ತೇಜನ ಲಭ್ಯವಾಗಿಲ್ಲ ಎಂಬ ಕೊರಗು ಐಟಿ ವಲಯದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+