ಬ್ಯಾಂಕ್ ವಿಲೀನ.. ನಿಮ್ಮ ಅಕೌಂಟ್ ಈ ಬ್ಯಾಂಕ್‌ನಲ್ಲಿ ಇದ್ದರೆ ಮರೆಯದೇ ಈ ಸುದ್ದಿ ಓದಿ... Bank Merger
ಬ್ಯಾಂಕ್ ವಿಲೀನ.. ಈ ಸುದ್ದಿ ಕೇಳಿದ ತಕ್ಷಣ ಸಂಚಲನ ಸೃಷ್ಟಿ ಆಗುತ್ತದೆ. ಯಾಕಂದ್ರೆ ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್ ಜೊತೆಗೆ ವಿಲೀನ ಆಗುತ್ತಿದೆ ಎಂಬ ಸುದ್ದಿ ತಲ್ಲಣ ಸೃಷ್ಟಿ ಮಾಡುತ್ತದೆ. ಹೀಗೆ, ಬ್ಯಾಂಕ್ ವಿಲೀನದ ಸುದ್ದಿ ಕೇಳಿ ಸಾಕಷ್ಟು ದಿನಗಳೇ ಕಳೆದಿದೆ. ಆದರೆ ಇದೀಗ ಮತ್ತೊಂದು ಸುದ್ದಿಯು ಸಂಚಲನ ಸೃಷ್ಟಿ ಮಾಡುತ್ತಿದೆ. ಇಂತಹ ಸಮಯದಲ್ಲೇ ನಿಮಗೆ ಕೂಡ ಒಂದು ಅಲರ್ಟ್ ಬರುತ್ತಿದೆ. ಅಂದಹಾಗೆ, ನಿಮ್ಮ ಅಕೌಂಟ್ ಈ ಬ್ಯಾಂಕ್‌ನಲ್ಲಿ ಇದ್ದರೆ ಮರೆಯದೇ ಈ ಸುದ್ದಿ ಓದಿ...
ಭಾರತದ ಬ್ಯಾಂಕ್‌ಗಳು ಇಡೀ ಜಗತ್ತಿನಲ್ಲೇ ಹೆಸರು ಮಾಡಿವೆ, ಯಾಕಂದ್ರೆ ತಮ್ಮ ಆರ್ಥಿಕ ಶಿಸ್ತಿನಿಂದ ಪ್ರಪಂಚಕ್ಕೇ ಮಾದರಿ ಆಗಿವೆ ನಮ್ಮ ಭಾರತದ ಬ್ಯಾಂಕ್‌ಗಳು. ಅದರಲ್ಲೂ ಕನ್ನಡ ನಾಡಿನ, ಈ ಪೈಕಿ ಪ್ರಮುಖವಾಗಿ ಕರಾವಳಿ ಭಾಗದಲ್ಲಿ ಜನ್ಮ ಪಡೆದ ಬ್ಯಾಂಕ್‌ಗಳು ಇಂದಿಗೂ ಭಾರತೀಯ ಆರ್ಥಿಕತೆಯನ್ನ ಭದ್ರವಾಗಿ ನಿಲ್ಲುವಂತೆ ಮಾಡಿವೆ. ಇದರ ಜೊತೆಗೆ ಮೈಸೂರು ಮಹಾರಾಜರು ಸ್ಥಾಪಿಸಿದ್ದ ಮೈಸೂರು ಬ್ಯಾಂಕ್ ಕೂಡ ಆಧುನಿಕ ಭಾರತದಲ್ಲಿ ಆರ್ಥಿಕ ಅಭಿವೃದ್ಧಿಗೆ ಬಲಿಷ್ಠವಾದ ಬೆಂಬಲ ನೀಡಿತ್ತು. ಈ ಎಲ್ಲಾ ವಿಚಾರಗಳ ಮಧ್ಯೆ ಕರ್ನಾಟಕದ ಮೈಸೂರು ಬ್ಯಾಂಕ್ ಕೊನೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ವಿಲೀನವಾಗಿತ್ತು. ಇದೀಗ ಮತ್ತೊಮ್ಮೆ ಇದೇ ರೀತಿಯ ದೊಡ್ಡ ಬ್ಯಾಂಕ್ ವಿಲೀನ ಪ್ರಕ್ರಿಯೆಗೆ ಚಾಲನೆ ಸಿಗುವ ಮುನ್ಸೂಚನೆ ಸಿಕ್ಕಿದೆ!

ಯಾವೆಲ್ಲಾ ಬ್ಯಾಂಕ್‌ಗಳು ವಿಲೀನ ಆಗಬಹುದು?
ಕೇಂದ್ರ ಸರ್ಕಾರದ ಹೊಸ ಲೆಕ್ಕಾಚಾರದ ಪ್ರಕಾರ, ಮತ್ತೊಮ್ಮೆ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಶೀಘ್ರವೇ ನಡೆಯುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಬ್ಯಾಂಕ್ ಆಫ್ ಇಂಡಿಯಾ ಹಾಗು ಬ್ಯಾಂಕ್ ಆಫ್ ಮಹಾರಾಷ್ಟ್ರವನ್ನ ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿ & ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೀತಿಯ ದೊಡ್ಡ ದೊಡ್ಡ ಬ್ಯಾಂಕ್‌ಗಳ ಜೊತೆಗೆ ವಿಲೀನಗೊಳಿಸುವ ಪ್ರಸ್ತಾವನೆ ಸಿದ್ಧವಾಗಿದೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದ್ದು, ಈ ವಿಚಾರ ಇದೀಗ ಜಗತ್ತಿನ ಗಮನ ಸೆಳೆಯುತ್ತಿದೆ.
ಹೂಡಿಕೆ ಮಾಡುವವರ ಮೇಲೂ ಪರಿಣಾಮ?
ಒಟ್ನಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕ್‌ಗಳ ಪಾತ್ರ ಬಹುದೊಡ್ಡದು, ಅದರಲ್ಲೂ ಈ ರೀತಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಈ ಹಿಂದೆ ಕೂಡ ನಡೆದಿದೆ. ಇದೀಗ ಮತ್ತೊಮ್ಮೆ ಅದೇ ರೀತಿಯಾಗಿ ದೊಡ್ಡ ದೊಡ್ಡ ಬ್ಯಾಂಕ್‌ಗಳ ಜೊತೆಗೆ ಸಣ್ಣಪುಟ್ಟ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಡೆಯುತ್ತಾ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಒಂದಷ್ಟು ದಿನಗಳ ಕಾಲ ಕಾದು ನೋಡಬೇಕಿದೆ. ಮತ್ತೊಂದು ಕಡೆ ಈ ವಿಚಾರ ಹೂಡಿಕೆ ಮಾಡುವವರ ಮೇಲೆ ಕೂಡ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications