ಉದ್ಯೋಗ ಇಲ್ಲದ ಸಮಯದಲ್ಲಿ ಪಿಎಫ್ ಎಷ್ಟು ಡ್ರಾ ಮಾಡ್ಬಹುದು?

ಬೆಂಗಳೂರು, ಜೂನ್ 27: ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್ಒ) ತನ್ನ ನಿಯಮಗಳನ್ನು ಬದಲಾಯಿಸಿದ್ದು, ಇದರಿಂದ ಉದ್ಯೋಗ ಕಳೆದುಕೊಂಡವರಿಗೆ ಕೊಂಚ ನೆಮ್ಮದಿ ತಂದಿದೆ.

ಉದ್ಯೋಗ ಕಳೆದುಕೊಂಡ ಒಂದು ತಿಂಗಳ ನಂತರ ಎಷ್ಟು ಪ್ರಮಾಣದಲ್ಲಿ ಪಿಎಫ್ ವಿಥ್ ಡ್ರಾ ಮಾಡಬಹುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ ತನ್ನ ಭವಿಷ್ಯ ನಿಧಿ ಖಾತೆ (ಪಿಎಫ್)ಯಿಂದ ಶೇ. 75 ಹಣವನ್ನು ಪಡೆದುಕೊಳ್ಳುವ ಅವಕಾಶ ಕಲ್ಪಿಸಲು ಕಾರ್ವಿುಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್​ಒ) ನಿರ್ಧರಿಸಿದೆ.

ಉದ್ಯೋಗಿಗಳು ತಮ್ಮ ಖಾತೆಯಲ್ಲಿನ ಬಾಕಿ ಶೇ. 25 ಹಣವನ್ನು ಎರಡು ತಿಂಗಳ ನಿರುದ್ಯೋಗದ ನಂತರ ಪಡೆಯಬಹುದಾಗಿದೆ ಅಥವಾ ಸಂಪೂರ್ಣ ಹಣವನ್ನು ಪಡೆದು ಖಾತೆ ಮುಚ್ಚಲು ಕೂಡ ಅವಕಾಶ ನೀಡಲು ಇಪಿಎಫ್​ಒ ಮುಂದಾಗಿದೆ.

EPFO Members can now withdraw 75% of PF one month after job loss

ಭವಿಷ್ಯ ನಿಧಿ ಸದಸ್ಯರಿಗೆ ಈ ಅವಕಾಶ ನೀಡಲು 1952ರ ನೌಕರರ ಭವಿಷ್ಯ ನಿಧಿ ಯೋಜನೆಗೆ ತಿದ್ದುಪಡಿ ತರಲಾಗುವುದು. ಶೇ. 75 ಹಣ ಪಡೆದು ನಿರುದ್ಯೋಗಿ ತನ್ನ ಖಾತೆಯನ್ನು ಸಂಘಟನೆಯೊಂದಿಗೆ ಮುಂದುವರಿಸಬಹುದು. ಎರಡು ತಿಂಗಳು ಕೆಲಸ ಸಿಗದೆ ಇದ್ದಾಗ ಉಳಿದ ಹಣವನ್ನು ಪಡೆಯಬಹುದು ಎಂದು ಕಾರ್ವಿುಕ ಸಚಿವ ಸಂತೋಷ್ ಕುಮಾರ್ ಗಾಂಗ್ವಾರ್ ತಿಳಿಸಿದ್ದಾರೆ.

ಒಂದು ತಿಂಗಳ ನಿರುದ್ಯೋಗದ ಬಳಿಕ ಬೇರೆ ಕಡೆ ಕೆಲಸ ಸಿಕ್ಕಲ್ಲಿ ಸದಸ್ಯರು ತಮ್ಮ ಹಳೆಯ ಪಿಎಫ್ ಖಾತೆಯನ್ನು ಹೊಸ ಕಂಪನಿಗೆ ನೀಡಬಹುದಾಗಿದೆ. ಮಾಸಿಕ ಪಿಎಫ್ ಅದರಲ್ಲಿಯೇ ಜಮೆಯಾಗಲಿದೆ. ಸದ್ಯದ ನಿಯಮದಂತೆ ಎರಡು ತಿಂಗಳ ನಿರುದ್ಯೋಗದ ಬಳಿಕ ಮಾತ್ರ ಸದಸ್ಯರಿಗೆ ತಮ್ಮ ಪಿಎಫ್ ಖಾತೆಯಲ್ಲಿನ ಹಣ ಪಡೆಯಲು ಅವಕಾಶವಿದೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+