ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ಕ್ರಾಂತಿ, 3,877 ಕೋಟಿ ಲಾಭ ಗಳಿಸಿದ ಮಾರುತಿ ಸುಜುಕಿ!
ಮಾರುತಿ ಸುಜುಕಿ ಸಂಸ್ಥೆ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಎತ್ತರಕ್ಕೆ ಏರಿಸಿದ್ದು, ತನ್ನ ಹೊಸ ತ್ರೈಮಾಸಿಕ ಫಲಿತಾಂಶದಲ್ಲಿ ದಾಖಲೆ ನಿರ್ಮಾಣ ಮಾಡಿದೆ. ಈ ನಡುವೆ ತನ್ನ ವಾಹನಗಳ ಮಾರಾಟದಲ್ಲಿ ಕೂಡ ಮಾರುತಿ ಸುಜುಕಿ ಸಂಸ್ಥೆ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಹಾಗಾದರೆ ಮಾರುತಿ ಸುಜುಕಿ ಸಂಸ್ಥೆ ಗಳಿಸಿದ ಲಾಭ ಎಷ್ಟು? ಬನ್ನಿ ಮುಂದೆ ತಿಳಿಯೋಣ.
ಭಾರತ ಎಲ್ಲಾ ಕ್ಷೇತ್ರದಲ್ಲೂ ತನ್ನ ಹಿಡಿತ ಸಾಧಿಸಿದ್ದು, ವಿಜ್ಞಾನ & ತಂತ್ರಜ್ಞಾದಿಂದ ಹಿಡಿದು ಆಟೋಮೊಬೈಲ್ಸ್ ತನಕ ಎಲ್ಲಾ ಕಡೆಯೂ ಭಾರತವೇ ಹಿಡಿತ ಸಾಧಿಸುತ್ತಿದೆ. ಇನ್ನು ನಮ್ಮ ದೇಶ ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ಹೊರ ದೇಶಗಳಲ್ಲೂ ಭಾರಿ ದೊಡ್ಡ ಹೆಸರು ಪಡೆದಿದೆ. ಕ್ವಾಲಿಟಿ ಹಾಗೂ ಬೆಲೆಯ ವಿಚಾರದಲ್ಲಿ, ಭಾರತದಲ್ಲಿ ತಯಾರಾದ ವಾಹನಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದಾರೆ ವಿದೇಶಿಗರು. ಈ ಕಾರಣಕ್ಕೆ ಭಾರತದಿಂದ ವಾಹನಗಳ ರಫ್ತು ಕೂಡ ಜೋರಾಗಿದೆ. ಇದೇ ರೀತಿಯಾಗಿ ಇದೀಗ ಮಾರುತಿ ಸುಜುಕಿ ಸಂಸ್ಥೆ ರಫ್ತು ವಿಚಾರದ ಜೊತೆಗೆ ಲಾಭದ ವಿಚಾರದಲ್ಲೂ ಗಮನ ಸೆಳೆಯುತ್ತಿದೆ.

ನಂ. 1 ವಾಹನ ತಯಾರಿಕಾ ಸಂಸ್ಥೆ
ಮಾರುತಿ ಸುಜುಕಿ ಸಂಸ್ಥೆ ಭಾರತದ ಪ್ರಮುಖ ವಾಹನ ತಯಾರಿಕಾ ಕಂಪನಿ ಆಗಿದೆ. ಹೀಗೆ, ಮಧ್ಯಮ ವರ್ಗದಿಂದ ಹಿಡಿದು ಶ್ರೀಮಂತರ ತನಕ ಎಲ್ಲರಿಗೂ ಬೇಕಾದ ರೀತಿಯ ವಾಹನಗಳ ತಯಾರಿಕೆ ಮಾಡುತ್ತದೆ ಮಾರುತಿ ಸುಜುಕಿ ಸಂಸ್ಥೆ. ಅದ್ರಲ್ಲೂ ಕಳೆದ ಕೆಲವು ವರ್ಷಗಳಿಂದ ಮಾರುತಿ ಸುಜುಕಿ ವಾಹನಗಳಿಗೆ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಹಲವು ದೇಶಗಳಲ್ಲೂ ಬೇಡಿಕೆ ಹೆಚ್ಚಾಗುತ್ತಿದೆ. ಹೀಗೆ ತನ್ನ ಮಾರಾಟದಲ್ಲಿ, ಅಭಿವೃದ್ಧಿ ಸಾಧಿಸುತ್ತಿರುವ ಮಾರುತಿ ಸುಜುಕಿ ಇದೀಗ ಹೊಸ ತ್ರೈಮಾಸಿಕದಲ್ಲಿ ಭರ್ಜರಿ ಲಾಭ ಗಳಿಸಿದೆ.
ಮತ್ತೊಮ್ಮೆ ಭರ್ಜರಿ ಲಾಭ!
ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ 2023 ಹಾಗೇ 24ನೇ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ 3,877 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಲಾಭ ಕೂಡ ಭರ್ಜರಿಯಾಗಿ ಹೆಚ್ಚಾಗಿದ್ದು, ಈ ಸಿಹಿಸುದ್ದಿ ಹೂಡಿಕೆದಾರರಿಗೆ ಕೂಡ ಖುಷಿ ನೀಡಿದೆ. ಕಳೆದ ಬಾರಿ ಮಾರುತಿ ಸುಜುಕಿ ಸಂಸ್ಥೆ 2,623 ಕೋಟಿ ಲಾಭವನ್ನ ಗಳಿಸಿತ್ತು. 2023 & 24ನೇ ಸಾಲಿನಲ್ಲಿ 3,877 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. 2022 ಮತ್ತು 2023ರ ಇದೇ ಅವಧಿಯಲ್ಲಿ ಹೆಚ್ಚಿನ ಲಾಭ ಸಿಕ್ಕಿರಲಿಲ್ಲ. ಆದರೆ ಈ ಬಾರಿ, ಭರ್ಜರಿ ಲಾಭದ ಜೊತೆಗೆ ಮಾರಟದಲ್ಲಿಯೂ ಕ್ರಾಂತಿಕಾರಿ ಸುಧಾರಣೆ ಕಂಡುಬರುತ್ತಿದೆ. ಕಳೆದ ವರ್ಷಕ್ಕಿಂತಲು ಈ ಬಾರಿಯ ಲಾಭ ಶೇಕಡಾ 47.8ರಷ್ಟು ಏರಿಕೆ ಆಗಿದೆ.
ಹೀಗೆ ಮಾರುತಿ ಸುಜುಕಿ ಸಂಸ್ಥೆ ಭರ್ಜರಿಯಾಗಿ ಲಾಭ ಗಳಿಸುತ್ತಿರುವ ಕಾರಣಕ್ಕೆ ಷೇರುಪೇಟೆ ಕೂಡ ಭರ್ಜರಿ ಹುಮ್ಮಸ್ಸಿನಲ್ಲಿ ಇದೆ. ಅದ್ರಲ್ಲೂ ಇದೇ ಮೊದಲ ಬಾರಿ 2023 & 24ರ ಆರ್ಥಿಕ ವರ್ಷದಲ್ಲಿ ಕಂಪನಿ ವಾಹನಗಳ ಒಟ್ಟು ಮಾರಾಟ 20 ಲಕ್ಷ ದಾಟಿದೆ. ಸತತ 3ನೇ ವರ್ಷ ಕೂಡ, ಮಾರುತಿ ಸುಜುಕಿ ಸಂಸ್ಥೆ ದೇಶದ ಅತಿದೊಡ್ಡ ರಫ್ತುದಾರನಾಗಿ ಗುರುತಿಸಿಕೊಂಡಿದೆ. ಹೀಗಾಗಿ ಇದೀಗ ಮತ್ತೊಮ್ಮೆ ಷೇರು ಪೇಟೆಯಲ್ಲಿ ಮಾರುತಿ ಸುಜುಕಿ ಸಂಸ್ಥೆ ಸದ್ದು ಮಾಡುತ್ತಿದೆ. ಈಗ ದೇಶದ ಒಟ್ಟು ಪ್ರಯಾಣಿಕ ವಾಹನ ರಫ್ತಿನಲ್ಲಿ ಈ ಕಂಪನಿ ಶೇ. 41 ರಷ್ಟು ಪಾಲು ಹೊಂದಿದ್ದು, ಬಿಎಸ್‌ಇಯಲ್ಲಿ ಮಾರುತಿ ಸುಜುಕಿ ಕಂಪನಿ ಷೇರಿನ ಬೆಲೆ ₹12,687ಕ್ಕೆ ತಲುಪಿದೆ.












Click it and Unblock the Notifications