2018-19ನೇ ಸಾಲಿನ ನೇರ ತೆರಿಗೆ ಸಂಗ್ರಹದಲ್ಲಿ ಗಣನೀಯ ಹೆಚ್ಚಳ
ನವದೆಹಲಿ, ಡಿಸೆಂಬರ್ 10: ಪ್ರಸಕ್ತ ವರ್ಷದ ನೇರ ತೆರಿಗೆ ಸಂಗ್ರಹದ ಒಟ್ಟಾರೆ ಪ್ರಮಾಣವು ನವೆಂಬರ್ ವೇಳೆಗೆ 6.5 ಲಕ್ಷ ಕೋಟಿ ಮುಟ್ಟಿದ್ದು, ಕಳೆದ ವರ್ಷದ ಒಟ್ಟು ಸಂಗ್ರಹಕ್ಕೆ ಹೋಲಿಸಿದರೆ ಶೇ 15.7ರಷ್ಟು ಹೆಚ್ಚಳ ಕಂಡಿದೆ.
2018ರ ಏಪ್ರಿಲ್‌ನಿಂದ ನವೆಂಬರ್ ಅವಧಿಯಲ್ಲಿ 1.23 ಲಕ್ಷ ಕೋಟಿ ರೂ. ಹಣ ಮರುಪಾವತಿ (ರಿಫಂಡ್) ಆಗಿದ್ದು, ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದರೆ ಶೇ 20.8ರಷ್ಟು ಹೆಚ್ಚಳವಾಗಿದೆ.
ಮರುಪಾವತಿ ಹಣದ ಹೊಂದಾಣಿಕೆ ಬಳಿಕ ಒಟ್ಟು ಸಂಗ್ರಹವು ಶೇ 14.7ರ ಏರಿಕೆಯೊಂದಿಗೆ 5.51 ಲಕ್ಷ ಕೋಟಿ ರೂ.ಗೆ ತಲುಪಿದೆ.

ನೇರ ತೆರಿಗೆಯ ಆಯವ್ಯಯ ಅಂದಾಜಿನ ಶೇ 48ರಷ್ಟು ಒಟ್ಟು ಸಂಗ್ರಹದ ಮೂಲಕ ಸಿಗುತ್ತದೆ. 2018-19ನೇ ಹಣಕಾಸು ವರ್ಷಕ್ಕೆ 11.50 ಲಕ್ಷ ಕೋಟಿ ಇರಲಿದೆ.
ಕಾರ್ಪೊರೇಟ್ ಆದಾಯ ತೆರಿಗೆ (ಸಿಐಟಿ) ಮತ್ತು ಪ್ರೊಫೆಷನಲ್ ಆದಾಯ ತೆರಿಗೆ (ಪಿಐಟಿ) ಬೆಳವಣಿಗೆ ದರದಲ್ಲಿಯೂ ಸುಧಾರಣೆ ಕಂಡುಬಂದಿದೆ. ಸಿಐಟಿಯ ಒಟ್ಟು ಸಂಗ್ರಹ ಶೇ 17.7ರಷ್ಟಿದ್ದು, ಒಟ್ಟು ಬೆಳವಣಿಗೆ ಶೇ 18.4ರಷ್ಟಿದೆ. ಪಿಐಟಿಯು ಶೇ 18.3ರ ಒಟ್ಟು ಸಂಗ್ರಹ ಹೊಂದಿದ್ದು, ಶೇ 16ರಷ್ಟು ಒಟ್ಟು ಬೆಳವಣಿಗೆ ಇದೆ.












Click it and Unblock the Notifications